

ಕಳೆದ ಎಸ್.ಎಸ್. ಎಲ್.ಸಿ. ಪರೀಕ್ಷೆಯ ರಾಜ್ಯ ಶ್ರೇಣಿಯ ಪ್ರಥಮಗಳ ಪಟ್ಟಿ ಮುಂದುವರಿದಿದೆ. ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿನಿ ಮಾನಸಾ ಯಜ್ಞೇಶ್ವರ ನಾಯ್ಕ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 4 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದಿದ್ದಾಳೆ.

625 ಕ್ಕೆ 619 ಅಂಕಗಳನ್ನು ಗಳಿಸಿ ಹುಟ್ಟೂರು ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆ ಹಾಗೂ ಶಿರಸಿ ಲಯನ್ಸ್ ಶಾಲೆಗೆ ಕೀರ್ತಿ ತಂದಿರುವ ಈಕೆ ಸಂಗೀತ, ಭಾಷಣ ಸೇರಿದ ಅನೇಕ ಪ್ರತಿಭೆಗಳ ಬಹುಮುಖಿ ವಿದ್ಯಾರ್ಥಿನಿ. ಸಿದ್ಧಾಪುರದ ಬೇಡ್ಕಣಿ ಯಜ್ಞೇಶ್ವರ ನಾಯ್ಕ ಮತ್ತು ಕುಮದಾ ನಾಯ್ಕ ದಂಪತಿಗಳ ಮಗಳಾದ ಮಾನಸ ನಿರೀಕ್ಷಿಸಿದ್ದಷ್ಟು ಅಂಕಗಳು ಬರಲಿಲ್ಲವೆಂದು ಮರುಮೌಲ್ಯಮಾಪನ ಮಾಡಿಸಿ ಹೆಚ್ಚುವರಿ ನಾಲ್ಕು ಅಂಕಗಳಿಂದ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದಿದ್ದಾಳೆ.
