all about drugs- ಅಂತರಾಷ್ಟ್ರೀಯ ‘ಡ್ರಗ್ಸ್’ ದಂಧೆ..!ದಾವೂದ್ ಇಬ್ರಾಹಿಂನಿಂದ ಹಿಡಿದು ಅರುಣ ಗೌಳಿವರೆಗೂ

ದಾವೂದ್ ಇಬ್ರಾಹಿಂನಿಂದ ಹಿಡಿದು ಅರುಣ ಗೌಳಿವರೆಗೂ ಡ್ರಗ್ಸ್ ಮಹಾಸಾಗರವೂ.!!ಮರ್ಲಿನ್ ಮನ್ರೋನಿಂದ ಹಿಡಿದು ಸಂಜನಾ, ರಾಗಿಣಿ, ಶ್ರಮೀಳಾ ಮಾಂಡ್ರೆಯ ವರೆಗೂ.!!!

ಸ್ಯಾಂಡಲ್‌ವುಡ್‌ನ‌ಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಹೊಸ ಸುದ್ದಿಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಮಾದಕ ದ್ರವ್ಯಗಳ ವ್ಯಸನಕ್ಕೆ ಚಂದನ ವನದ ಕೆಲ ತಾರೆಯರು, ಕಿರುತೆರೆ ನಟರು, ಗಾಯಕರು ಸಿಲುಕಿದ್ದಾರಾ? ಎಂಬ ಉತ್ತರವಾಗಿ ಹೌದು ಒಂದಲ್ಲಾ ಹತ್ತಾರು ಜನರು ಈ ಡ್ರಗ್ಸ್ ಎಂಬ ಅಮೃತಕ್ಕೆ ದಾಸಾರಾಗಿದ್ದಾರೆ ಎಂಬ ಉತ್ತರ ಎಲ್ಲರನ್ನೂ ದಂಗುಬಡಿಸಿದೆ.

ಈ ಜಾಲದ ವ್ಯಾಪ್ತಿ ಎಷ್ಟು ದೊಡ್ಡದು ಎನ್ನುವ ಕುರಿತು ಚರ್ಚೆಗಳು ಶುರುವಾಗಿ ಹೊಚ್ಚಹೊಸ, ಹೆಚ್ಚುಹೆಚ್ಚು ಸುದ್ದಿಗಳು ಬರಲಾಂಭಿಸಿವೆ.ಈ ಹೊತ್ತಲ್ಲೇ, ಅತ್ತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೂ ಡ್ರಗ್ಸ್‌ ಅಮೃತ ಕಾರಣವಾಯಿತೇ ಮತ್ತು ಈ ಡ್ರಗ್ಸ್ ಮಾಫಿಯಾನಂಟಿದೆಯೇ ಎನ್ನುವ ಕುರಿತೂ ತನಿಖೆಗಳು ಆರಂಭವಾಗಿವೆ. ಹಾಗೆ ನೋಡಿದರೆ ಮಾದಕ ದ್ರವ್ಯ ವ್ಯಸನವೆನ್ನುವುದು ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ ಎಂಬುದು ಹೌದು.ಈ ಡ್ರಗ್ಸ್ ದಂಧೆ ಮತ್ತು ಈ ಡ್ರಗ್ಸ್ ಆಪೂಸನೆಯು ತೆಲುಗು, ಮಲಯಾಳಂ, ಬೆಂಗಾಲಿ, ಮರಾಠಿ ಚಿತ್ರರಂಗದಲ್ಲೂ ಈ ವಿಷಯ ಸದ್ದು ಮಾಡಿದೆ.

ಮುಖ್ಯವಾಗಿ ಬಾಲಿವುಡ್‌ನ‌ಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಿರುವ ಮಹಾನ್ ಕಾರ್ಯ ದೂರದ ಹಾಲಿವುಡ್‌ನ‌ಲ್ಲಂತೂ ಕಳೆದ ಏಳು ದಶಕಗಳಲ್ಲೇ ನೂರಾರು ತಾರೆಯರು ಇದರ ಕಾರಣಕ್ಕೇ ಡ್ರಗ್ಸ್‌ಗಳಿಂದ ಜೀವ ಕಳೆದುಕೊಂಡಿದ್ದಾರೆ..!ಒಂದು ಕಾಲದಲ್ಲಿ ಭೂಗತ ಲೋಕದೊಂದಿಗೆ ಬೆಸೆದುಹೋಗಿದ್ದ ಡ್ರಗ್ಸ್ ಬಾಲಿವುಡ್‌ಗೆ ಈಗಲೂ ಡ್ರಗ್ಸ್‌ ಮಾಫಿಯಾದೊಂದಿಗೆ ಅವಿನಾಭಾವ ನಂಟಿದೆ. ಒಂದು ಸಮಯದಲ್ಲಂತೂ ಮಾದಕ ವ್ಯಸನಿಕ್ಕೀಡಾದ ತಾರೆಯರ ಸಂಖ್ಯೆಯೂ ದಂಡಿಯಾಗಿಯೇ ಇತ್ತು ಮತ್ತು ಈ ಕ್ಷಣಕ್ಕೂ ಇದೆ. ಮಾದಕ ವ್ಯಸನ ಎಂದಾಕ್ಷಣ ಮೊದಲು ನೆನಪಾಗುವಹೆಸರೇ ಸಂಜಯ್‌ ದತ್‌ ಅವರದ್ದು.

