

ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಬಳಸಿ ಜಿಲ್ಲೆಗೆ ಮಾಧ್ಯಮಗಳಿಂದ ಕೆಟ್ಟ ಹೆಸರು ಬರುತ್ತಿರುವ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಬೇಸರಿಸಿದ್ದಾರೆ.
ರಾಷ್ಟ್ರ-ರಾಜ್ಯದೆಲ್ಲೆಲ್ಲೋ ಉಗ್ರರ ಚಟುವಟಿಕೆ ಅಥವಾ ಕಾನೂನುಬಾಹೀರ ಚಟುವಟಿಕೆಗಳು ನಡೆದಾಗ ಮಾಧ್ಯಮಗಳು ಉತ್ತರ ಕನ್ನಡ, ಭಟ್ಕಳಗಳ ಹೆಸರನ್ನು ಎಳೆದುತರುತ್ತಿವೆ. ಹೀಗೆ ಹೊರಗಿನ ವಿಧ್ವಂಸಕ ಕೆಲಸಗಳಿಗೆ ಜಿಲ್ಲೆಯ ಹೆಸರನ್ನು ಎಳೆದುತಂದು ಜಿಲ್ಲೆಗೆ ಕಳಂಕ ತರುತ್ತಿರುವ ಮಾಧ್ಯಮಗಳ ಬಗ್ಗೆ ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಿಗೆ ಜಿಲ್ಲೆಯ ಹೆಸರನ್ನು ತಳುಕು ಹಾಕಿ ಉಗ್ರರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾಗಳಿಂದ ಮಾತನಾಡಿದ್ದಾರೆ ಎಂದು ಮಾಧ್ಯಮಗಳು ಬೊಬ್ಬಿರಿದಿದ್ದವು.
ಆದರೆ ಕೆಲವು ದಿವಸಗಳ ನಂತರ ಅದು ಸುಳ್ಳುಸುದ್ದಿ ಎಂದು ಸಾಬೀತಾಯಿತು. ಇಂದು ಕೂಡಾ ಡ್ರಕ್ಸ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿರುವ ಜಿಲ್ಲೆಯ ಜನರು ಮತ್ತು ಶಿರಸಿಯನ್ನು ಉಲ್ಲೇಖಿಸಿ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿದ್ದವು. ಈ ಸುಳ್ಳು ವರದಿಗಳಿಗೆ ರೆಕ್ಕೆ ಪುಕ್ಕ ಕಟ್ಟಿದ ಕೆಲವು ಲಾಭಕೋರ ರಾಜಕೀಯ ವ್ಯಕ್ತಿಗಳು, ಪತ್ರಕರ್ತರು ಈ ಗಾಳಿಸುದ್ದಿ, ವದಂತಿಗಳನ್ನು ಸತ್ಯವೆಂದು ಬಿಂಬಿಸುವ ಅವರ ಲಾಗಾಯ್ತಿನ ಪೂರ್ವಾಗ್ರಹದಂತೆ ಇಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ಪ್ರಾರಂಭಿಸಿದ್ದರು.
ವಾಸ್ತವವೆಂದರೆ…… ಜಿಲ್ಲೆಯ ರಾಜಕೀಯ, ಮಾಧ್ಯಮ ಕ್ಷೇತ್ರ ನಿಯಂತ್ರಿಸುವ ಕೆಲವು ಕುತ್ಸಿತ ಮನೋಭಾವದ ಮತಾಂಧರು ಮಾಡುವ ಇಂಥ ರಾಜಕೀಯ ಲಾಭದ ಬಲಪಂಥದ ದೇಶದ್ರೋಹಿ ಚಟುವಟಿಕೆಗಳಿಂದಾಗಿ ಜಿಲ್ಲೆಯ ಪೊಲೀಸರಿಗೆ, ಸ್ಥಳಿಯರಿಗೆ ಕೆಟ್ಟ ಹೆಸರು ಬರುತ್ತಿದೆ. ಇಂಥ ಬಲಪಂಥೀಯ ರಾಜಕೀಯ ಹಿತಾಸಕ್ತ ಮಾಧ್ಯಮ ಕ್ರಿಮಿ ಗಳಿಂದಾಗಿ ಜಿಲ್ಲೆಯ ಹೆಸರಿಗೆ ಕಳಂಕ ಬರುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪಿಸಿದ್ದರೆ ಇಂಥ ಪಟ್ಟಭದ್ರ ಬಲಪಂಥೀಯ ಎಡಬಿಡಂಗಿಗಳ ಕುಂಡೆ ಮೇಲೆ ಒದ್ದು ಚಡ್ಡಿ ಬಿಚ್ಚಿಸುವ ಬಗ್ಗೆ ಪೊಲೀಸ್ ಇಲಾಖೆ ಕೂಡಾ ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಥ ಗಾಳಿಸುದ್ದಿಗಳು, ಸುಳ್ಳುಗಳ ಮೂಲಕವೇ ರಾಜಕೀಯ, ಮಾಧ್ಯಮಗಳ ಲಾಭ ಉಣ್ಣುತ್ತಿರುವ ಕೆಲವು ಸಮಾಜವಿರೋಧಿಗಳು ಇಂಥ ಹರಾಕಿರಿ ಮಾಡುತ್ತಿದ್ದು ಅದು ಬಹಿರಂಗವಾಗಿ ಸತ್ಯ ದರ್ಶನವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇಂಥ ಲಾಭಕೋರ ಸಂಘ, ಪಕ್ಷಗಳ ಬಗ್ಗೆ ಜನವಿರೋಧ ವ್ಯಕ್ತವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.


