

ಬಿ.ಜೆ.ಪಿ ಯಲ್ಲಿ ವಿಶೇಶವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷದಲ್ಲಿ ಅಧಿಕಾರ ಕೇಂದ್ರೀಕರಣ, ಕೆಲವೇ ಜಾತಿ, ಸಮೂದಾಯ,ತಾಲೂಕುಗಳಿಗೆ ನ್ಯಾಯ ದೊರೆಯುವ, ಪಕ್ಷಕ್ಕೆ ದುಡಿದ, ಪಕ್ಷಕ್ಕೆ ಸಹಕರಿಸಿದ ತಾಲೂಕು,ಮುಖಂಡರು ಸಮೂದಾಯಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಪಕ್ಷದ ವಲಯದಲ್ಲಿ ಅಸಮಧಾನ ಮಡುಗಟ್ಟಿದೆ. ಈ ಬಗ್ಗೆ ಸೂಚ್ಯವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿ.ಜೆ.ಪಿ. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಜಿ,ನಾಯ್ಕ ಹಣಜಿಬೈಲ್ ಈ ವಿಷಯ ವಿವರಿಸಿದರು.
ಯಲ್ಲಾಪುರದಲ್ಲಿ ಸಚಿವರು, ಶಾಸಕರು, ವಿ.ಪ.ಸದಸ್ಯರು, ಎರಡೆರಡು ನಿಗಮ ಮಂಡಳಿಗಳ ಅಧ್ಯಕ್ಷರಿರುತ್ತಾರೆ ಶಿರಸಿಯಲ್ಲಿ ಸಂಸದರು,ಶಾಸಕರು, ವಿಧಾನಸಭಾ ಅಧ್ಯಕ್ಷರಿರುತ್ತಾರೆ ಹಾಗೆಯೇ ಶಾಂತರಾಮ ಸಿದ್ದಿಯೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಒಂದೇ ಸಮೂದಾಯದವರು ಈ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆಯಾಗಿದೆ. ಪ್ರಾದೇಶಿಕ ಅಸಮತೋಲನ, ಕೆಲವು ಸಮೂದಾಯಗಳ ತುಷ್ಟೀಕರಣ, ಅನೇಕ ಪ್ರಮುಖ ಸಮೂದಾಯಗಳ ಉಪೇಕ್ಷೆ ಈ ವಿದ್ಯಮಾನಗಳೆಲ್ಲಾ ಪಕ್ಷದ ಗಮನಕ್ಕಿದೆ. ಈ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗಿ ನ್ಯಾಯ ದೊರಕಿಸುವ ಭರವಸೆ ಸಿಕ್ಕಿದೆ ಎಂದರು.
ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿ.ಜೆ.ಪಿ. ಆಯಕಟ್ಟಿನ ಜಾಗದಲ್ಲಿ ಮೇಲ್ವರ್ಗದವರನ್ನು ಕೂಡ್ರಿಸಿ ಅಹಿಂದ್ ಕಾರ್ಯಕರ್ತರನ್ನು ಉಪೇಕ್ಷಿಸುತ್ತಿರುವ ಬಗ್ಗೆ ಒಂದು ವರ್ಷದ ಹಿಂದೆ ಬಿ.ಜೆ.ಪಿ. ವಲಯದಲ್ಲಿ ಅಸಮಧಾನ ಸ್ಫೋಟವಾಗಿ ರಾಜ್ಯ ಜೀವ ವೈವಿಧ್ಯತಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಅನಂತ ಹೆಗಡೆ ಆಶೀಸರ ನೇಮಕ ತಡೆಹಿಡಿಯುವಂತೆ ಪ್ರತಿಭಟನೆ ವ್ಯಕ್ತವಾಗಿತ್ತು.