ಶಾಲಾದಿನಗಳಲ್ಲೇ ಮಾದಕ ವ್ಯಸನಕ್ಕೆ, ಮದ್ಯ, ಸಿಗರೇಟ್‌ ಚಟಕ್ಕೆ ದಾಸರಾದ ಸಂಜಯ್‌ ದತ್‌, ಈ ಕಾರಣದಿಂದಲೇ ತಮ್ಮ ವೃತ್ತಿ ಜೀವನವನ್ನು ಹಾಳುಮಾಡಿಕೊಳ್ಳುವ ಹಂತ ತಲುಪಿದವರು. ಕೊನೆಗೆ ವರ್ಷಗಟ್ಟಲೇ ರಿಹ್ಯಾಬಿಲಿಟೇಷನ್‌ ಸೆಂಟರ್‌ಗಳಿಗೆ ಅಲೆದಾಡಿ ಚಿಕಿತ್ಸೆ ಪಡೆದ ಮೇಲೆ ಈ ದಾಸ್ಯದಿಂದ ಹೊರ ಬರುವಂತಾಯಿತು. ಹೀಗಂತಾ ಸಂಜಯ್ ದತ್ ರೇ ಹೇಳಿದ್ದಾರೆ ಈಗಷ್ಟೇ. ಡ್ರಗ್ಸ್‌ ದಾಸ್ಯದಿಂದ ಮುಕ್ತವಾಗಲು ಸಂಜಯ್‌ ದತ್‌ಗೆ ಬರೋಬ್ಬರಿ 10ವರ್ಷಗಳು ಹಿಡಿದವಂತೆ ಎಂದರೆ ಈ ಡ್ರಗ್ಸ್ ಸೊಬಗು ಎಷ್ಟಿರಬಹುದು.

‘ಮುಂಬೈ ಬ್ಲ್ಯಾಕ್‌’ ಬಾಲಿವುಡ್‌ಗೆ ಕಾಲಿಟ್ಟಾಗ–ಬಾಲಿವುಡ್‌ನ‌ಲ್ಲಿ ಡ್ರಗ್ಸ್‌ ಜಾಲ ವಿಸ್ತರಿಸಲಾರಂಭಿಸಿದ್ದು 70 ರ ದಶಕದಲ್ಲಿ ಎಂದು ನಾವಲ್ಲ ನಾರ್ಕಾಟಿಕ್ಸ್‌ ಕಂಟ್ರೋಲ್‌ ಬ್ಯೂರೋನೇ ಹೇಳುತ್ತಿದೆ. ಆ ಸಮಯದಲ್ಲಿ ಮುಂಬೈನಲ್ಲಿ ಭೂಗತ ಪಾತಕಿಗಳ ಹಾವಳಿ ಆರಂಭವಾಗತೊಡಗಿತ್ತು. ಬಾಲಿವುಡ್‌ ಮಂದಿಯ ಬಳಿ ಹಣವಿತ್ತು. ಮಾಫಿಯಾಗಳ ಬಳಿ ಡ್ರಗ್ಸ್‌ ಇತ್ತು. ಅಲ್ಲಿಂದ ಆರಂಭವಾಯಿತು ಈ ಅಪವಿತ್ರ ನಂಟು. ಮಾಫಿಯಾಗಳಾದ ಕರೀಮಲಾಲ ಮತ್ತು ಝುಮಾಖಾನ್‌ ಚರಸ್ವಾಲ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಡ್ರಗ್ಸ್‌ ಮಾಫಿಯಾದ ಜತೆಗೂಡಿ ಮೆರುವಾನಾ ಮತ್ತು ಗಾಂಜಾವನ್ನು ಇತರೆ ರಾಸಾಯನಿಕಗಳೊಂದಿಗೆ ಬೆರೆಸಿ ‘ಮುಂಬೈ ಬ್ಲ್ಯಾಕ್‌’ ಎನ್ನುವ ಹೆಸರಿನಲ್ಲಿ ಮಾರಾಟ ಮಾಡಲಾರಂಭಿಸಿದರು.ಆರಂಭದಲ್ಲಿ ಮುಂಬೈನ ಗಲ್ಲಿಗಳಲ್ಲಿ ರಹಸ್ಯವಾಗಿ ಮಾರಾಟವಾಗಲಾರಂಭಿಸಿದ ಮುಂಬೈ ಬ್ಲ್ಯಾಕ್‌ ಕೆಲವೇ ಸಮಯದಲ್ಲಿ ಬಾಲಿವುಡ್‌ನ‌ ಪಾರ್ಟಿಗಳಲ್ಲಿ ಪ್ರಮುಖವಸ್ತುವಾಗಿಬಿಟ್ಟಿತು.

ರೇವ್‌ ಪಾರ್ಟಿಗಳು, ಪಬ್‌ಗಳು ಮುಂಬೈ ಬ್ಲ್ಯಾಕ್‌ ಇಲ್ಲದೇ ಅಪೂರ್ಣ ಎನ್ನುವ ಹಂತ ತಲುಪಿತ್ತು.ಪಂಜಾಬಿ ರ್ಯಾಪ್‌ಗಳಲ್ಲಿ ಡ್ರಗ್ಸ್‌, ಗಾಡಿ, ಪೈಸಾ!–ನೀವು ಇತ್ತೀಚೆಗೆ ಕೆಲ ವರ್ಷಗಳಿಂದ ಬರುತ್ತಿರುವ ಪಂಜಾಬಿ ಹಾಡುಗಳನ್ನು (ರ್ಯಾಪ್‌) ಕೇಳಿನೋಡಿ. ಬಹುತೇಕ ಹಾಡುಗಳಲ್ಲಿ ಡ್ರಗ್ಸ್‌, ಮದ್ಯಪಾನ, ಐಷಾರಾಮಿ ಕಾರುಗಳು, ಸೆಕ್ಸ್‌ ವಿಚಾರವನ್ನೇ ವೈಭವೀಕರಿಸಲಾಗಿರುತ್ತದೆ. ಇದೆಲ್ಲ ಸಮಾಜದಲ್ಲಿನ ವಸ್ತುಸ್ಥಿತಿಯ ಪ್ರತಿಫ‌ಲವನಷ್ಟೇ ಅಲ್ಲದೇ ಬೇರೇನೂಅಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಿರಿಯ ಗಾಯಕ ದಲೇರ್‌ ಮೆಹಂದಿ.

