

ಇಂದು ಸಿದ್ದಾಪುರದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದ್ದು ವಸಂತ್ ನಾಯ್ಕ ತಾಲೂಕ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಡಿ. ಸಿ. ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆ ಹಲವು ಕೋನ, ನಾನಾ ಕಾರಣಗಳಿಂದ ವಿಶೇಷ ಎನಿಸಿದೆ.
ಶಿಕ್ಷಕರ ದಿನಾಚರಣೆ – ಇಂದು ನಾಡಿನಾದ್ಯಂತ ಶಿಕ್ಷಕರ ದಿನಾಚರಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯುತ್ತಿವೆ. ಸಿದ್ದಾಪುರದಲ್ಲಿ ರಾಘವೇಂದ್ರ ಮಠದಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಪ್ರಶಸ್ತಿ ಪುರಸ್ಕ್ರತ ಶಿಕ್ಷಕ, ಶಿಕ್ಷಕಿಯರು ಎಲ್ಲಾ ಗುರುಮಾತೆ, ಶಿಕ್ಷಕರಿಗೆ, ಗುರುವರ್ಯರಿಗೆ ಅಭಿನಂದನೆ, ಶುಭಾಶಯಗಳು.

