ಸಿದ್ದಾಪುರದ ನೆಟ್ಟ ಗೋಡು (ಬಿಳೇಗೋಡು,ದೊಡ್ಮನೆ ಬಳಿ) ಎಂಬಲ್ಲಿ ಮಹಿಳೆಯೊಬ್ಬರ ಕೊಲೆಯಾಗಿದ್ದು ಕಲ್ಲಿನಿಂದ ಜಜ್ಜಿ ಕೊಲೆಮಾಡಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಕೊಲೆಯಾದವರನ್ನು ವಿಧವೆ ಗೌರಿ ನಾಯ್ಕ್ ಎನ್ನಲಾಗಿದೆ.
ಇಂದು ಸಿದ್ದಾಪುರದಲ್ಲಿ ಮೂರು ಜನರಲ್ಲಿ ಕರೋನಾ ದೃಢವಾಗಿದ್ದು ಹೊಸೂರು, ಹೆಗ್ಗಾರಳ್ಳಿ, ನಗರದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಒಬ್ಬರಲ್ಲಿ ಕರೋನಾ ದೃಢವಾಗಿದೆ. ಗೋ ಳ ಗೋಡಿನ ಒಬ್ಬರಲ್ಲಿ ಕರೋನಾ ದೃಢವಾಗಿದ್ದು ಅವರ ಹೆಸರು ಶಿವಮೊಗ್ಗ ಜಿಲ್ಲೆಯ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ದಾಖಲಾಗಿದೆ ಎನ್ನಲಾಗಿದೆ.