

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಸಿದ್ಧಾಪುರ ಬ್ಲಾಕ್ ಅಧ್ಯಕ್ಷರಾಗಿ ವಸಂತ ಎಲ್.ನಾಯ್ಕ ಮಳಲವಳ್ಳಿ ನೇಮಕವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಶೀರ್ವಾದವಿಲ್ಲದೆ ಹುಲ್ಲುಕಡ್ಡಿ ಕೂಡಾ ಅಲುಗಾಡಲ್ಲ ಎನ್ನುವ ಅಭಿಪ್ರಾಯವಿದ್ದ ಸಂದರ್ಭದಲ್ಲಿ ವಸಂತನಾಯ್ಕ ಈಗ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.


ವಸಂತ ನಾಯ್ಕ ಗ್ರಾ.ಪಂ.ಸದಸ್ಯರಾಗಿ, ನಂತರ ತಾಲೂಕಾ ಪಂಚಾಯತ್ ಸದಸ್ಯರಾಗಿ ತಾಲೂಕಾ ಪಂಚಾಯತ್ ನ ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಕೆಲಸಮಾಡಿದ್ದವರು. ಈ ಅವಧಿಯ ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ನಿಂದ ವಂಚಿತರಾಗಿದ್ದ ವಸಂತ ಪತ್ನಿ ಸುಮಂಗಲಾ ನಾಯ್ಕ ಸ್ವತಂತ್ರವಾಗಿ ಆಯ್ಕೆ ಆಗಿ ಜಿ.ಪಂ. ಸದಸ್ಯರಾಗುವ ಹಿಂದೆ ವಸಂತ ಸಂಘಟನಾ ಶಕ್ತಿ ಕೆಲಸ ಮಾಡಿತ್ತು. ತಾಲೂಕು ಜಿಲ್ಲೆಯ ಆರ್. ವಿ.ದೇಶಪಾಂಡೆ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ವಸಂತನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರೊಂದಿಗೆ ಕೂಡಾ ಅಂಥಾ ಉತ್ತಮ ಸಂಬಂಧ- ಸಂಪರ್ಕ ಇಟ್ಟುಕೊಂಡವರಲ್ಲ ವಸಂತ ನಾಯ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗುವ ಹಿಂದೆ ನಿವೇದಿತ್ ಆಳ್ವ ಅಥವಾ ಸುಷ್ಮಾ ರಾಜಗೋಪಾಲರೆಡ್ಡಿ ಅವರ ಕೈವಾಡವಿದೆ ಎನ್ನಲಾಗಿದೆ.
