

ಅರಣ್ಯ ಕೃಷಿ ಈಗಿನ ಲಾಭದಾಯಕ ಉದ್ಯೋಗ. ಅದರಲ್ಲೂ ಜನಬಳಕೆ,ಔಷಧಿ ಸಸ್ಯಗಳ ವ್ಯವಸಾಯವಂತೂ ಲಾಭದ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಾಯಕ. ಬೊಜ್ಜು ಕರಗಿಸುವ, ಮಧುಮೇಹ ನಿಯಂತ್ರಿಸುವ ಕೋಕಂ ಮತ್ತು ಉಪ್ಪಾಗೆಯನ್ನು ಎಲ್ಲೂ ಬೆಳೆಯಬಹುದು ಎಂದು ಸಾಧಿಸಿ ತೋರಿಸಿದವರು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ. ನಾಯ್ಕ ಕಡಕೇರಿ