ದಾವೂದ್‌ ನಂಟು–ಬಾಲಿವುಡ್‌ ಅಷ್ಟೇ ಅಲ್ಲ, ದಿನಗಳೆದಂತೆ, ವಿವಿಧ ಚಿತ್ರರಂಗಗಳು, ಸಿರಿವಂತರ ವಲಯದಲ್ಲಿ ಡ್ರಗ್ಸ್‌ ಜಾಲ ವಿಸ್ತರಿಸುತ್ತಲೇ ಹೋಯಿತು. ಈ ದಂಧೆಯನ್ನು ಭಾರತೀಯ ಸಿನೆಮಾರಂಗದಲ್ಲಿ ಹೆಚ್ಚು ಹರಡಿದವನೆಂದರೆ ಇಕ್ಬಾಲ್‌ ಮಿರ್ಚಿ. ಇನ್ನು ಯಾವಾಗ ಈ ದಂಧೆಯಲ್ಲಿ ಕಾಂಚಾಣ ಕುಣಿದಾಡುತ್ತದೆ ಎಂದು ತಿಳಿಯಿತೋ, ಆಗಷ್ಟೇ ಮುಂಬೈ ಅಂಡರ್‌ ವರ್ಲ್ಡ್ ನಲ್ಲಿ ನೆಲೆ ಹುಡುಕಿಕೊಳ್ಳುತ್ತಿದ್ದ ಶೇಖ್‌ ದಾವೂದ್‌ ಇಬ್ರಾಹಿಮ್‌ ಕಸ್ಕರ್‌, ಅಲಿಯಾಸ್‌ ದಾವೂದ್‌ ಇಬ್ರಾಹಿಂ ಈ ವ್ಯವಹಾರದಲ್ಲಿಧುಮುಕಿಬಿಟ್ಟ. ಈ ದಾವೂದ್‌ ಆ ಸಮಯದಲ್ಲಿ ಬಾಲಿವುಡ್‌ನ‌ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದ. ಆ ಪಾರ್ಟಿಗಳಿಗೆಲ್ಲ ಆತನಿಂದ ಭರಪೂರ ಪ್ರಮಾಣದಲ್ಲಿ ಮಾದಕ ದ್ರವ್ಯ ಸರಬರಾಜಾಗತೊಡಗಿತು. ದಾವೂದ್‌ ಅಷ್ಟೇ ಅಲ್ಲದೇ ಛೋಟಾ ಶಕೀಲ್‌, ಅಬು ಸಲೇಮ್, ಛೋಟಾರಾಜನ್‌, ಎಜಾಝ್ ಲಕಡಾವಾಲಾ, ಅರುಣ ಗೌಳಿ… ಹೀಗೆಯೇ ಮುಂತಾದವರೆಲ್ಲ ಈ ದಂಧೆಯಲ್ಲಿ ಮುಳುಗಿದ್ದವರೇ..!

ಈಗಲೂ ದಾವೂದ್‌ ಪಾಕಿಸ್ತಾನದ ಕರಾಚಿಯಲ್ಲಿ ಕುಳಿತುಕೊಂಡೇ ಡ್ರಗ್ಸ್‌ ವ್ಯವಹಾರ ನಡೆಸುತ್ತಿದ್ದಾನೆ. ‘ಡಿ’ ಕಂಪನಿಯ ಬಹುತೇಕ ಆದಾಯದ ಮೂಲವೇಮಾದಕ ದ್ರವ್ಯವೇ ಆಗಿದೆ ಅನೇಕಾನೇಕ ಪರಿಣತರು. ದಾವೂದ್‌ ಪಾಕಿಸ್ತಾನದ ಜತೆಗೂಡಿ ದುಬೈ, ಲಂಡನ್‌, ಸಿಂಗಾಪೂರ, ಶ್ರೀಲಂಕಾ, ನೇಪಾಳ ಹಾಗೂ ಆಫ್ರಿಕನ್‌ ರಾಷ್ಟ್ರಗಳಲ್ಲಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದಾನೆ, ಮತ್ತು ನಡೆಸುತ್ತಾನೆ ಈಗಲೂ ಕೂಡ. ಆಫ್ಘಾನಿಸ್ತಾನ ಹತ್ತಿರವಿರುವುದರಿಂದ ಕಚ್ಚಾ ವಸ್ತುಗಳ ಕೊರತೆ ಅವನಿಗಿಲ್ಲದಾಗಿದೆ..!

