

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂದು ಜಿ-ಇಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು, ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ.

ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂದು ಜಿ-ಇಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು, ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ.
ಹೌದ.. ಇಂದು ಖ್ಯಾತ ಇ-ಮೇಲ್ ಸೇವಾ ಸಂಸ್ಥೆ ಗೂಗಲ್ ನ ಜಿ-ಮೇಲ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಈ ಬಗ್ಗೆ ಸ್ವತಃ ಜಿ-ಮೇಲ್ ನ ಮಾತೃ ಸಂಸ್ಥೆ ಗೂಗಲ್ ಸ್ಪಷ್ಟನೆ ನೀಡಿದೆ. ಅಲ್ಲದೆ ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದೆ.
ಮೂಲಗಳ ಪ್ರಕಾರ ಭಾರತದಲ್ಲಿ ಬೆಳಗ್ಗೆ 11 ಗಂಟೆಯಿಂದ ಈ ಸಮಸ್ಯೆ ಎದುರಾಗಿದ್ದು, ಜಿಮೇಲ್‌ನಲ್ಲಿ ಚಿತ್ರಗಳು, ವಿಡಿಯೊಗಳು ಹಾಗೂ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಜಿಮೇಲ್‌ನ ವೈಯಕ್ತಿಕ ಖಾತೆಗಳಲ್ಲಿ ದೊಡ್ಡ ದೊಡ್ಡ ಮೇಸೆಜ್‌ಗಳನ್ನು ಕಳಹಿಸಲು ಆಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.
ಭಾರತ ಸೇರಿದಂತೆ ಏಷ್ಯಾ, ಯುರೋಪ್ ಹಾಗೂ ಅಮೆರಿಕ ಖಂಡದ ಹಲವು ದೇಶಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಜಿಸ್ಯೂಟ್ ಸೇರಿದಂತೆ, ಗೂಗಲ್ ಡ್ರೈವ್ ಸೇವೆಯಲ್ಲೂ ಸಮಸ್ಯೆಯಾಗಿದೆ. ಗೂಗಲ್ ಕಂಪನಿ ಜಿಮೇಲ್ ಸೇವೆಯಲ್ಲಿ ತೊಂದರೆಯಾಗಿರುವುದರ ಬಗ್ಗೆ ಜಿಸ್ಯೂಟ್ ಡ್ಯಾಶ್ ಬೋರ್ಡ್‌ನಲ್ಲಿ ಪ್ರಕಟಿಸಿದೆ. ಸಮಸ್ಯೆ ಬಗ್ಗೆ ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದೆ. (kpc)
