

ಸಿದ್ಧಾಪುರದ ಉದ್ಯಮಿ ಪೆಟ್ರಿಕ್ ಡಿ ಸಿಲ್ವಾ ಕಾರು ಕುಮಟಾದಲ್ಲಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಗಿದೆ. ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಸಿದ್ಧಾಪುರದಿಂದ ಕಾರವಾರಕ್ಕೆ ತೆರಳುತಿದ್ದ ಪೆಟ್ರಿಕ್ ಡಿ ಸಿಲ್ವಾರ ಮಾರುತಿ ಕಾರು ಕುಮಟಾ ಬಳಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಯಿತು.
ಕಾರಿನಲ್ಲಿ ಪೆಟ್ರಿಕ್ ಅವರ ಮಗ, ಚಾಲಕ ಮತ್ತೊಬ್ಬರು ಅಧಿಕಾರಿ ಇದ್ದರು. ಈ ನಾಲ್ಕೂ ಜನರಿಗೆ ತರುಚಿದ ಗಾಯಗಳಾದರೂ ಹೆಚ್ಚಿನ ಅನಾಹುತ ದಿಂದ ಪಾರಾದಂತಾಗಿದೆ. ಕಾರಿನ ಮುಂಭಾಗ ಜಖಂ ಗೊಂಡಿದ್ದು ಕಾರನಲ್ಲಿದ್ದ ಯಾರಿಗೂ ತೊಂದರೆಯಾಗದಿರುವುದು ಆಶ್ಚರ್ಯ, ನಾವೆಲ್ಲರೂ ಆರೋಗ್ಯವಾಗಿದ್ದೇವೆ ಎಂದು ಪೆಟ್ರಿಕ್ ಸಮಾಜಮುಖಿಗೆ ತಿಳಿಸಿದ್ದಾರೆ.



