

ಆಗಸ್ಟ್ 26 ರ ಬುಧವಾರ ಬೆಂಗಳೂರಿನ ಯುವಕನೊಬ್ಬ ಜೋಗ್ ಫಾಲ್ಸ್‌ನ ಭಾಗವಾಗಿರುವ ರಾಣಿ ಜಲಪಾತದ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಾಗರ: ಆಗಸ್ಟ್ 26 ರ ಬುಧವಾರ ಬೆಂಗಳೂರಿನ ಯುವಕನೊಬ್ಬ ಜೋಗ್ ಫಾಲ್ಸ್‌ನ ಭಾಗವಾಗಿರುವ ರಾಣಿ ಜಲಪಾತದ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೆಂಗಳೂರಿನ ಚೇತನ್ ಕುಮಾರ್ (35) ಆತ್ಮಹತ್ಯೆಗೆ ಯತ್ನಿಸಿದ ಯುವಕ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಈತ ಎರಡು ದಿನಗಳ ಹಿಂದೆ ಜೋಗ್ ಫಾಲ್ಸ್‌ಗೆ ಬಂದಿದ್ದಾಗಿ ವರದಿಯಾಗಿದೆ.
ಬುಧವಾರ, ಚೇತನ್ ಫೆನ್ಸಿಂಗ್ ದಾಟಿ ರಾಣಿ ಫಾಲ್ಸ್ ಕಡೆಯ ನಿಷೇಧಿತ ಪ್ರದೇಶಕ್ಕೆ ಆಗಮಿಸಿದ್ದಾನೆ. ಆತ ಜಲಪಾತದ ಮೇಲೆ ತಲುಪಿ ಕಣಿವೆಯಲ್ಲಿ ಹಾರಿ ಮೊದಲು ತನ್ನ ಚೀಲವನ್ನು ಕೆಳಗೆ ಎಸೆದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಾಗ . ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಶೆಟ್ಟಿಗಾರ್ ಸ್ಥಳಕ್ಕೆ ಆಗಮಿಸಿದ್ದಾರೆ.
ಸತತ ಮೂರು ಗಂಟೆಗಳ ಕಾಲದ ಕಾರ್ಯಾಚರಣೆ ನಡೆಸಿ ಚೇತನ್ ನನ್ನು ಪತ್ತೆ ಮಾಡಲಾಗಿದೆ. ನಂತರ ಆತನ ಮನವೊಲಿಕೆ ಮಾಡಲಾಗಿದ್ದು ಆತ್ಮಹತ್ಯೆಗೆ ಮುಂದಾಗಿದ್ದ ಅವನನ್ನು ಮರಳಿ ಕರೆತರಲಾಗಿದೆ. ನಂತರ ಚೇತನ್ ಆರೋಗ್ಯ ತಪಾಸಣೆ ನಡೆಸಿದ ಪೊಲೀಸರು ಆತನ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ.
(kpc)
