

ಗ್ರಾಮದ ದೇವರ ಪೂಜೆ ವಿಷಯದ ತಗಾದೆ ಕಾರಣಕ್ಕೆ ಯುವಕ ಪೂಜಾರಿಯೊಬ್ಬ ವಿಷ ಸೇವಿಸಿ, ನಂತರ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಕರಣ ಸಿದ್ಧಾಪುರದ ಪ.ಪಂ. ವ್ಯಾಪ್ತಿಯ ಹಣಜಿಬೈಲ್ ನಲ್ಲಿ ನಡೆದಿದೆ. ಮೃತ ಯುವಕ ಶ್ರೀರಾಮ (24) ಎನ್ನಲಾಗಿದ್ದು ತಮ್ಮ ಕುಟುಂಬದ ರಾಮ ದೇವಾಲಯದ ಪೂಜಾರಿಯಾಗಿದ್ದ ಎನ್ನಲಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು. ದೇವಸ್ಥಾನದ ಪೂಜೆ ವಿಚಾರಕ್ಕೆ ಗ್ರಾಮಸ್ಥರು ಮತ್ತು ಈ ಮೃತವ್ಯಕ್ತಿಯ ನಡುವೆ ತಗಾದೆ ನಡೆದಿತ್ತು ಎನ್ನಲಾಗಿದೆ.ನಂತರ ದೇವರ ಪೂಜೆ ಮಾಡುವ ವೃತ್ತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಅವನ ಮೇಲೆ ಒತ್ತಡ ಹಾಕಿದ್ದರು ಎಂದು ಮನನೊಂದಿದ್ದ ಈ ಯುವಕ ತನಗೆ ಕಿರಿಕುಳ ನೀಡಿದವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಗರದಲ್ಲಿ ಗಾಳಿ ಸುದ್ದಿ ಸದ್ದು ಮಾಡುತ್ತಿದೆ.
