ಬೆಳೆ ಸಮಿಕ್ಷೆ ನೂತನ ಯೋಜನೆ
2020-21 ನೇ ಸಾಲಿನಲ್ಲಿ ರೈತರ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿ ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೋಬೈಲ್ ಆಪ್ ಮೂಲಕ ಸ್ವಯಂ ದಾಖಲಿಸುವ ವಿನೂತನ ಯೋಜನೆ ಪ್ರಾರಂಭಿಸಲಾಗಿದೆ. ಕಂದಾಯ,ಕೃಷಿ ತೋಟಗಾರಿಕೆ,ರೇಷ್ಮೆ ಹಾಗೂ ಸಾಂಖಿಕ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು ಸಂಗ್ರಹವಾದ ಬೆಳೆಗಳ ಮಾಹಿತಿ ತಾಲೂಕು ಆಡಳಿತ ಪರಿಶೀಲಿಸಲಿದೆ
ದಾಖಲಿಸುವ ವಿದಾನ :- ರೈತರು ಸ್ಮಾರ್ಟ್ ಪೋನ್ ಬಳಸಿ ಬೆಳೆ ಸಮೀಕ್ಷೆ ಮೋಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ದಿಂದ ಡೌನಲೋಡ್ ಮಾಡಿಕೊಳ್ಳಬೇಕು ಅಥವಾ ಅವರ ಕುಟುಂಬದ ಸದಸ್ಯರು ಮೋಬೈಲ್ ಮಾಹಿತಿ ಹೊಂದಿದ ಕಂದಾಯ ಮತ್ತು ಕೃಷಿ ಇಲಾಖೆಯಿಂದ ನಿಯೋಜನೆಗೊಂಡ ಮಾಹಿತಿ ತಂತ್ರಜ್ಞಾನದ ತಿಳುವಳಿಕೆ ಇರುವ ಗ್ರಾಮದ ಯುವಕರ ಸಹಯೋಗದೊಂದಿಗೆ ರೈತರು ಮೋಬೈಲ್ ಸಂಖ್ಯೆಗೆ ಒ.ಟಿ.ಪಿ ಪಡೆಯವ ಮೂಲಕ ತಮ್ಮ ಜಮೀನಿನಲ್ಲಿ ಬೆಳೆಗಳ ಮಾಹಿತಿ ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೋಬೈಲ್ ಆಪ್ ಮೂಲಕ ದಾಖಲಿಸಬಹುದು.
ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹಿಸುವ ಮಾಹಿತಿ ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿ ಬಗ್ಗೆ ಎನ್,ಡಿ,ಆರ್,ಎಪ್:-ಎಸ್,ಡಿ,ಆರ್,ಎಪ್, ಅಡಿಯಲ್ಲಿ ಸಹಾಯ ಧನ ನೀಡಲು ವರದಿ ತಯಾರಿಸಲು,ಬೆಳೆ ವಿಮೆ ನೊಂದಾಯಿತ ರೈತರ ತಾಕು ಹಂತದ ಬೆಳೆ ಪರಿಶೀಲಿಸಲು,ಕನಿಷ್ಟ ಬೆಂಬಲ ಬೆಲೆ ನಿಗದಿತ,ಫಲಾಬವಿಗಳನ್ನು ಗುರುತಿಸಲು, ಸರ್ಕಾರದ ಯೋಜನೆಗಳಲ್ಲಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ.ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ,ಕಂದಾಯ ಇಲಾಖೆ, ರೇಷ್ಮೆ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಯನ್ನು ಸಂರ್ಪಕಿಸಬಹುದಾಗಿದೆ.
ಸಾಧನೆ- ಸಿದ್ದಾಪುರ: ತಾಲೂಕಿನಇಟಗಿಯರಾಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಕೃತಿಕಾಕನ್ನಪ್ಪಗೌಡ 625 ಕ್ಕೆ 573 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಸಂಸ್ಕೃತ ಮತ್ತುಕನ್ನಡದಲ್ಲಿ ಶೇ 100ರ ಸಾಧನೆ ಮಾಡಿದ್ದಾಳೆ.ಇವಳು ದಾಸನಗದ್ದೆಗ್ರಾಮದ ಕೃಷಿಕ ಕನ್ನಪ್ಪಗೌಡಮತ್ತು ಪದ್ಮಾವತಿಗೌಡರ ಮಗಳು.ಇವಳ ಸಾಧನೆಗೆ ಶಾಲೆಯ ಎಸ್.ಡಿ.ಎಂ.ಸಿಯವರು, ಮುಖೋಧ್ಯಾಪಕರು, ಸಹ ಶಿಕ್ಷಕರು, ಪಾಲಕರು ಅಭಿನಂದಿಸಿದ್ದಾರೆ.
ಸಿದ್ದಾಪುರ: ಶಿರಸಿಯ ಮುರಾರ್ಜಿ ವಸತಿ ಶಾಲೆಯಲ್ಲಿಆಂಗ್ಲ ಮಾಧ್ಯಮದಲ್ಲಿಅಭ್ಯಸಿಸುತ್ತಿರುವ ತಾಲೂಕಿನ ವಡಗೇರಿಯ ವಿ.ಎಸ್.ಪವನ್ 626 ಕ್ಕೆ 575 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಆಮೂಲಕ ಶಾಲೆಯ ಮತ್ತುಊರಿನಕೀರ್ತಿಯನ್ನು ಹೆಚ್ಚಿಸಿದ್ದಾನೆ. ಇವನು ಷಣ್ಮುಖ ಮಡಿವಾಳ ಹಾಗೂ ಕಾವ್ಯದಂಪತಿಯರ ಸುಪುತ್ರ. ಇವನ ಸಾಧನೆಗೆ ಶಾಲೆಯ ಮುಖೋಧ್ಯಾಪಕರು, ಸಹ ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ನಿಧನ ಸುದ್ದಿ – ಗಿರಿಜಮ್ಮ ನೀಲಕಂಠ ಗೌಡರ್ (ಮುಠಳ್ಳಿ ವಯಸ್ಸು 93.) ಇವರುದಿನಾಂಕ 12-08-2020ರಂಧು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು ಮೈತರಿಗೆ 3ಜನ ಹೆಣ್ಣು ಮಕ್ಕಳು ಹಾಗೂ 2 ಗಂಡು ಮಕ್ಕಳು (ಮೈತ) ಹಾಗೂ ಸೊಸೆ, ಮೊಮ್ಮಗ ನನ್ನು ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಇವರು ಮುಠಳ್ಳಿ ದೇಸಾಯಿ ಗೌಡರ್ ಹಾಗೂ ಬಾಬು ಗೌಡರ್ ಅವರ ತಾಯಿ ಯಾಗಿರುತ್ತಾರೆ.