

ರೈತರು,ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲಸಮಾಡಲು ಸರ್ಕಾರಿ ನೌಕರರಿಗೆ ಸೂಚಿಸಿರುವ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಜನಸಾಮಾನ್ಯರಿಗೆ ಸರ್ಕಾರ, ಆಡಳಿತ ವ್ಯವಸ್ಥೆ ತಮ್ಮೊಂದಿಗಿದೆ ಎನ್ನುವ ಭರವಸೆ ಬರುವಂತೆ ಸರ್ಕಾರಿ ನೌಕರರು ಜನರ ಕೆಲಸಮಾಡಬೇಕು ಎಂದು ಸಲಹೆ ನೀಡಿದರು.


ಜಿಲ್ಲೆಯ ನಾಲ್ಕೈದು ತಾಲೂಕುಗಳ ಬೆಳೆಸಮೀಕ್ಷೆ, ಪ್ರಕೃತಿ ವಿಕೋಪ ವರದಿಗಳ ಪ್ರಗತಿಪರಿ ಶೀಲನೆ ನಡೆಸಿದ ಅವರು ಸಿದ್ಧಾಪುರದಲ್ಲಿ ಮಾತನಾಡಿ ಜನಸಾಮಾನ್ಯರು ಕೋವಿಡ್ ಪರೀಕ್ಷೆಗೆ ಒಳಪಡಬೇಕು, ರೋಗಪತ್ತೆ ಶೀಘ್ರವಾಗಿ ನಡೆದರೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಅದೇ ರೋಗಪತ್ತೆ ಕೆಲಸ ವಿಳಂಬವಾದರೆ ಅಪಾಯ ಹೆಚ್ಚು ಎಂದು ಸಮರ್ಥಿಸಿದರು.
ಕಂದಾಯ ಇಲಾಖೆಯ ಕೆಳ ಹಂತದ ನೌಕರರ ಜವಾಬ್ಧಾರಿ, ಹೊಣೆ ದೊಡ್ಡದು ಬೆಳೆ ದಾಖಲಾತಿಯಲ್ಲಿ ದೋಷವಾದರೆ ರೈತರಿಗೆ ತೊಂದರೆ ಹಾಗಾಗಿ ಬೆಳೆ, ಉಪಬೆಳೆ-ಪೂರಕ ಬೆಳೆಗಳ ಸಮಗ್ರ, ಸಂಪೂರ್ಣ ಮಾಹಿತಿ ಪಡೆದು ದಾಖಲಿಸಬೇಕು.
ಪ್ರಕೃತಿ ವಿಕೋಪ, ಜನರಿಗೆ ತೊಂದರೆಯಾದರೆ ತಕ್ಷಣ ಭೇಟಿ ನೀಡುವುದು, ಅಗತ್ಯ ವರದಿ ನೀಡುವುದು ಅನಿವಾರ್ಯತೆಯಲ್ಲಿ ಅವರಿಗೆ ನೆರವು ನೀಡುವ ಮೂಲಕ ಜನರಿಗೆ ಸ್ಫಂದಿಸಬೇಕು. ಈ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿ ಹರೀ ಶ್ ಕುಮಾರ ಕೆ. ಬದ್ಧತೆಯುಳ್ಳವರಾಗಿದ್ದು ಜನಪರ ಆಡಳಿತಕ್ಕೆ ಅವರು ಮಾದರಿ ಎನಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