ಹಾಲಿವುಡ್‌ನ‌ ಮಾತೇ ಬೇಡ!–ಹಾಲಿವುಡ್‌ನ‌ಲ್ಲಿ ಮಾದಕ ದ್ರವ್ಯ ವ್ಯಸನದಿಂದ ಹೈರಾಣಾದವರ ಪಟ್ಟಿ ಮಾಡಿದರೆ ಪುಟಗಟ್ಟಲೇ ಆಗುತ್ತದೆ. ಡ್ರಗ್‌ ಓವರ್‌ಡೋಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಅಧಿಕವಿದೆ. ವಿಶ್ವವಿಖ್ಯಾತ ಮಾರ್ಲಿನ್‌ ಮನ್ರೊ, ಸಂಗೀತಗಾರರಾದ ಜಿಮ್ಮಿ ಹೆಂಡ್ರಿಕ್ಸ್‌, ಜಿಮ್‌ ಮಾರಿಸನ್‌ನಿಂದ ಹಿಡಿದು, ಪಾಪ್‌ ಐಕಾನ್‌ ಮೈಕೆಲ್‌ಜಾಕ್ಸನ್‌, ಎಮಿ ವೈನ್‌ಹೌಸ್‌, ವಿಟ್ನಿ ಹೂಸ್ಟನ್‌ವರೆಗೂ 1950ರ ದಶಕದಿಂದ ನೂರಾರು ಸ್ಟಾರ್‌ಗಳು ಡ್ರಗ್ಸ್‌ಗೆ ಬಲಿಯಾಗಿದ್ದಾರೆ. ಹಾಲಿವುಡ್‌ಗೆ ಅತಿಯಾದ ಡ್ರಗ್ಸ್‌ ಚಟ ಹಚ್ಚಿಸುವಲ್ಲಿ ಕೊಲಂಬಿಯಾದ ಅಂದಿನ ಕುಖ್ಯಾತ ಡ್ರಗ್ಸ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ ಕಾರಣ. ಕೊಲಂಬಿಯಾದ ಡ್ರಗ್‌ ಕಾರ್ಟೆಲ್‌ಗ‌ಳ ಹಾವಳಿ ತಗ್ಗುತ್ತಿದ್ದಂತೆಯೇ, ಮೆಕ್ಸಿಕೋದಲ್ಲಿ ಡ್ರಗ್‌ ಕಾರ್ಟೆಲ್‌ಗ‌ಳ ಹಾವಳಿ ಅಧಿಕವಾಯಿತು. ಈಗ ಮೆಕ್ಸಿಕೋದಿಂದ ಕಳ್ಳಮಾರ್ಗದ ಮೂಲಕ ಅಮೆರಿಕ ಸೇರುತ್ತಿರುವ ಮಾದಕ ದ್ರವ್ಯಗಳು, ಸುಲಭವಾಗಿ ಹಾಲಿವುಡ್‌ಗೂ ಟಿಕೆಟ್‌ ಪಡೆಯುತ್ತಿವೆ. ಓಪ್ರಾ ವಿನ್‌ಫ್ರೆ, ರಾಬರ್ಟ್‌ ಡೌನಿ ಜೂನಿಯರ್‌, ಸ್ಟೀಫ‌ನ್‌ ಕಿಂಗ್‌, ಮ್ಯಾಥ್ಯೂ ಪೆರ್ರಿ, ಏಂಜೆಲಿನಾ ಜೋಲಿ ಸೇರಿದಂತೆ ಅನೇಕ ತಾರೆಯರು ಒಂದಲ್ಲ ಒಂದು ಸಮಯದಲ್ಲಿ ಕೋಕೇನ್‌ನ ದಾಸರಾಗಿದ್ದವರೇ..!ಯಾರೂ ನಂಬಲಿಕ್ಕಿಲ್ಲ,

ಎಲ್‌ಟಿಟಿಇಯದ್ದೂ ಇದೇ ಆಗಿತ್ತು ದಂಧೆ–ಎಲ್‌ಟಿಟಿಇ ಕೂಡ ಈ ಮಾದಕ ದ್ರವ್ಯಗಳ ವ್ಯವಹಾರದಲ್ಲಿ ತೊಡಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್‌ ನಿಂದ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಮಾದಕ ದ್ರವ್ಯಗಳು ಟುಟಿಕಾರಿನ್‌, ರಾಮೇಶ್ವರಂ ಮತ್ತು ಕೊಚ್ಚಿ ಮೂಲಕ ಅಂದು ಎಲ್‌ಟಿಟಿಇ ಹಿಡಿತದಲ್ಲಿದ್ದ ವೆಲೆಟ್ಟಿತೊರೈಗೆ ಸಾಗಣೆಯಾಗುತ್ತಿತ್ತು.ನಾರ್ಕಾಟಿಕ್‌ ಕಂಟ್ರೋಲ್‌ ಬ್ಯೂರೋದ ಪ್ರಕಾರ ಎಲ್‌ಟಿಟಿಇ ಅತಿ ಬಲಿಷ್ಠವಾಗಿದ್ದ ವೇಳೆಯಲ್ಲಿ ಅದು ಭಾರತದ ಡ್ರಗ್‌ ಮಾಫಿಯಾದೊಂದಿಗೆ ಜೋರಾಗಿಯೇ ವಹಿವಾಟು ನಡೆಸುತ್ತಿತ್ತು. ದುರಂತವೆಂದರೆ, ಅಂದು ಎಲ್‌ಟಿಟಿಇಗೆ ಶ್ರೀಲಂಕಾದ ಮಾದಕ ದ್ರವ್ಯ ತಡೆ ಘಟಕದ ಕೆಲ ಅಧಿಕಾರಿಗಳೇ ಸಹಕರಿಸುತ್ತಿದ್ದರು..! ಮುಂಬೈ ಭೂಗತಲೋಕದಿಂದ ಪ್ರೇರಣೆ ಪಡೆದ ಎಲ್‌ಟಿಟಿಇ ಶ್ರೀಲಂಕಾದಲ್ಲಿನ ಸಿನೆಮಾ ಇಂಡಸ್ಟ್ರಿಗೆ, ಹೈಪ್ರೊಫೈಲ್ ಮಂದಿಗೆ ಮಾದಕ ದ್ರವ್ಯ ರವಾನಿಸುತ್ತಿತ್ತು..!

