ಗೌರಿ-ಗಣೇಶನ ಹಬ್ಬದ ಪ್ರಯುಕ್ತ *ಸವಿಸ* ( ಸಮಾಸ, ವಿರುದ್ದ,ಮತ್ತು ಸಮಾನಾರ್ಥಕ ಪದಗಳಿರುವ, ಆರು ಸಾಲಿನ) ಹೊಸ ಪ್ರಕಾರದ ಕವನ.
ಗೌರಿ ಗಣೇಶ ಬಾರಮ್ಮಗೌರಮ್ಮ ನಿನ್ನೀ ತವರಿಗೆಸಜ್ಜನರ ಕಾಯ್ದು ದುರ್ಜನರ ತಿದ್ದುವ
ಗಜಮುಖನ ಜೊತೆಗೆ ಸಿರಿ ಸಂಪತ್ತು ತಾರವ್ವ.|ಮಳೆರಾಯ ಧರೆಗಿಳಿದು ಕೆರೆಕಟ್ಟೆಬಾವಿಗಳ ತುಂಬಿಹನುಭೂಮ್ತಾಯಿ ಹಸಿರುಟ್ಟು ಸಿಂಗರಿಸಿ ಕಾದಿಹಳುಮೂಷಿಕನ ವಾಹನವೇರಿ ಹರುಷದಿ ಬಾರವ್ವ.|| ||
ಬಾರಮ್ಮ||ನಮ್ಮಕ್ಕತಂಗೇರು ರಂಗೋಲಿ ಹಾಕಿಹರುಅಣ್ಣ ತಮ್ಮಂದಿರು ತೋರಣವ ಕಟ್ಟಿಹರು.ಜಾತಿಧರ್ಮದ ಸೀಮೆಯನು ದಾಟಿಹೆವುಸುಖ ದುಃಖದಲ್ಲಿ ಸಮಪಾಲು ಹಂಚುವೆವುಭಯ ಭಕ್ತಿಯಿಂದ ನಿಮ್ಮನ್ನ ಪೂಜಿಪೆವು.ಮುಕ್ಕಣ್ಣನ್ನೊಪ್ಪಿಸಿ ಗಣಪನ್ನ ಕರೆತಾರವ್ವ.|| ಬಾರಮ್ಮ||
ನಿನಗಾಗಿ ಹೊಸಸೀರೆ ಬಳೆಗಳನು ತಂದಿಹೆನು.ಚೆಂದಾದ ಮಂಟಪದಿ ಸಿಂಗರಿಸಿ ಕೂಡಿಸುವೆ.ಬಣ್ಣದ ಚಿತ್ತಾರ ಗೋಡೆಯಲಿ ಬಿಡಿಸಿಹೆವು|ಮುದ್ದಾದ ಮೊಮ್ಮಗ ಲಂಬೋದರನಿಗೆಂದುಚಕ್ಕುಲಿ ಕಜ್ಜಾಯ ಸಿಹಿಗಡಬು ಮಾಡಿದೆವು.ಹಗಲಿರುಳು ನಿಮ್ಮ ಭಜನೆಯನು ಮಾಡುವೆವು.||ಬಾರಮ್ಮ||
ಹೆಣ್ಮಕ್ಕಳೆಲ್ಲ ಹೊಸಬಟ್ಟೆ ತೊಟ್ಟುಗಂಡಹೈಕಳೊಂದಿಗೆ ಸಿಡಿಮದ್ದು ಸಿಡಿಸುವರು.ಮೋದಕ ಪ್ರಿಯನಿಗೆ ಕಾಯ್ಕಡುಬು ಮಾಡಿತಾಯಂದಿರೆಲ್ಲ ಆರತಿಯ ಹಿಡಿದಿಹರು.| ಭಕ್ತಿಯಲಿ ಮುಳುಗೆದ್ದು ಗುಣಗಾನ ಮಾಡುವೆವುಗೌರಿಸುತನ ದರುಶನಕೆ ಕಾದಿಹರು|| ||ಬಾರವ್ವ ಗೌರಮ್ಮ ನಿನ್ನೀ ತವರೀಗೆ||
ಗೋಪಾಲ ನಾಯ್ಕ ಭಾಶಿ ಶಿಕ್ಷಕ.