congress time-ಕಾಂಗ್ರೆಸ್ ಗೆ ವಸಂತ ಕಾಲ…..!

ಹಲವು ಮೇಲಾಟಗಳ ನಡುವೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮೇಲೆ ಜಿಲ್ಲೆ, ತಾಲೂಕುವಾರು ಅಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆ ನಿಶ್ಚಿತ ಎನ್ನಲಾಗಿದ್ದ ನೀರೀಕ್ಷೆಯಂತೆ ಡಿ.ಕೆ.ಶಿವಕುಮಾರ ಆಪರೇಶನ್ ಕಾಂಗ್ರೆಸ್ ಗೆ ರಾಜ್ಯದ ಜಿಲ್ಲೆ,ತಾಲೂಕುಗಳ ಅಧ್ಯಕ್ಷತೆಗಳೆಲ್ಲಾ ಬದಲಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ಅವಧಿಗಳಿಂದ ಭೀಮಣ್ಣ ನಾಯ್ಕ ಡಿ.ಸಿ.ಸಿ. ಅಧ್ಯಕ್ಷರಾಗಿರುವ ಕಾಂಗ್ರೆಸ್ ಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಏಕಮೇವಾದ್ವಿತಿಯ ನಾಯಕ ಎನಿಸಿಕೊಂಡಿದ್ದರು.

ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕರ ಮೊದಲ ಮಾಧ್ಯಮ ಗೋಷ್ಠಿ

ಇವರ ಅವಧಿಯಲ್ಲಿ ಕಾಂಗ್ರೆಸ್ ಕದರು ಕರಗಿ ಉತ್ತರ ಕನ್ನಡ ಕೇಸರಿ ಜಿಲ್ಲೆಯಾಗಿರುವುದು ವಾಸ್ತವ. ಈ ಕಟುವಾಸ್ತವದ ನಡುವೆ ಕಾಂಗ್ರೆಸ್ ಸಂಘಟನೆ,ಗೆಲುವು ದೂರ ಸರಿದಿರುವುದಕ್ಕೆ ವಲಸೆ ನಾಯಕರ ಪ್ರತಿಷ್ಠೆ, ಮೇಲಾಟ ಕಾರಣ ಎನ್ನುವ ಚರ್ಚೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ವಿವಾದ.

ಈಗ ಶಿರಸಿ ಕ್ಷೇತ್ರಕ್ಕೆ ನಾಯಕರಾಗುವ ದೂರಾಲೋಚನೆಯ ಕೆಲವರಿಂದ ದೇಶಪಾಂಡೆ ಪಾರುಪತ್ಯಕ್ಕೆ ಸವಾಲು ಹಾಕಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಸಿದ್ಧಾಪುರ ತಾಲೂಕಾ ಕಾಂಗ್ರೆಸ್ ಅಧ್ಯಕ್ಷತೆಯ ಬದಲಾವಣೆ ವಿಚಾರ.

ಸಿದ್ಧಾಪುರದಲ್ಲಿ ಟಿ.ಕೆ. ಮಹಮದ್ ರ ಕಾಲದಿಂದ ಕಾಂಗ್ರೆಸ್ ಅಧ್ಯಕ್ಷತೆಯೆಂದರೆ ಅದು ನಾಯಕರ ಮೇಲಾಟ. ಈ ಬಾರಿ ನಿವೇದಿತ್ ಆಳ್ವ ಮತ್ತು ಸುಷ್ಮಾ ರಾಜ್ಗೋಪಾಲ್ ರೆಡ್ಡಿ ಎನ್ನುವವರ ಮೇಲಾಟದಲ್ಲಿ ತಾ.ಪಂ. ಮಾಜಿ ಸದಸ್ಯ ವಸಂತ ನಾಯ್ಕರನ್ನು ಬ್ಲಾಕ್ ಗೆ ಅಧ್ಯಕ್ಷರನ್ನಾಗಿಸಿರುವ ವಿಚಾರ ಈಗ ಸಿದ್ಧಾಪುರ ಉತ್ತರಕನ್ನಡದ ಮಟ್ಟಿಗೆ ಅಂತರಾಷ್ಟ್ರೀಯ ವಿಷಯ!
ವಸಂತ ನಾಯ್ಕ ಸಿದ್ಧಾಪುರದ ಷಣ್ಮುಖ ಗೌಡರಿಂದಾಗಿ ರಾಜಕಾರಣಕ್ಕೆ ಬಂದವರು. ಗೌಡರ ಪಾಳಯದಲ್ಲಿ ಗುರುತಿಸಿಕೊಂಡು ಒಂದು ಕಾಲದ ಹಳೆಕಾಂಗ್ರೆಸ್ಸಿಗರ ವಿರೋಧಕ್ಕೂ ಕಾರಣವಾದವರು. ಆದರೆ ಈಗ ಕಾಲ, ಪರಿಸ್ಥಿತಿ ಬದಲಾಗಿದೆ. ಹಳೆಹುಲಿ ಗೌಡರ ನೇತೃತ್ವದ ದೇಶಪಾಂಡೆ ಕಾಂಗ್ರೆಸ್ ಬಣ ನಿಧಾನವಾಗಿ ಹಿಂದೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ. ಭೀಮಣ್ಣ ನಾಯ್ಕ, ಶಾಂತರಾಮ ಹೆಗಡೆ, ಷಣ್ಮುಖ ಹೆಗಡೆ, ಆರ್.ಎಂ. ಹೆಗಡೆ ಸೇರಿದ ಅನೇಕರ ಹಳೆ ತಂಡ ಮೊದಲಿನಷ್ಟು ಚುರುಕಾಗಿಲ್ಲ ಈ ಸಂದರ್ಭ ನೋಡಿ ಇವರ ವಿರೋಧಿ ಬಣ ವಸಂತ ನಾಯ್ಕರನ್ನು ತಾಲೂಕಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದೆ ಎನ್ನುವ ಬಹಿರಂಗ ಗುಟ್ಟಿನಲ್ಲಿ ಸುಳ್ಳಿಲ್ಲ.

