

ಹಳಿಯಾಳದಲ್ಲಿ 50 ಸೇರಿ ಜಿಲ್ಲೆಯಲ್ಲಿ ಇಂದು 83 ಜನರಲ್ಲಿ ಕರೋನಾ ದೃಢಪಟ್ಟಿದ್ದರೆ, ಚಿಕಿತ್ಸೆ ಪಡೆಯುತಿದ್ದ 89 ಜನರು ಗುಣಮುಖರಾಗಿ ಡಿಸ್ ಚಾರ್ಜ್ ಆಗಿದ್ದಾರೆ.
ಎರಡು ದಿವಸಗಳ ಬಿಡುವಿನ ನಂತರ ಸಿದ್ದಾಪುರದಲ್ಲಿ 2 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರ ಕನ್ನಡದಲ್ಲಿ ಪ್ರತಿದಿನ ಮೂರಂಕಿ ದಾಟುವ ಸೋಂಕಿತರ ಸಂಖ್ಯೆ ಮುಂದುವರಿದಿದೆ ಎನ್ನಲಾಗಿದೆ. ಈ ವಾರ ಹಳಿಯಾಳ, ದಾಂಡೇಲಿ ಜನರನ್ನು ಹೆದರಿಸಿದ ಕರೋನಾ ಘಟ್ಟದ ಮೇಲೆ ಆತಂಕ ಹೆಚ್ಚಿಸಿದೆ. ಸಿದ್ದಾಪುರದಲ್ಲಿ ಬಿಳಗಿಯ ಸೋಂಕಿತನ ಪತ್ನಿ ಮತ್ತು ಸೋಂಕಿತನನ್ನು ಕುಮಟಾ ದಿಂದ ಕರೆತಂದು ಪ್ರಾಥಮಿಕ ಸಂಪರ್ಕಕ್ಕೊಳ ಪಟ್ಟಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಬಿಳಿಗಿ ಜನರನ್ನು ಎಚ್ಚರಿಸಿದೆ.
ಬಿಳಗಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಸೋಂಕಿತನ ಸಂಪರ್ಕದ ಜನರಲ್ಲಿ ಈವರೆಗೆ ಕರೋನಾ ದೃಢ ಪಟ್ಟಿಲ್ಲ ಎನ್ನುವ ಸುದ್ದಿಯಿದೆ. ಉಳಿದಂತೆ ಜಿಲ್ಲೆಯ ಕೆಲವು ತಾಲೂಕುಗಳನ್ನು ಸೇರಿ ಒಟ್ಟೂ 83 ಜನರಲ್ಲಿ ಕರೋನಾ ದೃಢಪಟ್ಟಿದೆ. ಹಳಿಯಾಳ50,ಭಟ್ಕಳ8
