ರಾಜ್ಯದಲ್ಲಿ ಈ ವಾರ ಕಡಿಮೆಯಾಗುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ಸಿದ್ಧಾಪುರದಂಥ ಸಣ್ಣ ತಾಲೂಕಿನಲ್ಲಿ ಒಂದೇ ದಿನ 15 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರಕನ್ನಡದಲ್ಲಿ ಇಂದು ಒಟ್ಟೂ 80 ಹೊಸ ಪ್ರಕರಣಗಳು ವರದಿಯಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಕರೋನಾ ರಾಜಧಾನಿಯಾಗುತ್ತಿರುವ ಹಳಿಯಾಳದಲ್ಲಿ ಇಂದು ಅತಿಹೆಚ್ಚು 21 ಜನರಲ್ಲಿ ಕರೋನಾ ದೃಢಪಟ್ಟಿದೆ.ಕುಮಟಾದಲ್ಲಿ16, ಮುಂಡಗೋಡು07, ಕಾರವಾರ ಮತ್ತು ಭಟ್ಕಳಗಳಲ್ಲಿ ತಲಾ 5, ಶಿರಸಿಯಲ್ಲಿ9 ಅಂಕೋಲಾ, ಜೊಯಡಾಗಳಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟೂ 80 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ.
ಸಿದ್ಧಾಪುರದ ಶಾಕಿಂಗ್ ನ್ಯೂಸ್-
ಸಿದ್ಧಾಪುರದ ಹೊಸಗದ್ದೆಯಲ್ಲಿ ಕಳೆದ ವಾರ 8 ಜನರಲ್ಲಿ ಕರೋನಾ ದೃಢಪಟ್ಟಿತ್ತು. ಇಂದು ಹಸರಗೋಡಿನ ಇದೇ ಹೊಸಗದ್ದೆಯಲ್ಲಿ 14 ಜನರಲ್ಲಿ ಕರೋನಾ ದೃಢವಾಗುವ ಮೂಲಕ ತಾಲೂಕಿನ ಜನರು ಬೆಚ್ಚಿಬೀಳುವಂತಾಗಿದೆ. ಸಿದ್ಧಾಪುರದಲ್ಲಿ ಈವೆರೆಗೆ ಒಟ್ಟೂ 90 ಜನರಲ್ಲಿ ಕರೋನಾ ಪತ್ತೆಯಾಗಿದ್ದು ಅವರಲ್ಲಿ 77 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ತಾಲೂಕಿನಲ್ಲಿ ರ್ಯಾಂಡಮ್ ಆಧಾರದಲ್ಲಿ ನಾನಾ ಪಂಚಾಯತ್ ಗಳ ಜನರ ಗಂಟಲುದೃವ ಪರೀಕ್ಷೆ ನಡೆದಿದೆ. ಹೀಗೆ ಪರೀಕ್ಷೆಗೆ ಒಳಗಾದ ನಾನಾ ಪಂಚಾಯತ್ ಗಳ ಜನರ ಮಧ್ಯೆ ಇಂದು ಹೊಸಗದ್ದೆಯಲ್ಲಿ ಒಂದೇ ದಿನ 14 ಜನರು ಹಾಗೂ ಕ್ಯಾದಗಿಯ ಒಬ್ಬರಲ್ಲಿ ಕರೋನಾ ದೃಢಪಟ್ಟಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ನಗರ, ಹೋಬಳಿ ಪ್ರದೇಶ ಬಿಟ್ಟರೆ ಸಿದ್ಧಾಪುರ ತಾಲೂಕಿನಾದ್ಯಂತ ಒಂದು ಲಕ್ಷ ಜನಸಂಖ್ಯೆಯಲ್ಲಿ ಬಹಿತೇಕ ಕುಟುಂಬಗಳು ಪ್ರತ್ಯೇಕವಾಗಿ ವಾಸಿಸುತ್ತಿವೆ. ಹೀಗೆ ಚದುರಿದ ಜನಸಂದಣಿಯ ಸಿದ್ಧಾಪುರದ ಹಸರಗೋಡು ಹೊಸಗದ್ದೆಯಲ್ಲಿ ಕಳೆದ ವಾರದ 8,ಇಂದಿನ 14 ಸೇರಿ ಒಟ್ಟೂ 22 ಜನರಲ್ಲಿ ಕರೋನಾ ದೃಢವಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 113 ಜನರು ಗುಣಮುಖರಾಗಿದ್ದು ಕರೋನಾ ಸೋಂಕಿತರಿಗಿಂತ ಹೆಚ್ಚು ಜನರು ಪ್ರತಿದಿನ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 35 ಜನರು ಕರೋನಾದಿಂದ ಮೃತಪಟ್ಟವರಾಗಿದ್ದಾರೆ.