

ರಾಜ್ಯದಾದ್ಯಂತ ಲಾಕ್ ಡೌನ್ ತೆರವು ಮಾಡಲಾಗಿದ್ದು ಸರ್ಕಾರ ಲಾಕ್ ಡೌನ್ ನೀತಿಯಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಜಿಲ್ಲಾಡಳಿತದ ಗಮನಕ್ಕೆ ತಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತ ಬಂದ್, ಲಾಕ್ ಡೌನ್ ಮಾಡಲಾಗಿತ್ತು. ಆದರೆ ಈಗ ಜಿಲ್ಲಾವ್ಯಾಪ್ತಿಯಲ್ಲಿ ಏಕರೂಪದ ನೀತಿ-ನಿಯಮ ಜಾರಿಗೆ ಸರ್ಕಾರ ಆದೇಶಿಸಿದೆ ಎನ್ನಲಾಗಿದೆ. ಈ ಹೊಸ ನಿಯಮದ ಹಿನ್ನೆಲೆಯಲ್ಲಿ ಸಿದ್ಧಾಪುರ, ಉತ್ತರಕನ್ನಡ ಜಿಲ್ಲೆ, ಸೇರಿದಂತೆ ರಾಜ್ಯದಾದ್ಯಂತ ಜಿಲ್ಲಾ ವ್ಯಾಪ್ತಿಯಲ್ಲಿ ಏಕರೂಪದ ನೀತಿ-ರೀತಿ,ನಿಯಮ ಜಾರಿಮಾಡಲಾಗುತ್ತಿದೆ.
ಈ ಕಾರಣದಿಂದ ಇಂದು ಸಿದ್ಧಾಪುರ ಸೇರಿದಂತೆ ಬಹುತೇಕ ಕಡೆ ಇದ್ದ ಅರ್ಧದಿನ ಬಂದ್, ಸ್ವಯಂ ಪ್ರೇರಿತ ಲಾಕ್ ಡೌನ್ ತೆರವು ಮಾಡಲಾಗಿದೆ.
ಸಿದ್ಧಾಪುರದಲ್ಲಿ ವಾರದ ಸಂತೆಯ ದಿವಸವಾದ ಇಂದು ದಿನಕ್ಕಿಂತ ಹೆಚ್ಚು ಜನಸಂದಣಿ ಇತ್ತು. ಮಧ್ಯಾಹ್ನ 2 ಗಂಟೆಯ ಮೊದಲು ಖರೀದಿ ಮುಗಿಸಬೇಕೆಂದು ಧಾವಂತಕ್ಕೆ ಬಿದ್ದ ಜನ ಸಾಮಾಜಿಕ ಅಂತರ ಮರೆತು ಸಂತೆಯ ಸಾಮಾನು ಖರೀದಿ ಮಾಡಿದರು. ಆದರೆ ಮಧ್ಯಾಹ್ನ ಒಂದು ಗಂಟೆಯ ನಂತರ ನಗರದಲ್ಲಿ ಸ್ವಯಂ ಪ್ರೇರಿತ ಬಂದ್ ತೆರವುಮಾಡಿ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ವ್ಯಾಪಾರ ವಹಿವಾಟು ಮಾಡಬಹುದೆನ್ನುವ ಘೋಶಣೆ ಮಾಡಲಾಯಿತು. 2 ಗಂಟೆಯ ನಂತರ ಸ್ವಯಂ ಪ್ರೇರಿತ ಬಂದ್ ಎನ್ನುವ ಮನೋಸ್ಥಿತಿಯಲ್ಲಿದ್ದ ಜನರು ಈ ಘೋಷಣೆ ನಡುವೆ ಮನೆಯತ್ತ ಪಾದ ಬೆಳೆಸಿದರು.
ವ್ಯಾಪಾರಿಗಳು ಈ ಸ್ವಯಂಪ್ರೇರಿತ ಬಂದ್ ತೆರವಿನಿಂದ ವ್ಯಾಪಾರ ಮಾಡುವ ಮನಸ್ಥಿತಿಯಲ್ಲಿದ್ದರೂ ಜನರಿಲ್ಲದ ಸಂತೆಯಿಂದಾಗಿ ವ್ಯಾಪಾರ ಮಾಡಲಾಗಲಿಲ್ಲ. ಜಿಲ್ಲಾಡಳಿತ ದಿಢೀರನೇ ಈ ಪ್ರಕಟಣೆ ಮಾಡಿ ಘೋಶಿಸಿದ್ದರಿಂದ ಜನರಿಗೆ ಗೊಂದಲ ಉಂಟಾಯಿತು ಎನ್ನುವ ಅಭಿಪ್ರಾಯ ಕೇಳಿ ಬಂತು. ಜಿಲ್ಲೆಯ ಇತರ ತಾಲೂಕುಗಳಲ್ಲೂ ಇಂಥದ್ದೇ ಗೊಂದಲ ಆಗಿರುವ ಸುದ್ದಿಯಿದೆ.