ಏಷ್ಯಾದಲ್ಲಿ ಆಫ್ಘಾನಿಸ್ತಾನವೇ ಡ್ರಗ್ಸ್‌ ಕೇಂದ್ರ–ಒಂದೊಮ್ಮೆ ಉಗ್ರಗಾಮಿಗಳ ಸ್ವರ್ಗವಾಗಿದ್ದ ಅಫ್ಘಾನಿಸ್ಥಾನ ಚಿಕ್ಕ ಪ್ರಮಾಣದಲ್ಲಿ ಅಫೀಮ್‌ ಉತ್ಪಾದಿಸುತಿದ್ದ ರಾಷ್ಟದಿಂದ ಪ್ರಪಂಚದ ಅತೀಕುಖ್ಯಾತ ಕಾರ್ಟೆಲ್‌ ಆಗಿ ಬದಲಾಗಿದ್ದರ ಹಿಂದೆ ತಾಲಿಬಾನಿಗಳು, ಪಾಕಿಸ್ತಾನಿ ಸೇನೆ, ಅಮೆರಿಕನ್‌ ಸೇನೆಯ ಕೈವಾಡವೂ ಇದೆ. ಪಾಕಿಸ್ತಾನದ ಸೇನೆಯ ಕೆಲವು ಹಿರಿಯ ಸದಸ್ಯರಂತೂ ಈ ವ್ಯವಹಾರದಿಂದ ಕೋಟ್ಯಧಿಪತಿಗಳಾಗಿದ್ದಾರೆ.ಉಡ್ತಾ ಪಂಜಾಬ್‌–850 ಕೋಟಿ ವಾರ್ಷಿಕ ಆದಾಯದ ಸಂಗೀತದ ಇಂಡಸ್ಟ್ರಿ ಹೊಂದಿರುವ ಪಂಜಾಬ್‌, ಮಾದಕ ದ್ರವ್ಯಕ್ಕೆ ಕುಖ್ಯಾತಿ ಪಡೆದಿದೆ. ಕೆಲ ವರ್ಷಗಳಿಂದಂತೂ ಪಂಜಾಬ್‌ನ ಯುವಕರು ಯಾವ ಮಟ್ಟಕ್ಕೆ ಡ್ರಗ್ಸ್‌ ದಾಸರಾಗುತ್ತಿದ್ದಾರೆ ಎಂದರೆ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವ ವಿಷಯವೇ ಅಲ್ಲಿ ಮುನ್ನೆಲೆಯಲ್ಲಿತ್ತು.ರ್ಯಾಪ್‌ ಹಾಡುಗಳಿಗೆ ಜಗದ್ವಿಖ್ಯಾತವಾಗಿರುವ ಪಂಜಾಬಿ ಮ್ಯೂಸಿಕ್‌ ಇಂಡಸ್ಟ್ರಿ ರಾತ್ರೋರಾತ್ರಿ ಹಲವಾರು ಸ್ಟಾರ್‌ಗಳನ್ನು ಹುಟ್ಟುಹಾಕುತ್ತಿದೆ. ಕೋಟ್ಯಧಿಪತಿ ಸಂಗೀತಗಾರರ ದಂಡೇ ಸೃಷ್ಟಿಯಾಗಿಬಿಟ್ಟಿದೆ. ‘ಸ್ಟಾರ್‌ ಆಗುವುದೆಂದರೆ ಸುಲಭವಲ್ಲ. ಸ್ಟಾರ್‌ಗಿರಿ ಹಲವು ಅಪಾಯಗಳನ್ನೂ ಜತೆಗೆ ಹೊತ್ತುತರುತ್ತದೆ. ಒಬ್ಬ ವ್ಯಕ್ತಿ ಹಿಟ್‌ ಆದ ಅಂದರೆ, ಕೂಡಲೇ ಆತನ ವಲಯ ಬದಲಾಗಿಬಿಡುತ್ತದೆ. ನಿತ್ಯ ಪಾರ್ಟಿಗಳಿಗೆ ಆಹ್ವಾನಿಸುವವರು ಹೆಚ್ಚಿಬಿಡುತ್ತಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಡ್ರಗ್ಸ್‌ ಮಾಫಿಯಾಗಳು ಇವರ ಸ್ನೇಹ ಸಂಪಾದಿಸಿ ಮಾದಕ ದ್ರವ್ಯದ ದಾಸ್ಯಕ್ಕೆ ಕೆಡವಿಬಿಡುತ್ತವೆ’.

ಹೀಗಂತ ನಾವು ಹೇಳುದಷ್ಟೇ ಅಲ್ಲ ಪಂಜಾಬ್‌ನ ಹಿರಿಯ ಪೊಲೀಸ್‌ ಅಧಿಕಾರಿ ಡಾ.ಬಲಬೀರ್‌ ಸಿಂಗ್.ಮುಂಬೈ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ನಂತರ ಹಲವು ಮಹತ್ವದ ವಿಷಯಗಳು ಹೊರಬಿದ್ದಿ ವೆ. ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ)ಕ್ಕೆ ಲಭ್ಯವಾದ ವಾಟ್ಸಪ್ ಚಾಟ್ಸ್ ನಲ್ಲಿ ಸುಶಾಂತ್ ಸಿಂಗ್ ಆಪ್ತ ಸ್ಯಾಮ್ಯುಯೆಲ್ ಮಿರಾಂಡಾಗೆ ಬಂಧಿತ ಡ್ರಗ್ ಕಿಂಗ್ ಪಿನ್ ಗಳ ಪರಿಚಯ ಇದ್ದಿರುವುದು ಬಯಲಾಗಿದೆ.ಬಂಧಿತ ಮಾದಕ ವಸ್ತು ಮಾರಾಟದ ಆರೋಪಿಗಳಾದ ಬಸಿತ್ ಪರಿಹಾರ್ ಮತ್ತು ಜೈದ್ ವಿಲಾತ್ರ ರಜಪೂತ್ ಆಪ್ತ ಗೆಳೆಯ ಸ್ಯಾಮ್ಯುಯೆಲ್ ಮಿರಾಂಡನಿಗೆ ಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲ ಮುಂಬೈನ ಬಾಂದ್ರಾ ನಿವಾಸದಲ್ಲಿ ಭೇಟಿಯಾಗಿದ್ದು, 30 ಸಾವಿರ ರೂಪಾಯಿ ಮೌಲ್ಯದ ಡ್ರಗ್ಸ್ ಪ್ಯಾಕೇಟ್ ಅನ್ನು ಖರೀದಿಸಿರುವುದಾಗಿ ಆ ವರದಿ ವಿವರಿಸಿದೆ.ಮೂಲಗಳ ಪ್ರಕಾರ, ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಕೂಡಾ ಬಸಿತ್ ಗೆಳೆಯರಾಗಿದ್ದಾರೆ.ನಂತರ ಡಗ್ಸ್ ಸರಬರಾಜು ಮಾಡಲು ಶೋವಿಕ್ ಸ್ಯಾಮ್ಯುಯೆಲ್ ಅವರನ್ನು ಬಾಸಿಟ್ ಗೆ ಪರಿಚಯಿಸಿರುವುದಾಗಿ ತಿಳಿಸಿದೆ. ನಂತರ ಬಸಿತ್ ಸ್ಯಾಮ್ಯುಯೆಲ್ ನನ್ನು ಝೈದ್ ಗೆ ಪರಿಚಯಿಸಿರುವುದಾಗಿ ವಿವರಿಸಿದೆ. ಆ ಬಳಿಕ ಝೈದ್ ನೇರವಾಗಿ ಸ್ಯಾಮ್ಯುಯೆಲ್ ಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ಆ ವರದಿ ತಿಳಿಸಿದೆ.

