

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ದಾಖಲೆಯ 108 ಜನರಲ್ಲಿ ಕರೋನಾ ದೃಢಪಟ್ಟಿದ್ದು ಜಿಲ್ಲೆಯ ಕರೋನಾ ಇತಿಹಾಸದಲ್ಲಿ ಈ ಸಂಖ್ಯೆ ಗರಿಷ್ಠ.
ಒಂದೆರಡು ತಿಂಗಳುಗಳ ಹಿಂದೆ ಒಂದಂಕಿಯಿಂದ ಪ್ರಾರಂಭವಾದ ಜಿಲ್ಲೆಯ ಕೋವಿಡ್ ಪ್ರಾರಂಭ ನಂತರ ಎರಡಂಕಿಗೆ ಬಂದು ಇದೇ ತಿಂಗಳು ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಇಂದು 108 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಜಿಲ್ಲೆಯ ಕರೋನಾ ಸೋಂಕಿತರ
ದಿನದ ಸಂಖ್ಯೆ ಮೂರಂಕಿ ದಾಟಿದಂತಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 1272 ಜನರಲ್ಲಿ ಕರೋನಾ ದೃಢಪಟ್ಟಿದ್ದು ಸಂಪೂರ್ಣ ಗುಣಮುಖರಾದವರ ಸಂಖ್ಯೆ 742, ಇಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 44, ಶಿರಸಿ 22, ಹೊನ್ನಾವರ 13, ಭಟ್ಕಳ5,ಮುಂಡಗೋಡು 6, ಕುಮಟಾ7, ಯಲ್ಲಾಪುರ 1 ಕಾರವಾರದಲ್ಲಿ8 ಜನರಲ್ಲಿ ಕೋವಿಡ್ ದೃಢಪಟ್ಟಿದೆ.
ಸಿದ್ದಾಪುರ ವರದಿ-
ಜಿಲ್ಲೆಯ ಕೋವಿಡ್ ಪಟ್ಟಿಯಲ್ಲಿ ಇಂದಿನ ಸಿದ್ಧಾಪುರದ ಒಂದು ಪ್ರಕರಣ ಸೇರಿ 109 ಪ್ರಕರಣ ಎಂದು ದಾಖಲಾಗಿದೆ ಎನ್ನಲಾಗಿದೆ. ವಾಸ್ತವದಲ್ಲಿ ಸಿದ್ಧಾಪುರದಲ್ಲಿ ಇಂದು ಯಾವುದೇ ಪ್ರಕರಣವಿಲ್ಲ. ಹಾಗಾಗಿ ಜಿಲ್ಲೆಯ 109 ಪ್ರಕರಣಗಳ ಬದಲು 108 ಎನ್ನುವ ಬಗ್ಗೆ ಆರೋಗ್ಯ ಇಲಾಖೆ ದೃಢಪಡಿಸಬೇಕಿದೆ. ಸೋಮವಾರ ಸಿದ್ಧಾಪುರದ ಹಾರ್ಸಿಕಟ್ಟಾದ ವ್ಯಕ್ತಿಯೊಬ್ಬರಲ್ಲಿ ಕರೋನಾ ದೃಢಪಟ್ಟಿದ್ದು ಇಂದು ಯಾವುದೇ ಪ್ರಕರಣವಿಲ್ಲ ಎಂದು ತಾಲೂಕಾ ಆಡಳಿತ ದೃಢಪಡಿಸಿದೆ.
