ರಾಜ್ಯ ವಿಧಾನ ಪರಿಷತ್ ಗೆ 5 ಜನರನ್ನು ನೇಮಕಮಾಡಿದ ಆದೇಶವನ್ನು ಸರ್ಕಾರ ಮಾಡಿದೆ. ಸರ್ಕಾರ ವಿ.ಪ. ಗೆ ನೇಮಕ ಮಾಡಿದ ವ್ಯಕ್ತಿಗಳು ಮತ್ತು ಕ್ಷೇತ್ರ ಹೀಗಿವೆ.
ಎಚ್. ವಿಶ್ವನಾಥ (ಸಾಹಿತ್ಯ) ಸಿ.ಪಿ. ಯೋಗೇಶ್ವರ್ (ಸಿನೆಮಾ) ಡಾ.ಸಾಬಣ್ಣ ತಳವಾರ (ಶಿಕ್ಷಣ) ಭಾರತೀಶೆಟ್ಟಿ (ಸಮಾಜಸೇವೆ) ಶಾಂತರಾಮ ಸಿದ್ದಿ (ವಿಶಿಷ್ಟ ಸೇವಾ ಕ್ಷೇತ್ರ)
ಸಿ.ಪಿ. ಯೋಗೇಶ್ವರ್ – ಮಾಜಿ ಸಚಿವ – ರಾಮನಗರ ಜಿಲ್ಲೆ- ಒಕ್ಕಲಿಗ ಸಮುದಾಯ – ಸಿನೆಮಾ ಕ್ಷೇತ್ರ ಜೊತೆಗೆ ಮಾಜಿ ಸಿಎಂ ಹೆಚ್ಡಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರಗೆ ಗೌಡರ ಸಾಮ್ರಾಜ್ಯದಲ್ಲಿ ಟಕ್ಕರ್ ನೀಡುವ ತಂತ್ರಗಾರಿಕೆ
ಎಚ್. ವಿಶ್ವನಾಥ್- ಮಾಜಿ ಸಚಿವ – ಮೈಸೂರು ಜಿಲ್ಲೆ – ಕುರುಬ ಸಮುದಾಯ- ಸಾಹಿತ್ಯ ಕ್ಷೇತ್ರ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದನಿ ಎತ್ತುವ ಸಾಮರ್ಥ್ಯ ಇರೋ ನಾಯಕ
ಭಾರತಿ ಶೆಟ್ಟಿ- ಮಾಜಿ ವಿಧಾನ ಪರಿಷತ್ ಸದಸ್ಯೆ- ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ- ಶಿವಮೊಗ್ಗ ಜಿಲ್ಲೆ- ಸಮಾಜ ಸೇವೆ ಕ್ಷೇತ್ರ
ಶಾಂತಾರಾಮ ಸಿದ್ದಿ- ಬುಡಕಟ್ಟು ಸಮುದಾಯ- ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಘಟನೆಯಲ್ಲಿ ಸಕ್ರೀಯ – ಉತ್ತರ ಕನ್ನಡ ಜಿಲ್ಲೆ- ವಿಶಿಷ್ಟ ಸೇವಾ ಕ್ಷೇತ್ರ
ಪ್ರೊ. ಸಾಬಣ್ಣ ತಳವಾರ- ಕೋಲಿ ಸಮುದಾಯ- ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ ಪ್ರೊಫೆಸರ್- ಕಲ್ಬುರ್ಗಿ ಜಿಲ್ಲೆ- ಶಿಕ್ಷಣ ಕ್ಷೇತ್ರ