ಅಷ್ಟೇ ಅಲ್ಲ ಕೆಲವೊಮ್ಮೆ ಸ್ಯಾಮ್ಯುಯೆಲ್ ಝೈದ್ ಬಳಿ ಇದ್ದ ಡ್ರಗ್ಸ್ ತರಲು ಸಿಬ್ಬಂದಿಯನ್ನು ಕಳುಹಿಸುತ್ತಿದ್ದ. ಎನ್ ಸಿಬಿ ಈಗಾಗಲೇ ಬಸಿತ್ ಪರಿಹಾರ್ ಮತ್ತು ಝೈದ್ ನನ್ನು ಬಂಧಿಸಿದೆ. ಗೋವಾದಲ್ಲಿರುವ ಮತ್ತೊಬ್ಬ ಡ್ರಗ್ ಪೆಡ್ಲರ್ (ಮಾರಾಟ)ನನ್ನು ಬಂಧಿಸಬೇಕಾಗಿದೆ ಎಂದೂ ಹೇಳುತ್ತಿವೆ.ಎನ್ ಸಿಬಿ ಈವರೆಗೆ ನಡೆಸಿದ ತನಿಖೆ ಪ್ರಕಾರ, ಮಾದಕ ವಸ್ತು ಜಾಲದ ಸಂಚಿನಲ್ಲಿ ಶೋವಿಕ್ ಮತ್ತು ಸ್ಯಾಮ್ಯುಯೆಲ್ ಗೆ ಸಂಬಂಧ ಹೊಂದಿದ್ದು, ಇನ್ನಷ್ಟು ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದೂ ತಿಳಿಸಿದೆ. ಈ ಆಧಾರದ ಮೇಲೆ ತನಿಖೆ ಮತ್ತು ಬಂಧನ ನಡೆಯುತ್ತಿದೆ. ಇದೀಗ ಎನ್ ಸಿಬಿ ಡ್ರಗ್ ಸಂಚಿನ ಬಗ್ಗೆ ರಿಯಾ ಚಕ್ರವರ್ತಿಯನ್ನು ತನಿಖೆಗೆ ಒಳಪಡಿಸಿರುವುದಾಗಿ ಅದು ಹೇಳಿದೆ.ಅಲ್ಲದೇ ಒಂದು ವೇಳೆ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಮಾನಸಿಕ ಒತ್ತಡಕ್ಕೆ ಒಳಗಾಗುವಂತೆ ರಿಯಾ ಚಕ್ರವರ್ತಿ ಕೈವಾಡ ಇದೆಯಾ ಎಂಬ ಬಗ್ಗೆಯೂ ತನಿಖೆಯೂ ನಡೆಯುತ್ತಿದೆ. ಆಕೆಯಿಂದಾಗಿಯೇ ಸುಶಾಂತ್ ಮಾದಕ ವ್ಯಸನಿಯಾಗಿದ್ದಂತೂ ಸತ್ಯ ಎಂಬ ವಿಚಾರವಿದೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳಲು ರಿಯಾ ಕಾರಣ ಎಂದು ಸುಶಾಂತ್ ಕುಟುಂಬಸ್ಥರು ಆರೋಪಿಸಿದ್ದು, ತನಿಖೆಯಿಂದ ಈ ಬಗ್ಗೆ ಸತ್ಯ ಹೊರಬರಲಿದೆಯಷ್ಟೇ..!

ಎನ್ ಸಿಬಿ ಈಗಾಗಲೇ ರಿಯಾ ಚಕ್ರವರ್ತಿ, ಶೋವಿಕ್, ಆಕೆಯ ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಾಹಾ ಮತ್ತು ಗೋವಾ ಮೂಲದ ಹೋಟೆಲ್ ಉದ್ಯಮಿ ಗೌರವ್ ಆರ್ಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.ಡ್ರಗ್ಸ್ ಬಳಕೆ ಬಗ್ಗೆ ರಿಯಾ ಚಕ್ರವರ್ತಿ ಮತ್ತು ಗೌರವ್ ಆರ್ಯ ನಡುವೆ ವಾಟ್ಸಪ್ ಸಂದೇಶಗಳ ಮಾತುಕತೆ ನಡೆದಿದೆ. ಅಷ್ಟೇ ಅಲ್ಲ ಸುಶಾಂತ್ ಪ್ರಕರಣದಲ್ಲಿ ಡ್ರಗ್ ಜಾಲದ ಸಂಚಿನ ಬಗ್ಗೆ ಆಕೆ ಡಿಲೀಟ್ ಮಾಡಿರುವ ವಾಟ್ಸಪ್ ಚಾಟ್ಸ್ ಪರೋಕ್ಷ ಸುಳಿವು ನೀಡಿರುವುದಾಗಿ ಗೊತ್ತಾಗಿದೆ.ಒಂದೆರಡು ವಿಚಾರಣೆಗೆ ಹಾಜರಾಗಿ ಎಂದು ಜಾರಿ ನಿರ್ದೇಶನಾಲಯ ಗೌರವ್ ಆರ್ಯಗೆ ಸಮನ್ಸ್ ಜಾರಿ ಮಾಡಿದೆ. ಪಿಎಂಎಲ್ ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಗೌರವ್ ಆರ್ಯ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ತಿಳಿಸಿದೆ.ನಾನು ಯಾವತ್ತೂ ಸುಶಾಂತ್ ಸಿಂಗ್ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿಸಿರುವ ಗೌರವ್ ಆರ್ಯ, 2017ರಲ್ಲಿ ರಿಯಾ ಚಕ್ರವರ್ತಿಯನ್ನು ಭೇಟಿ ಮಾಡಿರುವುದಾಗಿ ಗೌರವ್ ತಿಳಿಸಿದ್ದು, ಸುಶಾಂತ್ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದೆಲ್ಲಾ ಹೇಳಿರುವುದಾಗಿ ವರದಿ ವಿವರಿಸಿದೆ.