ವಸಂತ ನಾಯ್ಕ ದೇಶಪಾಂಡೆ ಬಣದಿಂದ ಗುರುತಿಸಿಕೊಂಡು ಅವರಿಂದಲೇ ಅನ್ಯಾಯಕ್ಕೊಳಗಾದವರು. ಈಗ ದೇಶಪಾಂಡೆ ಬಣಕ್ಕೆ ಸೆಡ್ಡುಹೊಡೆಯುವಂತೆ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ವಸಂತ ನಾಯ್ಕ ಸಮನ್ವಯ,ಸಂಘಟನೆ, ಸಂಧಾನದ ಮಾತನಾಡಿದ್ದಾರೆ. ವಾಸ್ತವದಲ್ಲಿ ಸಿದ್ಧಾಪುರದಲ್ಲಿ ಹಳೆ ಕಾಂಗ್ರೆಸ್ ತಲೆಗಳೊಂದಿಗೆ ಸಂಧಾನ, ಸಮನ್ವಯ,ಸಹಕಾರದ ರಾಜಕಾರಣ ಮಾಡಿದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸಬಹುದು ಆದರೆ ದೇಶಪಾಂಡೆ ಬಣ ಈ ಹೊಸ ರಾಜಕೀಯ ಆಟಕ್ಕೆ ಬೆಂಬಲಿಸುವುದೆ? ಇದು ಯಕ್ಷಪ್ರಶ್ನೆ.
ಕಳೆದ ವಾರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ವಸಂತನಾಯ್ಕ ಎಲ್ಲರ ವಿಶ್ವಾಸದಿಂದ ಬೂತ್ ಮಟ್ಟದಿಂದ ಕಾಂಗ್ರೆಸ್ ಸಂಘಟಿಸುತ್ತೇನೆ ಎಂದಿದ್ದಾರೆ. ತಮ್ಮೊಂದಿಗಿದ್ದ ಹಲವು ಕಾರ್ಯಕರ್ತರೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಭರವಸೆಯ ಮಾತನಾಡಿದ್ದಾರೆ.

ಆದರೆ ಇದು ಅಷ್ಟು ಸುಲಭವಲ್ಲ ಉತ್ತರ ಕನ್ನಡ ಮತ್ತು ಸಿದ್ಧಾಪುರ ಕಾಂಗ್ರೆಸ್ ವಿಚಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗಿಳಿಯಿತು ಎನ್ನುವಂತೆ ಈಗಿರುವ ಎರಡ್ಮೂರು ಬಣಗಳಲ್ಲಿ ಒಬ್ಬರು ಅಧಿಕಾರ, ಪಕ್ಷದ ಹುದ್ದೆಗೆ ಬಂದರೆ ಇನ್ನೊಂದು ಬಣ ಬಿ.ಜೆ.ಪಿ. ಬಿ ಟೀಮ್ ಆಗುತ್ತದೆ ಎನ್ನುವ ಗುರುತರ ಆರೋಪಗಳಿವೆ. ಕಾಂಗ್ರೆಸ್ ನ ಈ ಒಡಕಿನಿಂದಲೇ ಉತ್ತರ ಕನ್ನಡದಲ್ಲಿ ಜನದ್ರೋಹಿಗಳೆಲ್ಲಾ ಕಾಲುಶತಮಾನ ಕಾಲ ಜನಪ್ರತಿನಿಧಿಗಳಾಗಿ ಮೆರೆದಿದ್ದಾರೆ.
ಈ ಎಲ್ಲಾ ಹಿನ್ನೆಲೆ, ಚರಿತ್ರೆಯ ಕಾರಣಕ್ಕೆ ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ಒಡಕು ಜಿಲ್ಲೆಗೆ ಹಾನಿ ಮಾಡಿದ್ದಂತೂ ಸತ್ಯ. ಈಗ ದೇಶಪಾಂಡೆ ಪಾರುಪತ್ಯದೆದುರು ವಸಂತ ನೇಮಕ ಹೊಸಹುರುಪಿಗೆ ಕಾರಣವಾಗಿದೆ. ವಸಂತ್ ನಾಯ್ಕ ಬಣಭೇದಮಾಡದೆ ಎಲ್ಲರನ್ನೂ ಸಂಪರ್ಕಿಸುತ್ತಾ ಆ.20 ಗುರುವಾರ ದೇವರಾಜ್ ಅರಸು ಮತ್ತು ರಾಜೀವ್ ಗಾಂಧಿಯವರ ಜನ್ಮದಿನ ಆಚರಣೆ ಅಂಗವಾಗಿ ಸಿದ್ಧಾಪುರದಲ್ಲಿ ಪ್ರತಿಭಟನೆ ಮಾಡಿ ರಾಜ್ಯಸರ್ಕಾರದ ವಿಫಲತೆಗಳ ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪೀಸುವ ಕಾರ್ಯಕ್ರಮ ಆಯೋಜಿಸಿದ್ದಾರೆ.

ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣದ ಮೊದಲು ನೂತನ ಅಧ್ಯಕ್ಷರು ಸಂಘಟನೆ, ಪ್ರತಿಭಟನೆಗೆ ಮುಂದಾಗಿರುವುದು ಶುಭ ಸೂಚನೆ. ಸಿದ್ಧಾಪುರ ಉತ್ತರ ಕನ್ನಡದಲ್ಲಿ ಪಕ್ಷಭೇದವಿಲ್ಲದೆ, ಗುಂಪುಗಾರಿಗೆ, ಒಳವ್ಯವಹಾರ, ಻಻ಅಧಿಕಾರ,ಅನುಕೂಲಕ್ಕಾಗಿ ಧಾರ್ಮಿಕ ಮತಾಂಧತೆ,ಉಳ್ಳವರ ಹೊಂದಾಣಿಕೆ ರಾಜಕಾರಣಗಳ ಪರಿಣಾಮ ಇಲ್ಲದವರು,ಬಹುಸಂಖ್ಯಾತರು,ಒಳ್ಳೆಯವರಿಗೇ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ಬಿ.ಜೆ.ಪಿ.ಗೆ ಪರ್ಯಾಯವಾಗಿ ಯಾವ ಶಕ್ತಿಗಳಿಗೂ ಬಾಲಬಿಚ್ಚಲಾಗುತ್ತಿಲ್ಲ. ಕಮ್ಯುನಿಷ್ಟರು ಪ್ರತಿಭಟನೆಗೆ, ಜನತಾದಳ ಚುನಾವಣೆಗಳಿಗೆ ಸೀಮಿತವಾಗಿರುವುದರಿಂದ ಜನ ಻ಅನಿವಾರ್ಯವಾಗಿ ಕಾಂಗ್ರೆಸ್ ನತ್ತ ನೋಡುವ ದುಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಕೆಲವು ವಲಸೆ ಪಟ್ಟಭದ್ರರ ಲಾಭದಾಟಕ್ಕೆ ವಸಂತ ನಾಯ್ಕ ಬಳಕೆಯಾಗದಿದ್ದರೆ ವಸಂತ ಬಿ.ಜೆ.ಪಿ. ಕಪಟ ನಾಟಕ ಎದುರಿಸಬಹುದಾದ ಹೊಸ ನಾಯಕ ಇಂಥ ಬರೆಯಬಹುದಾದ, ಬರೆಯಲಾರದ ಕೆಲವು ಕಾರಣಗಳ ಻ಅನಿವಾರ್ಯತೆಗೆ ವಸಂತ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಹೊಸತನ,ಹೊಸ ನಾಯಕತ್ವ ಬಯಸುವವರಿಗೆ ಖುಷಿಕೊಟ್ಟರೆ, ಕೆಲವು ಜೀಹುಜೂರ್ ಕೆಲಸದ ಲಾಭದ ರಾಜಕಾರಣ ಮಾಡುವ ಮರಿ ಪುಡಾರಿಗಳಿಗೆ ಸಹ್ಯ ಸುದ್ದಿಯಾಗದ ಸಾಧ್ಯತೆ ಹೆಚ್ಚು.

ಬ್ಲಾಕ್ ಅಧ್ಯಕ್ಷರ ಮೊದಲ ಮಾಧ್ಯಮಗೋಷ್ಠಿಯಲ್ಲಿ ಹಿರಿತಲೆಗಳ ಗೈರು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *