

ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಿದ ಜನವಿರೋಧಿ ಕಾಯಿದೆಗಳ ವಿರುದ್ಧ ಜಾತ್ಯಾತೀತ ಜನತಾದಳ ತನ್ನ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರ ತಾಲೂಕು ಕೇಂದ್ರಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಯಾ ಜಿಲ್ಲಾಧಿಕಾರಿಗಳು, ತಹಸಿಲ್ಧಾರರ ಮೂಲಕ ಮನವಿ ರವಾನಿಸಿರುವ ಪಕ್ಷ ಪ್ರಗತಿಪರ,ರೈತಪರ, ಕಾರ್ಮಿಕಪರ ಇದ್ದ ಕಾಯಿದೆಗಳನ್ನು ತಿದ್ದುಪಡಿ ಮಾಡಿ ರೈತರು, ಕಾರ್ಮಿಕರು, ಜನಸಾಮಾನ್ಯರಿಗೆ ಅನ್ಯಾಯವಾಗುವ ಅಂಶಗಳನ್ನು ಸೇರಿಸಿ ಕಾಯಿದೆಯ ಆಶಯಗಳಿಗೆ ವಿರುದ್ಧವಾದ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳನ್ನು ಹಿಂದೆ ಪಡೆಯುವ ಮೂಲಕ ರಾಜ್ಯದ ಜನಸಾಮಾನ್ಯರ ಹಿತಾಸಕ್ತಿ ಕಾಪಾಡಲು ಸರ್ಕಾರವನ್ನು ಪಕ್ಷ ಆಗ್ರಹಿಸಿ.

ಜೆ.ಡಿ.ಎಸ್. ಪರವಾಗಿ ಬರೆದ ಲಿಖಿತ ಮನವಿಯಲ್ಲಿ ಕರ್ನಾಟಕ ಭೂಸುಧಾರಣೆ ಸುಗ್ರಿವಾಜ್ಞೆ2020, ಕರ್ನಾಟಕ ಕೃಷಿ ಉತ್ಫನ್ನ ಮಾರುಕಟ್ಟೆ ಸಮೀತಿ ಸುಗ್ರಿವಾಜ್ಞೆ 2020, ಹಾಗೂ ಕಾರ್ಮಿಕ ಕಾಯಿದೆಗಳ ತಿದ್ದುಪಡಿ ಗಳನ್ನು ತಕ್ಷಣ ಹಿಂದೆ ಪಡೆಯಬೇಕು. ಈ ಬದಲಾವಣೆಗಳ ತಿದ್ದುಪಡಿ ವಿಧೇಯಕಗಳನ್ನು ಹಿಂದೆ ಪಡೆಯದಿದ್ದರೆ ರಾಜ್ಯ ಜಾತ್ಯಾತೀತ ಜನತಾದಳ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಈ ಬಗ್ಗೆ ರಾಜ್ಯಾದ್ಯಂತ ಮುಖ್ಯಮಂತ್ರಿಗಳಿಗೆ ನೀಡಲಾದ ಮನವಿಯನ್ನು ಸಿದ್ಧಾಪುರ ತಾಲೂಕಿನ ಜಾತ್ಯಾತೀತ ಜನತಾದಳದ ಮುಖಂಡರು ತಾಲೂಕಾಧ್ಯಕ್ಷ ಎಸ್.ಕೆ. ನಾಯ್ಕ ಮತ್ತು ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ ನೇತೃತ್ವದಲ್ಲಿ ತಹಿಸಿಲ್ಧಾರ ಮಂಜುಳಾಭಜಂತ್ರಿಯವರಿಗೆ ನೀಡಲಾಯಿತು. ಪ್ರೊ.ಎನ್.ಟಿ.ನಾಯ್ಕ, ಸತೀಶ್ ಹೆಗಡೆ ಬೈಲಳ್ಳಿ,ರಾಘು ಸೇರಿದಂತೆ ಕೆಲವು ಪ್ರಮುಖರು ಈ ಸಮಯದಲ್ಲಿ ಉಪಸ್ಥಿತರಿದ್ದರು.

