

ಉತ್ತರ ಕನ್ನಡ ಜಿಲ್ಲೆಯ ಕರೋನಾ ಕೇಸ್ ಗಳ ನಾಗಾಲೋಟಕ್ಕೆ ಸಾಕ್ಷಿಯಾಗುವಂತೆ ಇಂದು ಜಿಲ್ಲೆಯ 79 ಜನರಲ್ಲಿ ಕೋವಿಡ್ ದೃಢ ಪಟ್ಟಿದೆ.

ಹಳಿಯಾಳ,ದಾಂಡೇಲಿಗಳಲ್ಲಿ 35,ಭಟ್ಕಳ 11, ಮುಂಡಗೋಡು 8 ಕಾರವಾರ 7, ಕುಮಟಾ5, ಶಿರಸಿ,ಹೊನ್ನಾವರ,ಯಲ್ಲಾಪುರಗಳಲ್ಲಿ ತಲಾ ಒಂದು ಹಾಗೂ ಸಿದ್ಧಾಪುರದ ಮೂವರಲ್ಲಿ ಕರೋನಾ ದೃಢಪಟ್ಟಿದೆ.
ಸಿದ್ಧಾಪುರದ ಕೊರ್ಲಕೈ ಪಂಚಾಯತ್ ನ ಆಡುಕಟ್ಟಾ, ಬೇಡ್ಕಣಿ ಮತ್ತು ಹಾರ್ಸಿಕಟ್ಟಾ ಪಂಚಾಯತ್ ಗಳ ತಲಾ ಒಬ್ಬರಲ್ಲಿ ಕರೋನಾ ದೃಢ ಪಟ್ಟಿದೆ. ಈ ಪಂಚಾಯತ್ಗಳ ಮೂರೂ ಪ್ರದೇಶಗಳಲ್ಲಿ ಕಂಟೇನ್ ಮೆಂಟ್ ಪ್ರದೇಶ ಎಂದು ಘೋಶಿಸಲಾಗಿದ್ದು ಈ ಮೂರೂ ಪ್ರಕರಣಗಳ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಿಗೆ ಕಾರಂಟೈನ್ ಮಾಡಲಾಗಿದೆ.
ಸಿದ್ದಾಪುರ
ಕರೊನಾ ವೈರಸ್ ಎಲ್ಲ ಕಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ನಾಡಿನ ಪ್ರಸಿದ್ದ ಉಂಚಳ್ಳಿ ಜಲಪಾತ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾ ಡಲಾಗಿದೆ.
ನಿತ್ಯ ಸಾವಿರಾರು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿರುವುದರಿಂದ ಸ್ಥಳೀಯ ಜನತೆ ಆತಂಕ ವ್ಯಕ್ತಪಡಿಸಿದ್ದರಿಂದ ಗ್ರಾಮ ಅರಣ್ಯ ಸಮಿತಿ ಉಂಚಳ್ಳಿ ಸಾರ್ವಜನಿಕರ ಒತ್ತಾಯದ ಮೇರೆಗೆ ಜಲಪಾತ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ ಮಾಡಲು ತೀರ್ಮಾನಿಸಿ ಜೋಗಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿದೆ. ಪ್ರವಾಸಿಗರು ಸಹಕರಿಸುವಂತೆ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಿದ್ದಾಪುರ; ಫೇಸ್‍ಬುಕ್‍ನಲ್ಲಿ ಬಸವ ಪ್ರಿಯಾ ಉಮೇಶ ಕುಮಾರಎನ್ನುವಖಾತೆ ಹೊಂದಿರುವವ್ಯಕ್ತಿಜಾತಿನಿಂದನೆ, ಧರ್ಮನಿಂದನೆ ಮಾಡಿ ಅವಹೇಳನಕಾರಿ ಪೋಸ್ಟ್ ಮಾಡಿದನ್ನು ಖಂಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉತ್ತರಕನ್ನಡಜಿಲ್ಲಾ ವೀರಶೈವ, ಜಂಗಮ, ಅರ್ಚಕರು ಮತ್ತು ಪರೋಹಿತ ಸಂಘವು ತಹಶೀಲ್ದಾರ ಹಾಗೂ ಪೋಲಿಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದೆ. ಇಂತಹಕೃತ್ಯವು ನಾವು ಶ್ರದ್ಧಾ ಭಕ್ತಿಯಿಂದಆರಾಧಿಸುವ ಹಾಗೂ ಪಾಲಿಸುವ ವೈದಿಕ ಪರಂಪರೆಗೆಅಪಮಾನ ಮಾಡಿದಂತೆ.ಇಂತಹ ಬರಹ ಸಮಾಜದಲ್ಲಿ ಶಾಂತಿಕದಡಿ ಗಲಭೆಗೆ ಪ್ರಚೋದಿಸಿದಂತಾಗುತ್ತದೆ.ಕಾರಣ ಸೈಬರ್‍ಕ್ರೈಮ್‍ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ನಮ್ಮಜಾತಿ, ಧರ್ಮ, ವೃತ್ತಿ , ಸಂಸ್ಕೃ ತಿ ಕಾಪಾಡಿಕೊಳ್ಳಲು ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈಸಂರ್ಭದಲ್ಲಿಉತ್ತರಕನ್ನಡಜಿಲ್ಲಾ ವೀರಶೈವ, ಜಂಗಮ, ಅರ್ಚಕರು ಮತ್ತು ಪರೋಹಿತ ಸಂಘದಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿಮಠ, ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಶಾಸ್ತ್ರಿ ಹಾಗೂ ಇತರರಿದ್ದರು.
ಸಿದ್ದಾಪುರ
ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯಕ್ಕೆ ಜು.8ರಿಂದ ಅನಿರ್ಧಿಷ್ಠಾವಧಿಯವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿ ಸಿದೆ.
ನಾಡಿನಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ವ್ಯಾಪಕವಾಗಿ ಹರಿಡುತ್ತಿದ್ದು ಸಮುದಾಯಕ್ಕೆ ಹರಡುವ ಬೀತಿ ಇರುವ ಹಿನ್ನೆಲೆಯಲ್ಲಿ ಭುವನಗಿರಿ ಭುವನೇಶ್ವರಿ ಅಡಳಿತ ಮಂಡಳಿ ಸರ್ವಾನುಮತದಿಂದ ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ದೇವಾಲಯದ ಪ್ರವೇಶ ಅನಿರ್ಧಿಷ್ಠಾವಧಿಯವರೆಗೆ ನಿರ್ಬಂಧಿಸಿದ್ದಲ್ಲದೇ ಈ ಸಮಯದಲ್ಲಿ ದೇವರಿಗೆ ಯಾವುದೇ ಸೇವಾ ಅವಕಾಶ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
