

ವಿವಾದಾತ್ಮಕ ವ್ಯಕ್ತಿ, ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ನಿಂದಾಗಿ ನಾಯಿಗೂ ಕಾಲ ಬಂದಿದೆ. ಎಲ್ಲರಿಗೂ ಒಂದು ಕಾಲ ಇರುತ್ತದೆ ಎನ್ನುವುದು ಪ್ರಸಿದ್ಧ ನಾನ್ಣುಡಿ ಆದರೆ ಉತ್ತರ ಕೋರಿಯಾದಲ್ಲಿ ನಾಯಿಗೆ ಬಂದ ಕಾಲ ಸುಖದ್ದಲ್ಲ ಬದಲಾಗಿ ಕಷ್ಟದ್ದು!
ಉತ್ತರ ಕೋರಿಯಾದಲ್ಲಿ ಕರೋನಾ ಸೇರಿದಂತೆ ಅನೇಕ ಕಾರಣಗಳಿಂದಾಗಿ ತೊಂದರೆ, ಆಹಾರ ಸಮಸ್ಯೆ ವಿಶೇಶವಾಗಿ ಮಾಂಸದ ಸಮಸ್ಯೆ ತಲೆದೋರಿದೆ. ಮಾಂಸಾಹಾರಿಗಳ ಅಗತ್ಯ ಮಾಂಸವನ್ನು ಪೂರೈಸುವ ಕಾರಣಕ್ಕೆ ಕಿಮ್ ಜಾಂಗ್ ಗೆ ಹೊಳೆದಿದ್ದು ಅಂಥಿಂಥಾ ಐಡಿಯಾವಲ್ಲ ಸಾಕುಪ್ರಾಣಿ ನಾಯಿಗಳನ್ನು ಹೋಟೆಲ್ ಗಳಿಗೆ ಕೊಟ್ಟು ಮಾಂಸದ ಕೊರತೆ ನಿಭಾಯಿಸುವುದು!
ಉತ್ತರ ಕೋರಿಯಾದ ಜನರು ಕಿಮ್ ಜಾಂಗ್ ನ ಅನೇಕ ತಿಕ್ಕಲು ತೀರ್ಮಾನಗಳಿಗೆ ತಲೆಬಾಗುವ ನಿವಾರ್ಯತೆಯಲ್ಲಿದ್ದಾರೆ ಯಾಕೆಂದರೆ ಈ ಕಿಂ ಜಾಂಗ್ ಸರ್ವಾಧಿಕಾರಿ, ಇದೇ ಮಹಾನುಭಾವ ಜುಲೈ ನಲ್ಲಿ ಕೋರಿಯಾದ ಜನರು ನಾಯಿ ಸಾಕಬಾರದೆಂದು ಆದೇಶ ಮಾಡಿದ್ದರು! ಈಗ ಜನ ಸಾಕಿದ ನಾಯಿಗಳನ್ನು ಆಹಾರಕ್ಕಾಗಿ ಹೋಟೆಲ್ ಗಳಿಗೆ ಕೊಡಬೇಕೆಂದು ಆದೇಶಮಾಡಿದ್ದಾರೆ. ಕಿಂಜಾಂಗ್ ನ ಕಾಲದಲ್ಲಿ ನಾಯಿಗೆ ಬಂದದ್ದು ಕಾಲವೋ ಕಿಂ ನಂಥೆಯೇ ಕೇಡುಗಾಲವೋ ನೀವೇ ನಿರ್ಧರಿಸಿ. ಆದರೆ ಸರ್ವಾಧಿಕಾರಿ ಇಂಥ ಆದೇಶಗಳನ್ನು ಮಾಡುವುದನ್ನು ಯಾರೂ ಪ್ರಶ್ನಿಸುವಂತಿಲ್ಲ ಇಂಥ ಮನೋಭಾವದವರಿಂದಲೇ ಭಾರತದಲ್ಲಿ ಕೂಡಾ ಚುನಾಯಿತ ಸರ್ವಾಧಿಕಾರ ನಡೆಯುತ್ತಿದೆ ಎಂದು ಇದೇ ವಾರ ಸುಪ್ರಿಂ ಕೋರ್ಟ ನಿವೃತ್ತ ನ್ಯಾಯಮೂರ್ತಿ ಆರೋಪಿಸಿರುವುದು ಕಾಕತಾಳೀಯ ಎನ್ನೋಣವೆ?
