

ಶಿರಸಿಯಲ್ಲಿ ಕನ್ನಡದ ಮೊದಲ ದೊರೆ ಮಯೂರವರ್ಮನ ಪ್ರತಿಮೆ ಸ್ಥಾಪನೆ ಮತ್ತು ಶಿರಸಿ-ಸಿದ್ಧಾಪುರಗಳಲ್ಲಿ ವೃತ್ತಗಳಿಗೆ ಮಯೂರವರ್ಮರ ಹೆಸರು ಇಡಬೇಕೆಂದು ಆಗ್ರಹಿಸಲು ಇಂದು ಶಿರಸಿಯಲ್ಲಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಲಾಯಿತು.

ನಾನಾ ಕನ್ನಡಪರ ಸಂಘಟನೆಗಳು ಸೇರಿ ಶಿರಸಿಯಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ ಅರ್ಜಿಯಲ್ಲಿ ಕನ್ನಡದ ಮೊದಲ ದೊರೆ ರಾಜಾ ಮಯೂರವರ್ಮರ ಪ್ರತಿಮೆಯನ್ನು ಶಿರಸಿಯಲ್ಲಿ ಸ್ಥಾಪಿಸಬೇಕು ಮತ್ತು ಶಿರಸಿ-ಸಿದ್ಧಾಪುರಗಳ ತಲಾ ಒಂದೊಂದು ವೃತ್ತಕ್ಕೆ ರಾಜಾ ಮಯೂರವರ್ಮ ವೃತ್ತ ಎಂದು
ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಯಿತು.
ಶಿರಸಿ-ಸಿದ್ಧಾಪುರಗಳ ಪ್ರಮುಖ ಕನ್ನಡಪರ ಸಂಘಟನೆಗಳು ಕೆಲವು ಸ್ಥಳಿಯರೊಂದಿಗೆ ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದವು.


