

ರಾಜ್ಯದ ಕೆಲವು ಅಧಿಕಾರಿಗಳಿಗೆ ಆಯ್.ಎ.ಎಸ್. ಭಡ್ತಿ ದೊರೆತಿದ್ದು ಕೆಲವರನ್ನು ಭಡ್ತಿ ನೀಡಿ, ಕೆಲವರನ್ನು ವರ್ಗಾಯಿಸಿ ನಾನಾ ಜಿಲ್ಲೆ, ಉಪವಿಭಾಗಗಳಿಗೆ ನೇಮಿಸಲಾಗಿದೆ.
ಶಿರಸಿಯ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭಡ್ತಿಪಡೆದು ವರ್ಗಾವಣೆಯಾಗಿದ್ದಾರೆ ಎನ್ನಲಾಗಿದ್ದು ಅವರ ಜಾಗಕ್ಕೆ ಆಯ್.ಎ.ಎಸ್. ಪ್ರೊಬೇಷನರಿ ಅಧಿಕಾರಿ ಆಕೃತಿ ಬನ್ಸಾಲ್ ರನ್ನು ವರ್ಗಾವಣೆ ಮಾಡಲಾಗಿದೆ.
ಕೆಲವು ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸ್ಥಾನಗಳಿಗೆ ನೇಮಕಮಾಡಿ ಕೆಲಸದ ಆದೇಶ ಮಾಡಲಾಗಿದೆ.
ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ
ಡಾ. ಗೋಪಾಲಕೃಷ್ಣ, ಸಹಾಯಕ ಆಯುಕ್ತರು, ಧಾರವಾಡ ಉಪ ವಿಭಾಗ
ಮುಕೇಶ್ ಕುಮಾರ್, ಸಹಾಯಕ ಆಯುಕ್ತರು, ಚಿಕ್ಕೋಡಿ ಉಪವಿಭಾಗ
ಪಟೇಲ್ ಭುವನೇಶ್ ದೇವಿದಾಸ್, ಸಹಾಯಕ ಆಯುಕ್ತರು, ಬಸವ ಕಲ್ಯಾಣ ಉಪವಿಭಾಗ
ಲೋಕಾಂಡೆ ಸ್ನೇಹಲ್ ಸುಧಾಕರ್, ಆಯುಕ್ತರು, ಕಲಬುರಗಿ ಮಹಾನಗರ ಪಾಲಿಕೆ
ಬನ್ವರ್ ಸಿಂಗ್ ಲೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಮಡಿಕೇರಿ
ಡಾ. ಗಿರೀಶ್ ದಿಲೀಪ್ ಬಡೋಲೆ, ಸಹಾಯಕ ಆಯುಕ್ತರು, ಕೊಳ್ಳೆಗಾಲ ಉಪವಿಭಾಗ
ನಂದಿನಿ.ಕೆ.ಆರ್., ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ, ಬಳ್ಳಾರಿ
ಆಕೃತಿ ಬನ್ಸಾಲ್, ಸಹಾಯಕ ಆಯುಕ್ತರು, ಶಿರಸಿ ಉಪವಿಭಾಗ
ದಿಗ್ವಿಜಯ್ ಭೋಡ್ಕೆ, ಸಹಾಯಕ ಆಯುಕ್ತರು, ತಿಪಟೂರು ಉಪವಿಭಾಗ
ರಾಹುಲ್ ಸಿಂಧೆ, ಸಹಾಯಕ ಆಯುಕ್ತರು, ಇಂಡಿ ಉಪವಿಭಾಗ
ಈಶ್ವರ ಕುಮಾರ್ ಖಂಡೋ, ಸಹಾಯಕ ಆಯುಕ್ತರು, ಮಡಿಕೇರಿ ಉಪವಿಭಾಗ
ಗರಿಮಾ ಪನ್ವರ್, ಸಹಾಯಕ ಆಯುಕ್ತರು, ಬೀದರ್ ಉಪವಿಭಾಗ

