

ಉತ್ತರ ಕನ್ನಡ ಜಿಲ್ಲೆಯ 58 ಜನರಲ್ಲಿ ಇಂದು ಕರೋನಾ ಸೋಂಕು ದೃಢಪಟ್ಟಿದ್ದು ಹಳಿಯಾಳದಲ್ಲಿ 18, ಕುಮಟಾ,ಸಿದ್ಧಾಪುರಗಳಲ್ಲಿ ತಲಾ 7, ಕಾರವಾರ ಹೊನ್ನಾವರಗಳಲ್ಲಿ ತಲಾ1, ಭಟ್ಕಳದಲ್ಲಿ 8,ಶಿರಸಿಯಲ್ಲಿ ಆರು ಜನರಲ್ಲಿ ಕರೋನಾ ದೃಢಪಟ್ಟಿದೆ.
ದಾಂಡೇಲಿ,ಹಳಿಯಾಳದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರುತಿದ್ದು ಶಿರಸಿ, ಸಿದ್ಧಾಪುರ ಜೊಯಡಾಗಳಲ್ಲಿ ಕೂಡಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕರಾವಳಿಯಲ್ಲಿ ಜನರನ್ನು ಕಂಗಾಲುಮಾಡಿದ ಕರೋನಾ ಘಟ್ಟದ ಮೇಲಿನ ಪ್ರದೇಶದಲ್ಲಿ ಏರಿಕೆಯಾಗುವ ಸೂಚನೆ ನೀಡಿದಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸುಮಾರು 3ಸಾವಿರ ಜನರಿಗೆ ಕೋವಿಡ್19 ಹರಡಿದ್ದು ಇದರಿಂದ ನಿಧನರಾದವರ ಸಂಖ್ಯೆ 30 ಕ್ಕೂ ಹೆಚ್ಚು. ಸಂಪೂರ್ಣ ಗುಣಮುಖರಾದವರ ಸಂಖ್ಯೆ 2.5 ಸಾವಿರದಷ್ಟು.
ಸಿದ್ಧಾಪುರದ ವರದಿ-
ಸಿದ್ಧಾಪುರದಲ್ಲಿ ಇಂದು ದೃಢಪಟ್ಟ 7 ಪ್ರಕರಣಗಳೊಂದಿಗೆ ಬುಧವಾರದ ಒಂದು ಪ್ರಕರಣ ಸೇರಿ ಒಟ್ಟೂ ಇಂದಿನ ಪಟ್ಟಿಯಲ್ಲಿ 8 ಜನರ ಹೆಸರು ದಾಖಲಾಗಿದೆ. ಈವರೆಗೆ ಸಿದ್ಧಾಪುರದಲ್ಲಿ 52 ಜನರಲ್ಲಿ ಕರೋನಾ ದೃಢಪಟ್ಟಿದ್ದು 13 ಜನರು ಈಗಲೂ ಚಿಕಿತ್ಸೆ ಪಡೆಯುತಿದ್ದಾರೆ. ಸಿದ್ಧಾಪುರ ದಅರೆಂದೂರಿನಲ್ಲಿ ಇಂದು ದೃಢಪಟ್ಟ 6 ಪ್ರಕರಣಗಳೊಂದಿಗೆ ಹಿಂದಿನ 2 ಸೇರಿ ಒಟ್ಟೂ 8 ಜನರಲ್ಲಿ ಕರೋನಾ ದೃಢವಾದಂತಾಗಿದೆ. ವಂದಾನೆಯಲ್ಲಿ ಇಂದು ನಿನ್ನೆ ದೃಢಪಟ್ಟ ತಲಾ ಒಂದೊಂದು ಪ್ರಕರಣಗಳೊಂದಿಗೆ ಒಂದೇ ಕುಟುಂಬದ ಮೂವರಲ್ಲಿ ಕರೋನಾ ದೃಢಪಟ್ಟಿರುವುದರಿಂದ ಅವರಿಗೆ ಅವರ ಮನೆಯಲ್ಲೇ ಚಿಕಿತ್ಸೆ ನಡೆಸುತ್ತಿರುವ ಬಗ್ಗೆ ಜಿಲ್ಲಾಡಳಿತ ನಿರ್ಧೇಶನ ನೀಡಿರುವುದಾಗಿ ತಿಳಿದುಬಂದಿದೆ.