ನಾಳೆ ವಿದ್ಯುತ್ ವ್ಯತ್ಯಯ-
ಕಳೆದ10 ದಿವಸಗಳಿಂದ ಅರ್ಧ ದಿನ ಬಂದ್ ಮಾಡಿದ್ದ ಸಿದ್ಧಾಪುರದ ಜನತೆಗೆ ಜುಲೈ 23 ರ ಗುರುವಾರ ಮತ್ತೆ ಸ್ವಯಂ ಪ್ರೇರಿತ ಬಂದ್ ಅನುಭವ ನೀಡಲಿದೆ. ಸ್ಥಳಿಯ ಹೆಸ್ಕಾಂ ಉಪವಿಭಾಗೀಯ ಕಛೇರಿ ನಾಳೆಯ ಗುರುವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರ ವರೆಗೆ ವಿರ್ವಹಣೆ, ದುರಸ್ತಿ ಹಿನ್ನೆಲೆಯಲ್ಲಿ ವಿದ್ಯುತ್ ನಿಲುಗಡೆ ಮಾಡುತ್ತಿದೆ. ಸರ್ಕಾರಿ ರಜಾ ದಿನಗಳಲ್ಲಿ, ವಿದ್ಯುತ್ ವ್ಯತ್ಯಯದ
ದಿನ ಸಿದ್ಧಾಪುರ ಸ್ವಯಂ ಪ್ರೇರಿತ ಬಂದ್ ಸ್ಥಿತಿಯಲ್ಲಿರುವುದು ಇಲ್ಲಿಯ ವಾಸ್ತವ.
ಏಕರೂಪ ನೀತಿ-ನಿಯಮ- ಕರೋನಾ ಕಾರಣದಿಂದ ತಾಲೂಕಿಗೊಂದು ಜಿಲ್ಲೆಗೊಂದು ನಿಯಮಗಳಿಂದಾಗಿ ರಾಜ್ಯದಲ್ಲಿ ಅವ್ಯವಸ್ಥೆ ತಾಂಡವಾಡುವಂತಾಗಿದೆ. ಕರೋನಾ ಜಾಗೃತಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶ, ನಗರ, ತಾಲೂಕು, ಜಿಲ್ಲಾಸ್ಥಳಗಳ ಭೇದವಿಲ್ಲದೆ ನಾನಾ ಕಡೆ ವಿಭಿನ್ನ ನಿಯಮ ರೀತಿ- ನೀತಿ ಅನುಸರಿಸಲಾಗುತ್ತಿದೆ. ಇಂಥ ತಲಾಗೊಂದು ತೀರ್ಮಾನ, ನಿರ್ಧಾರಗಳಿಂದಾಗಿ ಗೊಂದಲ ಉಂಟಾಗುತಿದ್ದು ಇಂಥ ಗೊಂದಲ ನಿವಾರಿಸಲು ರಾಜ್ಯದಲ್ಲಿ ಸರ್ಕಾರ ಏಕರೂಪದ ನೀತಿ- ನಿಯಮಗಳಿಗೆ ಸೂಚಿಸಿದೆ.
ಸಿದ್ಧಾಪುರದ ಮನ್ಮನೆಯ ಗ್ರಾಮ ಸಮೀತಿ ಕಟ್ಟುಪಾಡು, ನೀತಿಸಂಹಿತೆ ಹಿನ್ನೆಲೆಯಲ್ಲಿ ಕರೋನಾಕ್ಕೆ ಸಂಬಂಧಿಸಿದಂತೆ ತೋಚಿದಂತೆ ಮಾಡಲು ಅವಕಾಶವಿಲ್ಲ. ಜಿಲ್ಲೆಯಲ್ಲಿ ಜಿಲ್ಲಾಡಳಿತದ ನಿಯಮಗಳು ಅನ್ವಯಿಸುತ್ತವೆ. ಜಿಲ್ಲಾಡಳಿತದ ನೀತಿ-ನಿರೂಪಣೆಗೆ ವ್ಯತಿರಿಕ್ತವಾಗಿ
ಸ್ಥಳಿಯ ನೀತಿ-ನಿಯಮ ರೂಪಿಸುವಂತಿಲ್ಲ ಎಂದು ಮಂಗಳವಾರ ಶಿರಸಿ ಉಪವಿಭಾಗಾಧಿಕಾರಿ ಸಿದ್ಧಾಪುರದಲ್ಲಿ ಸೂಚ್ಯವಾಗಿ ಹೇಳಿದ್ದರು. ಇಂದು ಈ ಬಗ್ಗೆಸರ್ಕಾರ ಮತ್ತು ಜಿಲ್ಲಾಡಳಿತದ ಅಧೀಕೃತ ಪ್ರಕಟಣೆ ಹೊರಬಿದ್ದಿದೆ ಎನ್ನಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಪರ್ಯಾಯವಾಗಿ ಸ್ಥಳೀಯ ಸಂಘಟನೆಗಳು ತೀರ್ಮಾನಿಸುತಿದ್ದ ರೀತಿ- ನೀತಿಗಳಿಗೆ ಈ ಹೊಸ ಆದೇಶದಿಂದ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

