

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕರೋನಾ ಸೋಂಕಿತರ ಪ್ರಮಾಣ 238 ಆಗಿದ್ದು ಇದು ಜಿಲ್ಲೆಯಲ್ಲಿ ಅತಿಹೆಚ್ಚು ಒಂದು ದಿನದ ದಾಖಲೆಯಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್ ದೃಢಪಟ್ಟವರ ಸಂಖ್ಯೆ ಬರೋಬ್ಬರಿ 5999. ಈವರೆಗೆ ಜಿಲ್ಲೆಯಲ್ಲಿ 60 ಕರೋನಾ ಸಾವುಗಳಾಗಿವೆ. ಇಂದು ಕುಮಟಾ 45, ಶಿರಸಿ 35, ಯಲ್ಲಾಪುರ, ಹಳಿಯಾಳ ಗಳ ತಲಾ 28, ಹೊನ್ನಾವರ 26 ಕಾರವಾರ 21 ಸಿದ್ದಾಪುರದ 18 ಜನರಲ್ಲಿ ಕರೋನಾ ದೃಢವಾಗಿದೆ.
ಸಿದ್ದಾಪುರದಲ್ಲಿ ನಗರದಲ್ಲಿ 13, ಅಣಲೇಬೈಲ್ 5, ನೀಲಕುಂದ 6 ಕವಂಚೂರು, ಕಾನಸೂರುಗಳಲ್ಲಿ ತಲಾ ಒಬ್ಬರಲ್ಲಿ ಕರೋನಾ ದೃಢವಾಗಿವೆ.