ಹೀಗೆ ದಿನಕಳೆದಂತೆ ಮಾದಕ ವಸ್ತು ಲೋಕದ ಹಲವು ಮುಖಗಳು ಅನಾವರಣಗೊಳ್ಳುತ್ತಿವೆ. ಡ್ರಗ್ ಪೆಡ್ಲರ್ ಗಳು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಜಾಲದ ಕರಾಳ ಮುಖ ಬಯಲಾಗುತ್ತಿದೆ. ಈ ಮಧ್ಯೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿ ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಗೆ ಗಾಂಜಾ, ಡ್ರಗ್ಸ್ ಮತ್ತು ಇತರೇ ಮಾದಕ ದ್ರವ್ಯಗಳು ಪೂರೈಕೆ ಮಾಡುತ್ತಿದ್ದ ಹಲವರನ್ನು ಬಂಧಿಸಿದ್ದಾರೆ ಈಗಷ್ಟೇ.ಬಂಧಿತ ಆರೋಪಿಯನ್ನು ಎಫ್ ಅಹಮದ್– ಈತ ಪೇಜ್ ತ್ರೀ ಸೆಲೆಬ್ರಿಟಿಗಳಿಗೆ ಗಾಂಜಾ, ಆಫಿಮು, ಹೀಗೆಯೇ ಮಾದಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ.ಆರೋಪಿಯಾಗಿರುವ ಅಹಮದ್ ಬಳಿಯಿಂದ ಹತ್ತಾರು ಕೆಜಿಯಷ್ಟು ಗಾಂಜಾವನ್ನು, ಅಫೀಮು ಮತ್ತು ಇನ್ನಿತರ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಈತ ದಿಲ್ಲಿಯಿಂದ ಮುಂಬೈಗೆ, ಮುಂಬೈನಿಂದ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದ.ಗೋವಾ ಮೂಲದವನಾದ ಈತ ಖಾಸಗಿ ರೆಸಾರ್ಟ್ ಒಂದರಲ್ಲಿ ಕಾರು ಚಾಲಕನಾಗಿದ್ದ. ಒಂದು ಗ್ರಾಂಗೆ ಏಳೆಂಟು ಸಾವಿರ ರೂಪಾಯಿಯಷ್ಟು ಬೆಲೆ ಬಾಳುವ ಈ ಮಾದಕ ವಸ್ತುವನ್ನು ಪ್ರತಿಷ್ಠಿತ ವ್ಯಕ್ತಿಗಳಿಗೆ ಪೂರೈಸುತ್ತಿದ್ದ ಈತ.

ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಈಗಷ್ಟೇ. ಆದರೆ ಇದು ನಿರಂತರವಾದ ಜಾಲವಾಗಿದೆ. ಅದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳುತ್ತಿದ್ದಾರೆ ಈಗಷ್ಟೇ.ಅವರು, ಬೆಂಗಳೂರಿನ ಸಿಸಿಬಿಯವರು ನಿರಂತರವಾಗಿ ದಾಳಿ ನಡೆಸಿ ಜಾಲ ಭೇದಿಸುತ್ತಿದ್ದಾರೆ‌. ಬೆಂಗಳೂರು ಹೊರತುಪಡಿಸಿ ವಿವಿಧ ನಗರಗಳಲ್ಲೂ ಸಹ ಡ್ರಗ್ಸ್ ಮಾಫಿಯಾ ಇದೆ. ರಾಜ್ಯಕ್ಕೆ ಆಂಧ್ರಪ್ರದೇಶ ಹಾಗೂ ಗೋವಾದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ. ಅದನ್ನು ಮಟ್ಟ ಹಾಕಲು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದೂ ಅವರ ಉವಾಚವಾಗಿದೆ.

