ಕಳೆದ ವಾರದ ವರೆಗೆ ಕಳೆದ ತಿಂಗಳು ಪೂರ್ತಿ ಉ.ಕ.ದಲ್ಲಿ ಬರೋಬ್ಬರಿ ಸಾವಿರ ಕ್ಕಿಂತ ಹೆಚ್ಚು ಜನರಲ್ಲಿ ದೃಢವಾಗಿದ್ದ ಕರೋನಾ ಈ ವಾರ,ತಿಂಗಳ ಮಳೆಯ ಆರ್ಭಟ ನೋಡಿ ತನ್ನ ರುದ್ರ ನರ್ತನ ಕಡಿಮೆ ಮಾಡಿದಂತಿದೆ.
ಕಳೆದ ಜುಲೈ ತಿಂಗಳ ಹಿಂದಿನ ವಾರದ ವರೆಗೆ ಎರಡಂಕಿಯಿಂದ ಮೂರಂಕಿಗೆ ಜಿಗಿದಿದ್ದ ಕರೋನಾ ಸೋಂಕಿತರ ದಿನದ ಸಂಖ್ಯೆ ಈ ವಾರ ಮತ್ತೆ ಎರಡಂಕಿಗೆ ಇಳಿದಿದೆ. ರವಿವಾರ 24 ಜನರಲ್ಲಿ, ಇಂದು ಸೋಮುವಾರ 31 ಜನರಲ್ಲಿ ಕರೋನಾ ದೃಢಪಟ್ಟಿದೆ. ಭಟ್ಕಳ, ಶಿರಸಿಗಳಲ್ಲಿ ಭಯ ಹುಟ್ಟಿಸುವಂತೆ ಮಿತಿಮೀರಿದ್ದ ಕರೋನಾ ಸೋಕಿತರ ಸಂಖ್ಯೆ ಈ ವಾರ ಇಳಿಕೆ ಕ್ರಮದಲ್ಲಿ ಸಾಗಿದೆ. ಈವರೆಗೆ ಜಿಲ್ಲೆಯ 30ಜನರು ಕೋವಿಡ್ 19 ನಿಂದ ಮೃತರಾಗಿದ್ದು 25 ಜನರ ಹೆಸರು ಉ.ಕ. ಜಿಲ್ಲೆಯ ಪಟ್ಟಿಯಲ್ಲಿದೆ.ಹಳಿಯಾಳ,ದಾಂಡೇಲಿಗಳಲ್ಲಿ ಇಂದಿನ 20 ಸೋಂಕಿತರು ಸೇರಿ ಈವರಗೆ ದೊಡ್ಡಪ್ರಮಾಣದ ಕರೋನಾ ಸೋಂಕಿತರ ಸಂಖ್ಯೆ ದಾಖಲಾಗಿದೆ.
ಕಳೆದ ವಾರದ ಕೊನೆಯಿಂದ ಜಿಲ್ಲೆಯ 12 ತಾಲೂಕುಗಳ ಕೋವಿಡ್ ಕೇರ್ ಕೇಂದ್ರಗಳು ಬಣಗುಡುತಿದ್ದು ಈ ವಾರದ ಮಳೆಯ ನಂತರ ಹೊರ ಊರುಗಳಿಂದ ಬರುವವರ ಪ್ರಮಾಣ ಶೂನ್ಯಕ್ಕಿಳಿದರೆ ಜಿಲ್ಲೆಯ ಕರೋನಾ ಸೋಂಕಿತರ ಪ್ರಮಾಣ ಗಣಣೀಯವಾಗಿ ಇಳಿಯುವ ಸಾಧ್ಯತೆ ಹೆಚ್ಚು.
ಟೈಂಪಾಸ್ ಕಷ್ಟವಾಗಿ ಗೋಳಾಡುತ್ತಿರುವ ಕರೋನಾ ರೋಗಿಗಳು-
ಕಳೆದ ತಿಂಗಳು ಏರಿಕೆಕ್ರಮದಲ್ಲಿ ಸಾಗಿದ್ದ ಕರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಅನಿವಾರ್ಯತೆ ಹೆಚ್ಚಿಸಿತ್ತು. ಈಗ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸಿದ್ಧಾಪುರ ಸೇರಿದಂತೆ ಕೆಲವು ತಾಲೂಕುಗಳ ಕೋವಿಡ್ ಕೇರ್ ಕೇಂದ್ರಗಳಲ್ಲಿ ಒಂದು-ಎರಡು ಜನರು ಜೊತೆಗೆ ಪೊಲೀಸರನ್ನು ಬಿಟ್ಟರೆ ಇಡೀ ಕೇಂದ್ರಕ್ಕೆ ಕೇಂದ್ರವೇ ಬಿಕೋ ಎನ್ನುವ ಸ್ಥಿತಿ ಇದೆ. ಕರೋನಾ ಪೀಡಿತರಾಗಿ ಮಾನಸಿಕವಾಗಿ ಕುಸಿದಿರಬಹುದಾದ ರೋಗಿಗಳಿಗೆ ಈ ಒಂಟಿತನ, ಟೈಂಪಾಸ್ ನಡೆಯದ ಕಷ್ಟದ ಸಮಯವಾಗಿದ್ದು ಕರೋನಾ ಸೋಂಕಿತರು ಖಿನ್ನತೆಗೆ ಜಾರುವ ಅಪಾಯ ಹೆಚ್ಚಾಗಿದೆ. ಹಾಗಾಗಿ ಕರೋನಾ ಸೋಕಿತರಿಗೆ ಅವಶ್ಯವಿರುವ ಮನೆಯ ವಾತಾವರಣ ಸೃಷ್ಟಿ ಈಗ ಜಿಲ್ಲಾಡಳಿತಕ್ಕೆ ತಲೆನೋವಿನ ಕೆಲಸವಾಗಿದೆ.