

ಮಲೆನಾಡಿನಲ್ಲಿ ಮುಂದುವರಿದ ಮಳೆ ಮಲೆನಾಡು-ಕರಾವಳಿ ಭಾಗಗಳಲ್ಲಿ ಪ್ರವಾಹ ಮುಂದುವರಿಸಿದೆ. ಕರಾವಳಿಭಾಗದಲ್ಲಿ ಕೆಲವೆಡೆ ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ ಈ ವಾರದ ಮಳೆ ಭತ್ತ-ಅಡಿಕೆ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದೆ. ಶಿರಸಿಯ ಮೊಗವಳ್ಳಿಯಲ್ಲಿ ವರದಾನದಿ ಪ್ರವಾಹ ನುಗ್ಗಿ ಅಲ್ಲಿಯ ಜನರು ಕಾಳಜಿ ಕೇಂದ್ರ ಸೇರಿದ್ದಾರೆ.
ಸಿದ್ಧಾಪುರದ ವಾಟಗಾರಿನ ಹೊಳೆ ಭತ್ತದ ಗದ್ದೆಗಳಿಗೆ ನುಗ್ಗಿ ನೂರಾರು ಎಕರೆ ಭತ್ತದ ಬೆಳೆ ನಾಶ ಮಾಡಿದೆ. ಪ್ರತಿವರ್ಷ ನೆರೆಬರುವ ಸಿದ್ಧಾಪುರದ ಅಕ್ಕುಂಜಿ ಭಾಗದಲ್ಲಿ ನೂರಾರು ಎಕರೆ ಜಲಾವೃತ್ತವಾಗಿದೆ. ಇಲ್ಲಿಯ ಗೋಳಗೋಡು-ಕಲ್ಯಾಣಪುರ ರಸ್ತೆ ನೀರಿನಲ್ಲಿ ಮುಳುಗಿ ಸಂಚಾರಕ್ಕೆ ವ್ಯತ್ತಯವಾಗಿದೆ.
ಕಾಗೋಡು ಭೇಟಿ-
ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶ,ಕಡಲಕೊರೆತದ ಸ್ಥಳಗಳಿಗೆ ಉ.ಕ. ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪ್ರವಾಹ ಪ್ರದೇಶದ ಪರಿಶೀಲನೆ ನಡೆಸಿದ್ದಾರೆ.
90 ವರ್ಷಗಳ ಸಾಗರದ ಮಾಜಿ ಶಾಸಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಇಂದು ಸಾಗರದ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಮಾಡಿದರು.ಸಾವಿರಾರು ಎಕರೆ ಪ್ರದೇಶ ಜಲಾವೃತ್ತವಾಗಿರುವ ಮಂಡಗಳಲೆ, ಸುಳ್ಳೂರು, ಕಾಗೋಡು, ಯಲಕುಂದ್ಲಿ, ಹಿರೇನೆಲ್ಲೂರು, ಕಾಂದ್ಲೆಗಳ ಪರಿಸ್ಥಿತಿ ಅವಲೋಕಿಸಿದ ಅವರು ಈ ಜನರಿಗೆ ಸರ್ಕಾರ ನೆರವಾಗಬೇಕು ಎಂದು ಆಗ್ರಹಿಸಿದರು.




