

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಷ್ಟ್ರದಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣ ಏರುತ್ತಿದೆ. ದೇಶದಲ್ಲಿ ಈವರೆಗೆ ಕರೋನಾ ಸೋಕಿತರ ಸಂಖ್ಯೆ ಹತ್ತು ಲಕ್ಷಗಳನ್ನು ದಾಟಿದೆ. ಕರೋನಾ ಸೋಂಕಿತರ ಸಾವಿನ ಪ್ರಮಾಣ 25 ಸಾವಿರ ಎನ್ನುವುದು ಆತಂಕದ ಸ್ಥಿತಿಗೆ ಹಿಡಿದ ಕೈಗನ್ನಡಿ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ವಾರ ಹಿಂದಿನ ಪ್ರಕರಣಗಳಷ್ಟು ಅಂದರೆ ಈವಾರದ ಸೋಂಕಿತರ ಸಂಖ್ಯೆ ಈ ಹಿಂದಿನ ಕೋವಿಡ್ ಬಾಧಿತರ ಸಂಖ್ಯೆಗೆ ಸಮಾನ ಎನ್ನುವುದು ಕರೋನಾ ಭೀಕರತೆಯ ಧ್ಯೋತಕ. ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡಂಕಿ ಸಂಖ್ಯೆಯ ಜನರಲ್ಲಿ ಕರೋನಾ ದೃಢವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುರುವಾರ ಸಿದ್ಧಾಪುರದ ಬೆಂಗಳೂರಿನಿಂದ ಮರಳಿದ್ದ ವ್ಯಕ್ತಿಯಲ್ಲಿ ಸೋಂಕು ದೃಢವಾಗಿ ಅವರ ಸಂಪರ್ಕದ ಬಿಳಗಿ ಜನರನ್ನು ಕಂಗಾಲು ಮಾಡಿತ್ತು. ಇಂದು ಕೂಡಾ ಬಿಳಗಿಗೆ ಹೊರದೇಶದಿಂದ ಮರಳಿದ್ದ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿದ್ದು ಈ ವ್ಯಕ್ತಿಗೂ ನಿನ್ನೆಯ ಸೋಂಕಿತರ ಸಂರ್ಕದ ವ್ಯಕ್ತಿಗೂ ಸಂಬಂಧ ಇಲ್ಲ ಎನ್ನಲಾಗಿದೆ.
ಇಂದು ಕರೋನಾ ದೃಢಪಟ್ಟ ವ್ಯಕ್ತಿ ವಿದೇಶದಿಂದ ಮರಳುತಿದ್ದಾಗ ಕುಮಟಾದಲ್ಲಿ ಸ್ವಾಬ್ ಮಾದರಿ ನೀಡಿ ಮನೆಗೆ ಮರಳಿದ್ದರು. ಹಾಗಾಗಿ ಈ ವ್ಯಕ್ತಿಯ ಕೋವಿಡ್ ದೃಢಪಟ್ಟ ದಾಖಲೆ ಕುಮಟಾ ತಾಲೂಕಿನ ಪಟ್ಟಿಸೇರಲಿದೆ. ಆದರೆ ಈ ಸೋಂಕಿತ ಚಿಕಿತ್ಸೆಗೆ ಸಿದ್ಧಾಪುರದ ಕೋವಿಡ್ ವಾರ್ಡ್ ಸೇರಿದ್ದು ಇವರ ಪ್ರಾಥಮಿಕ ಸಂಪರ್ಕದ ವ್ಯಕ್ತಿ ಮತ್ತು ಗುರುವಾರ ಸೋಂಕಿತನಾಗಿ ಬುಧವಾರ ಹುಟ್ಟುಹಬ್ ಾಆಚರಿಸಿಕೊಂಡ ವ್ಯಕ್ತಿಯ ಸಂಪರ್ಕದ ಜನರು
ಬಿಳಗಿ ಜನರಆಾತಂಕ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.
