ಸ್ಯಾಂಡಲ್ವುಡ್’ನ ಎವರ್ ಗ್ರೀನಾ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ ಅವರು ಅಭಿನಯದ 101ನೇ ಚಿತ್ರ ಶಿವಾಜಿ ಸೂರತ್ಕಲ್ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆಕಂಡು ಜನರ ಮೆಚ್ಚಿಗೆ ಗಳಿಸಿತ್ತು. ಇದೀಗ ಈ ಚಿತ್ರ ಆನ್ಲೈನ್ ಫ್ಲಾಟ್ಫಾಮ್’ನಲ್ಲೂ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ.

ಆಗಸ್ಟ್ 7 ರಂದು ಜೀ5 ನಲ್ಲಿ ಒಟಿಟಿ ಫಾರ್ಮ್ಯಾಟ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಆರಂಭದಲ್ಲಿ ಚಿತ್ರ ನಿರ್ಮಾಪಕರಾದ ಅನುಪ್ ಗೌಡ ಮತ್ತು ರೇಖಾ ಕೆ.ಎನ್ ಅವರು ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಚಿತ್ರಮಂದಿರಗಳಲ್ಲಿ ರಿರಿಲೀಸ್ ಮಾಡುವುದಾಗಿ ಹೇಳಿದ್ದರು. ಆದರೆ, ಕೊರೋನಾ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಪದೇ ಪದೇ ಹೇರಲಾಗುತ್ತಿದ್ದು, ಚಿತ್ರಮಂದಿರಗಳು ಪುನರಾರಂಭಗೊಳ್ಳದ ಹಿನ್ನೆಲೆಯಲ್ಲಿ ಚಿತ್ರವನ್ನು ಆನ್’ಲೈನ್ ಪ್ಲಾಟ್’ಫಾರ್ಮ್ ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಶಿವಾಜಿ ಸೂರತ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿತ್ತು. ರಮೇಶ್ ಅರವಿಂದ್, ಆರೋಪಿ, ರಾಧಿಕಾ ನಾರಾಯಣ್, ಅವಿನಾಶ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಮೂವಿಯಾಗಿದೆ. (kpc)