

ಕೊರೋನಾ ಮಹಾಮಾರಿ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ರೋಗಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮನೆಗೆ ಕರೋನ ಬಂದರೆ ಏನು ಮಾಡುವಿರಿ?

ಬೆಂಗಳೂರು: ಕೊರೋನಾ ಮಹಾಮಾರಿ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ರೋಗಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮನೆಗೆ ಕರೋನ ಬಂದರೆ ಏನು ಮಾಡುವಿರಿ?
ಹೆದರಬೇಡಿ, ಕರೋನ ಬಗ್ಗು ಬಡಿಯಲು ಮನೆಯಲ್ಲೇ ಬಹಳ ಸರಳ ಮತ್ತು ಸುಲಭ ವಿಧಾನಗಳಿವೆ . ಕರೋನ ನಮ್ಮ ಮೇಲೆ ದಾಳಿ ಮಾಡಲು ಕನಿಷ್ಟ 5 ರಿಂದ 10 ದಿನಗಳು ಬೇಕು. ಹೆದರಬೇಡಿ ಬಗ್ಗುಬಡಿಯಲು ಮನೆಯಲ್ಲೇ ಫಸ್ಟ್ ಏಡ್ ಕಿಟ್ ಸಿದ್ದಪಡಿಸಿಕೊಳ್ಳಿ, ಕರೋನ ತಡೆಗಟ್ಟಿ.
ಕೊರೋನ ದ ಮೊದಲನೆಯ ಲಕ್ಷಣ ನೆಗಡಿ ಬಂದರೆ ಬಿಸಿ ನೀರಿಗೆ ಅವಿ ಮಾತ್ರೆಗಳನ್ನು ಹಾಕಿ ದಿನಕ್ಕೆ ಎರಡು, ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳಿ. ಎರಡನೇ ಲಕ್ಷಣ ಗಂಟಲು ಕಿರಿಕಿರಿ ಸೋರುವಿಕೆ ಬಂದರೆ ಬಿಸಿ ನೀರಿಗೆ ಬೆಟಡೈನ್ ಹಾಕಿ ಎರಡು ಗಂಟೆಗೆ ಒಮ್ಮೆ ಚೆನ್ನಾಗಿ ಬಾಯಿ ಮುಕ್ಕಳಿಸಿ ಮತ್ತು ಹೆಚ್ಚು ಬಿಸಿ ನೀರು ಕುಡಿಯಿರಿ. ಮೂರನೇ ಲಕ್ಷಣ ಕೆಮ್ಮು, ಬಂದಾಗಲೂ ಬಿಸಿ ನೀರಿನಿಂದ ಬಾಯಿಮುಕ್ಕಳಿಸಿ ಹೆಚ್ಚಾಗಿ ಬಿಸಿ ನೀರು ಮತ್ತು ಬಿಸಿ ಆಹಾರವನ್ನು ತೆಗೆದುಕೊಳ್ಳಿ ಜೊತೆಗೆ ವಿಟಮಿನ್ ಸಿ, ಡಿ ಮಾತ್ರೆಗಳನ್ನು ಸೇವಿಸಬೇಕು. ಆಗಾಗ ಥರ್ಮಮೀಟರ್ ಇಟ್ಟುಕೊಂಡು ಜ್ವರ ಪರೀಕ್ಷೆ ಮಾಡಿಕೊಳ್ಳಬೇಕು ಮತ್ತು ಆಕ್ಸಿ ಮೀಟರ್ ಇಟ್ಟುಕೊಂಡು ಅಮ್ಲಜನಕದ ಪ್ರಮಾಣ 96 ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಜ್ವರ ಬಂದರೆ ಡೋಲೋ ಮಾತ್ರೆ ತೆಗೆದುಕೊಳ್ಳಬೇಕು.
ಇಷ್ಟು ಮಾಡಿದರೆ ಸಾಕು ಕೊರೋನ ನಿಯಂತ್ರಣ ಮಾಡಬಹುದು ಮತ್ತು ಬೇರೆಯವರಿಗೆ ಸೋಂಕು ಹರಡದಂತೆ ತಡೆಯಬಹುದು. ವಿಕೋಪಕ್ಕೆ ಹೋಗುವ ಮುನ್ನ ನಮ್ಮ ಆರೋಗ್ಯ ನಮ್ಮ ಮೇಲಿದೆ. ಕೊರೋನಕ್ಕೆ ಹೆದರದೆ ಅದನ್ನು ಬಗ್ಗು ಬಡಿಯುವ ಸಂಕಲ್ಪ ಮಾಡಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ನಾವು ಇದರಿಂದ ಬಹಳ ಸುಲಭವಾಗಿ ಪಾರಾಗಬಹುದು, ಬೇರೆಯವರಿಗೂ ಕೊರೋನ ಸೋಂಕು ಹಬ್ಬದಂತೆ ನೋಡಿಕೊಳ್ಳಬಹುದು. (kpc)
ಗಮನಿಸಿ- ಸರ್ಕಾರದ ನಿರ್ಧೇಶನದ ಮೇರೆಗೆ ಕರೋನಾ ಕವಚ ಪಾಲಿಸಿಗಳಿವೆ. ಅವು ನಿಮಗೆ ಕರೋನಾ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುತ್ತವೆ. ಸಂಪರ್ಕಿಸಿರಿ- 8277517164
