ಉತ್ತರ ಕನ್ನಡ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇಂದು ಜಿಲ್ಲೆಯ ಇತಿಹಾಸದಲ್ಲೇ ಅತಿಹೆಚ್ಚು ಒಟ್ಟೂ 162 ಜನರಲ್ಲಿ ಕರೋನಾ ದೃಢಪಟ್ಟಿದೆ. ಎಂದಿನಂತೆ ಭಟ್ಕಳ,ಹಳಿಯಾಳ (ದಾಂಡೇಲಿ) ಗಳಲ್ಲಿ ಕ್ರಮವಾಗಿ 55,45 ಜನರಲ್ಲಿ ಕರೋನಾ ದೃಢಪಟ್ಟಿದೆ. ಉಳಿದಂತೆ ಅಂಕೋಲಾದಲ್ಲಿ 16, ಹೊನ್ನಾವರ-8, ಕಾರವಾರ 12,ಶಿರಸಿ-11,ಜೊಯಡಾ-02, ಸಿದ್ಧಾಪುರ ಯಲ್ಲಾಪುರಗಳಲ್ಲಿ ತಲಾ ಒಂದು ಸೇರಿ ಒಟ್ಟೂ 162 ಜನರಲ್ಲಿ ಕರೋನಾ ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ1668 ಜನರಲ್ಲಿ ಕರೋನಾ ದೃಢಪಟ್ಟಿದ್ದು ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಒಟ್ಟೂ846 ಜನ ಗುಣಮುಖರಾಗಿದ್ದಾರೆ.
ಸಿದ್ಧಾಪುರದ ತಪ್ಪು ವರದಿ- ಈವರೆಗೆ ಸಿದ್ಧಾಪುರದಲ್ಲಿ 29 ಜನರು ಸೋಂಕಿತರಾಗಿದ್ದು ಅವರಲ್ಲಿ ಇಂದು ಗುಣಮುಖರಾದ 4 ಜನರು ಸೇರಿ ಒಟ್ಟೂ 17 ಜನರು ಗುಣಮುಖರಾಗಿ 12 ಜನ ಸ್ಥಳಿಯ ಕೋವಿಡ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಇಂದು ಹಾಗೂ ಈ ವಾರದ ಎರಡು ದಿವಸ ಸಿದ್ಧಾಪುರದ ಒಂ ದೂ ಪ್ರಕರಣಗಳಿರದಿದ್ದರೂ ಆರೋಗ್ಯ ಇಲಾಖೆಯ ವರದಿಯಲ್ಲಿ ಪ್ರತಿದಿನ ಒಂದು ಪ್ರಕರಣ ಎಂ ದು ವರದಿ ಮಾಡಲಾಗಿದೆ.