

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 88 ಜನರಲ್ಲಿ ಕರೋನಾ ದೃಢವಾಗಿದ್ದು ಕುಮಟಾದಲ್ಲಿ 30,ಶಿರಸಿಯಲ್ಲಿ 23, ಹಳಿಯಾಳ14, ಮುಂಡಗೋಡು 07, ಸಿದ್ಧಾಪುರ 4, ಭಟ್ಕಳ 3, ಹೊನ್ನಾವರ 4, ಜೊಯಡಾ2, ಅಂಕೋಲಾದಲ್ಲಿ 1, ಜನರಲ್ಲಿ ಕರೋನಾ ದೃಢಪಟ್ಟಿದೆ.
ಕುಮಟಾ ಹೋಟೆಲ್ ಒಂದರ ಕಾರ್ಮಿಕರು ಸೇರಿ ಒಟ್ಟೂ 30 ಜನರಲ್ಲಿ ಕರೋನಾ ದೃಢಪಟ್ಟವರಲ್ಲಿ ಸಿದ್ಧಾಪುರದ 2 ಜನ ಸೇರಿದ್ದಾರೆ ಎನ್ನಲಾಗಿದೆ.
ಸಿದ್ಧಾಪುರ ಕೊರ್ಲಕೈ ಪಂಚಾಯತ್ ನೆಲ್ಲಿಕೊಪ್ಪ, ಸೋವಿನಕೊಪ್ಪ ಪಂಚಾಯತ್ ನ ಗದ್ದೆಮನೆ, ಬಿಳಗಿಯ ಕಳೂರು, ಶಿರಳಗಿ ಪಂಚಾಯತ್ ನ ಮುಗದೂರಿನ ತಲಾ ಒಬ್ಬರಲ್ಲಿ ಕರೋನಾ ದೃಢಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ.