ಮೂವರು ಸ್ಯಾಂಡಲ್‌ವುಡ್‌ ನಟಿಯರ ಆಪ್ತರನ್ನು ವಶಕ್ಕೆ ಪಡೆದ ಸಿಸಿಬಿ-

ಮೂವರು ನಟಿಯರ ಜಾಡು ಹಿಡಿದಿರುವ ಪೊಲೀಸರು, ಆ ನಟಿಮಣಿಯರ ಆಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲಿ ನಟಿ ರಾಗಿಣಿ ಆಪ್ತ ರವಿಶಂಕರ್‌, ನಟಿ ಸಂಜನಾ ಗಲ್ರಾಣಿ ಆಪ್ತ ರಾಹುಲ್ ಹಾಗೂ ನಟಿ ಶರ್ಮಿಳಾ ಮಂಡ್ರೆ ಆಪ್ತ ಕಾರ್ತಿಕ್ ರಾಜ್ ಪ್ರಮುಖರಾಗಿದ್ದಾರೆ..!ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್‌(ಮಾದಕ ವಸ್ತು) ಜಪ್ತಿಯಾದ ಬಳಿಕ ಒಬ್ಬೊಬ್ಬರ ಬುಡಕ್ಕೆ ಬಿಸಿ ಬೀಳುತ್ತಿದೆ.ಅಷ್ಟೇ ಅಲ್ಲದೇ ಆರ್‌ಟಿಒ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕ (SDA) ಆಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಮೊಬೈಲ್ ಪರಿಶೀಲನೆಯನ್ನು ಪೊಲೀಸ್ ರು ಮಾಡಿದಾಗ ಕಾರ್ತಿಕ್‌ ರಾಜ್‌ ನಡುವೆ ನಿರಂತರ ಸಂಪರ್ಕ ಹೊಂದಿರುವುದು ಪತ್ತೆಯಾಯಿತು.ಈ ಬಗ್ಗೆ ಪ್ರಶ್ನಿಸಿದಾಗ ನಿರಂತರ ಸಂಪರ್ಕದಲ್ಲಿದ್ದ ಕಾರ್ತಿಕ್ ರಾಜ್ ಮಾಹಿತಿ ಬಹಿರಂಗವಾಯ್ತು. ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಕಾರ್ತಿಕ್ ರಾಜ್ ಬಳಿ ಕೇಳಬೇಕು ಎಂದಿದ್ದ. ರವಿಶಂಕರ್‌ ಕೊಟ್ಟ ಮಾಹಿತಿಯಂತೆ ಮೊನ್ನೆ ರಾತ್ರಿಯೇ ಕಾರ್ತಿಕ್‌ ರಾಜ್ ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಾರ್ತಿಕ್‌ ರಾಜ್‌ ತಪ್ಪಿಸಿಕೊಂಡಿದ್ದ. ಆದರೂ ಪಟ್ಟು ಬಿಡದ ಸಿಸಿಬಿ ಪೊಲೀಸರು ಕಾರ್ತಿಕ್ ರಾಜ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರಲ್ಲದೇ ಈ ಜನರ ಮಾದಕಲೋಕ ಬಯಲಾಗಿದೆ ಈಗ.ಬಂಧಿತನಾಗಿರುವ ಕಾರ್ತಿಕ್‌ ರಾಜ್‌ ಬೇರಾರೂ ಅಲ್ಲ, ನಟಿ ಶರ್ಮಿಳಾ ಮಾಂಡ್ರೆ ಆಪ್ತ ಸ್ನೇಹಿತ. ಈತನಿಗೆ ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರ ಜೊತೆ ಸಂಪರ್ಕವಿದೆ. ಕಾರ್ತಿಕ್ ರಾಜ್ ಒಬ್ಬ ಹೋಟೆಲ್ ಉದ್ದಿಮಿ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ವಾಸವಾಗಿದ್ದು, ಕೋರಮಂಗಲದಲ್ಲಿ ಮಲ್ಟಿಸ್ಟಾರ್ ಹೋಟೆಲ್ ನಡೆಸುತ್ತಿದ್ದಾನೆ. ಕಾರ್ತಿಕ್ ರಾಜ್ ತಂದೆ ಓರ್ವ ವೈದ್ಯರಾಗಿದ್ದು, ಕಾರ್ತಿಕ್ ರಾಜ್ ಗೆ ಪಾರ್ಟಿಗಳು ಎಂದರೆ ಬಲು ಮೋಹ. ಈ ಬಗ್ಗೆಯೂ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ನಟಿ ರಾಗಿಣಿ ಆಪ್ತ ರವಿಶಂಕರ್‌, ನಟಿ ಶರ್ಮಿಳಾ ಮಾಂಡ್ರೆ ಆಪ್ತ ಕಾರ್ತಿಕ್‌ ರಾಜ್‌ ಬಳಿಕ ಸಂಜನಾ ಗಲ್ರಾಣಿ ಆಪ್ತ ರಾಹುಲ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ರಾಜ್ ನ ವಿಚಾರಣೆ ನಡೆಸುತ್ತಿದ್ದರೂ ರಾಹುಲ್‌ ಮಾತ್ರ ಯಾರೊಬ್ಬರ ಹೆಸರನ್ನೂ ಬಾಯಿ ಬಿಟ್ಟಿಲ್ಲ. ಕಾರ್ತಿಕ್ ರಾಜ್ ಪರಿಚಯ ಎಂದಷ್ಟೇ ಹೇಳುತ್ತಿರುವ ರಾಹುಲ್‌, ಬೇರೆ ಯಾರ ಹೆಸರನ್ನು ಹೇಳುತ್ತಿಲ್ಲ. ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್ ಕೂಡ ಸುಮಾರು 1 ಗಂಟೆಗಳ ಕಾಲ ವಿಚಾರಣೆ ಮಾಡಿ ಪ್ರಾಥಮಿಕ ಮಾಹಿತಿ ಪಡೆದು ಸಿಸಿಬಿ ಕಚೇರಿಯಿಂದ ವಾಪಸ್‌ ಆಗಿದ್ದಾರೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವಿಚಾರಣೆ ನಡೆಸುತ್ತಿದ್ದಾರೆ.ಯಲಹಂಕದ ಜ್ಯುಡಿಷಿನಲ್‌ ಲೇಔಟ್ ನಲ್ಲಿರುವ ರಾಗಿಣಿ ಅಪಾರ್ಟ್ ಮೆಂಟ್ ಗೆ ಸಿಸಿಬಿ ಪೊಲೀಸರಿಂದ ದಾಳಿ ಆಗಿದೆ. ರವಿಶಂಕರ್ ಬಂಧನದ ಹಿನ್ನೆಲೆಯಲ್ಲಿ ರಾಗಿಣಿ ಮನೆ ಮೇಲೆ ದಾಳಿ ನಡೆಸಲು ನ್ಯಾಯಾಲಯದಿಂದ ಡ್ರಗ್ಸ್ ಕೇಸ್ ವಿಚಾರವಾಗಿ ಸಿಸಿಬಿ ಅಧಿಕಾರಿಗಳು ಮೊದಲು ಸರ್ಚ್ ವಾರೆಂಟ್ ಪಡೆದಿದ್ದರು.ರಾಗಿಣಿ, ಶರ್ಮಿಳಾ ಮಾಂಡ್ರೆ ಹಾಗೂ ಮುಖ್ಯವಾಗಿ ಸಂಜನಾ ಎಂಬ ಮಹಾಪಾತ್ರಗಿತ್ತಿಯರು ಈ ಡ್ರಗ್ಸ್ ಆಫೂಸನ ಪಡೆಯುವುದಷ್ಟೇ ಅಲ್ಲದೆ ಈ ಡ್ರಗ್ಸ್ ದಂಧೆಯನ್ನು ನಡೆಸುತ್ತಿದ್ದ ವಿಚಾರ ಇನ್ನೂ ಹೊರಬಿದ್ದಿಲ್ಲ.

-# ಕೆ.ಶಿವು.ಲಕ್ಕಣ್ಣವರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *