

ಶಿರಸಿ ತಾಲೂಕಿನ ಕೆ.ಪಿ.ಸಿ.ಸಿ. ವೀಕ್ಷಕರ ಗುಂಪುಗಾರಿಕೆ, ಸಿದ್ಧಾಪುರ ತಾಲೂಕಿನ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಇಂದು ಸಿದ್ಧಾಪುರ ಎ.ಪಿ.ಎಂ.ಸಿ. ವಸತಿ ಗೃಹದಲ್ಲಿ ಮಹತ್ವದ ಸಭೆ ನಡೆಯುತ್ತಿರುವುದು ಸುದ್ದಿಯಾಗಿದೆ.
ಜಿಲ್ಲಾ ಕಾಂಗ್ರೆಸ್ ನಲ್ಲಿ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದ ಕಾಂಗ್ರೆಸ್ ಬಣ ಶಿರಸಿ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಪ್ರಬಲವಾಗಿದೆ. ಈ ಬಣದ ವಿರುದ್ಧ ವಲಸೆ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿರುವ ಭೀಮಣ್ಣ ಬಣ ಇದಕ್ಕೆ ಪ್ರಮುಖ ಕಾರಣರಾಗಿರುವ ಶಿರಸಿ ತಾಲೂಕಿನ ಕೆ.ಪಿ.ಸಿ.ಸಿ. ಸದಸ್ಯೆ ಸುಷ್ಮಾ ರಾಜಗೋಪಾಲ ರೆಡ್ಡಿ ಕಾಂಗ್ರೆಸ್ ಮೇಲ್ ಸ್ತರದಲ್ಲಿ ಪ್ರಭಾವ ಬೀರಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆಗೆ ಅಡ್ಡಿಯಾಗಿದ್ದಾರೆ ಎನ್ನುವುದು ಸೇರಿದಂತೆ ಪ್ರತಿ ಚುನಾವಣೆ ಮೊದಲು ಎಲ್ಲಿಂದಲೋ ಬಂದು ಜಿಲ್ಲೆಯ ಕಾಂಗ್ರೆಸ್ ಸಂಘಟನೆ, ಗೆಲುವಿಗೆ ಮುಳ್ಳಾಗುತ್ತಾ ಬಿ.ಜೆ.ಪಿ ಗೆಲುವಿಗೆ ಸಹಕರಿಸುತಿದ್ದಾರೆ ಎನ್ನುವುದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಪ್ತರ ಬಣದ ತಕರಾರು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 3.30 ಕ್ಕೆ ಎ.ಪಿ.ಎಂ.ಸಿ. ಆವರಣದಲ್ಲಿ ಸೇರಿರುವ ಶಿರಸಿ-ಸಿದ್ಧಾಪುರದ ಕಾಂಗ್ರೆಸ್ ಪ್ರಮುಖರು ಕಾಂಗ್ರೆಸ್ ಉಳಿಸಬೇಕು ಇಲ್ಲ ಕಾಂಗ್ರೆಸ್ ಬಿಟ್ಟು ನಮ್ಮ ದಾರಿ ನಾವು ನೋಡಿಕೊಳ್ಳಬೇಕು ಎಂದು ತೀರ್ಮಾನಿಸಲು ಈ ಗುಪ್ತ ಸಭೆ ನಡೆಯುತ್ತಿದೆ ಎನ್ನಲಾಗಿದೆ.
ಈ ತಕರಾರು, ಅಸಮಧಾನಗಳ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕರನ್ನು ಕರೆಸಿಕೊಂಡಿರುವ ದೇಶಪಾಂಡೆ ಬಣದ ಪ್ರಮುಖರು ಭೀಮಣ್ಣ ಎದುರು ಕಾಂಗ್ರೆಸ್ ಸ್ಥಾನಮಾನಗಳಲ್ಲಿದ್ದು, ಪಕ್ಷದ ಹಿರಿಯರು ಪ್ರಭಾವಿಗಳ ನೆರವಿನಿಂದ ಪಕ್ಕಕ್ಕೇ ಹಾನಿ ಮಾಡುತ್ತಿರುವ ಶಿರಸಿ ಕೇಂದ್ರಿತ ಅಲ್ಪಸಂಖ್ಯಾತ ವಲಸೆ ಲಾಭಕೋರರ ವಿರುದ್ಧ ಪಕ್ಷದ ವರಿಷ್ಠರಿಗೆ ತಿಳಿಸಿ ಪಕ್ಷ ಕ್ಕಾ ಗುತ್ತಿರುವ ಹಾನಿ ತಡೆಯಬೇಕು, ಈ ಕ್ಷೇತ್ರದ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮತದಾರರಿಗೆ ವಿರುದ್ಧವಾಗಿ ಹಣ, ಮೇಲ್ಮಟ್ಟದ ನಾಯಕರ ಸಂಪರ್ಕದ ವ್ಯಕ್ತಿಗಳ ಪಕ್ಷವಿರೋಧಿ ಚಟುವಟಿಕೆ ನಿಯಂತ್ರಿಸಬೇಕು. ಇಲ್ಲವಾದರೆ ಎಲ್ಲಾ ಕಾರ್ಯಕರ್ತರು, ನಾಯಕರು ಸಾಮೂಹಿಕವಾಗಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ನಮ್ಮ ದಾರಿ ನಾವು ನೋಡಿಕೊಳ್ಳಬೇಕು. ಕಳೆದ 20 ವರ್ಷಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ, ಬೇರೆ ನಾಯಕರು ಜಿಲ್ಲೆಗೆ ಬಂದು ಕಾಂಗ್ರೆಸ್ ದುರ್ಬಲಗೊಳಿಸಿ ಬಿ.ಜೆ.ಪಿ. ಗೆ ನೆರವಾಗುತಿದ್ದಾರೆ. ಇಂಥ ದುರುದ್ದೇಶದ ನಾಯಕತ್ವ ಮತ್ತು ಅವರ ರಾಜಕಾರಣ ನಿಯಂತ್ರಿಸದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ ಜಿಲ್ಲೆಯ ಬಹುಸಂಖ್ಯಾತರು, ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರಿಗೆ ವಿರುದ್ಧವಾಗಿರುವ ವಲಸೆ ನಾಯಕತ್ವವನ್ನು ಜಿಲ್ಲೆಯಿಂದ ಶಾಶ್ವತವಾಗಿ ಹೊರದೂಡಬೇಕು. ಇಂಥ ವಲಸೆ ಶ್ರೀಮಂತರ ಕಾಸಿನ ಆಸೆಗಾಗಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆಗೆ ವಿರುದ್ಧವಾಗಿ ಬಣ ರಾಜಕೀಯ ಮಾಡುವ ಪಕ್ಷವಿರೋಧಿಗಳನ್ನು ನಿಯಂತ್ರಿಸಬೇಕು. ಅದಾಗದಿದ್ದರೆ ನಾವೇ ಸಾಮೂಹಿಕವಾಗಿ ಕಾಂಗ್ರೆಸ್ ತ್ಯಜಿಸಬೇಕು ಎನ್ನುವ ವಿಚಾರವಾಗಿ ಬಿರುಸಿನ ಚರ್ಚೆ ನಡೆದಿದ್ದು ಸ್ಥಳಿಯ ಜನರು ಮತದಾರರಿಗೆ ವಿರುದ್ಧವಾಗಿರುವ ವಲಸೆ ನಾಯಕರ ಹಣ ಮತ್ತು ಸೋಗಿನ ರಾಜಕೀಯದ ವಿರುದ್ಧ ಜಿಲ್ಲೆಯಾದ್ಯಂತ ವ್ಯಾಪಕ ಹೋರಾಟದ ಹಿನ್ನೆಲೆಯಲ್ಲಿ ಸಂಘಟಿತವಾಗಿ ಕೆಲಸಮಾಡುವ ಬಗ್ಗೆ ನೂರಾರು ನಾಯಕರು ಭೀಮಣ್ಣನವರ ಎದುರೇ ಖಡಾಖಂಡಿತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಹತ್ತು ವರ್ಷಗಳಿಂದ ಬೂತ್ ಮಟ್ಟದಿಂದ ಸಂಘಟನೆ ಮಾಡಿ ಪ್ರತಿ ಚುನಾವಣೆ ವೇಳೆ ಬರುವ ವಲಸೆ ಲಾಭಕೋರ ನಾಯಕರ ಎದುರು ನೀವು ತಲೆತಗ್ಗಿಸುವುದಾದರೆ ಅಂಥ ರಾಜಕಾರಣ ನಿಮಗೇಕೆ ಎಂದು ಅವರ ಆಪ್ತರೇ ಅಸಮಧಾನ ವ್ಯಕ್ತಪಡಿಸಿದರು ಎಂದು ಕೆಲವು ಮೂಲಗಳು ಸಮಾಜಮುಖಿಗೆ ತಿಳಿಸಿವೆ.



