ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಾಗಾಲೋಟ ಮುಂದುವರಿದಿದ್ದು ಇಂದು ಹಳಿಯಾಳದ 57 ಜನರು, ಭಟ್ಕಳ22, ಹೊನ್ನಾವರ 18, ಶಿರಸಿ16, ಕಾರವಾರ,ಯಲ್ಲಾಪುರಗಳಲ್ಲಿ ತಲಾ 12 ಸೇರಿ ಒಟ್ಟೂ 198 ಜನರಲ್ಲಿ ಕರೋನಾ ದೃಢಪಟ್ಟಿದೆ.
ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ, ವಿಧಾನಸಭಾ ಸದಸ್ಯ ಎಸ್.ಎಲ್. ಘೊಟ್ನೇಕರ್ ರಲ್ಲಿ ಕರೋನಾ ದೃಢಪಟ್ಟಿದೆ.
ಸಿದ್ಧಾಪುರ ವರದಿ-
ಸಿದ್ಧಾಪುರದಲ್ಲಿ ಇಂದುಮುಗದೂರಿನ 1, ನೇರಲಮನೆಯ 1, ವಂದಾನೆಯ 6, ಹಸರಗೋಡಿನ 5 ಜನರಲ್ಲಿ ಕರೋನಾ ದೃಢವಾಗಿದೆ. ಮುಗದೂರಿನ ವ್ಯಕ್ತಿ ಸಿದ್ಧಾಪುರ ಕೆ.ಡಿ.ಸಿ.ಸಿ. ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಇವರು ಕಳೆದ ಒಂದು ವಾರದಿಂದ ಬ್ಯಾಂಕಿನ ಕೆಲಸಕ್ಕೆ ಬಂದಿರದಿದ್ದರೂ ಶಿರಸಿ ಕೆ.ಡಿ.ಸಿ.ಸಿ. ಮುಖ್ಯ ಕಛೇರಿಯ ಆದೇಶದಂತೆ ಸಿದ್ಧಾಪುರ ನಗರ ಶಾಖೆಯ ಸಿಬ್ಬಂದಿಗಳಿಗೆ ಆ.29 ರ ವರೆಗೆ ರಜೆ ಘೋಶಿಸಿದ್ದಾರೆ.
ಕೆ.ಡಿ.ಸಿ.ಸಿ. ಬ್ಯಾಂಕಿನ ಎರಡು ಶಾಖೆಗಳು ಸಿದ್ಧಾಪುರದಲ್ಲಿದ್ದು ಹೆಚ್ಚಿನ ಸ್ಥಳೀಯರ ಖಾತೆಗಳು, ವ್ಯವಹಾರಗಳು ಈ ಬ್ಯಾಂಕ್ ಗಳಲ್ಲಿವೆ. ಈ ಬ್ಯಾಂಕಿನ ಹಣ ನಗರ, ಗ್ರಾಮೀಣ ಪ್ರದೇಶಗಳಲ್ಲೂ ಚಲಾವಣೆಯಾಗಿದ್ದು ಇಂದಿನ ಕೋವಿಡ್ ಪ್ರಕರಣಗಳು ತಾಲೂಕಿನ ಜನರ ಆತಂಕ ವೃ ದ್ಧಿಸಿವೆ.