

ಸಿದ್ಧಾಪುರದಲ್ಲಿ ಈ ವಾರದ ಒಟ್ಟೂ ಪ್ರಕರಣಗಳ ವರದಿ ಒಂದೇ ದಿನ ಪ್ರಕಟವಾಗಿ ಕೆಲವರಲ್ಲಿ ಗೊಂದಲ ಉಂಟಾಗಿದೆ. ಕಳೆದ ವಾರದ ಪ್ರಕರಣಗಳಲ್ಲಿ ಜ್ವರ ನಿಯಂತ್ರಣಕ್ಕೆ ಬಾರದ ಇಲ್ಲಿಯ ಹಾಳದಕಟ್ಟಾದ ವ್ಯಕ್ತಿಯೊಬ್ಬರನ್ನು ಕಾರವಾರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ಯಲಾಗಿತ್ತು. ಅವರು ಬುಧವಾರ ರಾತ್ರಿ ಮೃತರಾಗಿದ್ದು ಅವರಿಗೆ 56 ವರ್ಷಗಳಾಗಿತ್ತು. ಈ ವ್ಯಕ್ತಿಯ ಶವ ಇಂದು ಸಂಜೆ ಜನ್ಮಸ್ಥಳಕ್ಕೆ ಬರಲಿದ್ದು ಸರ್ಕಾರಿ ನಿಯಮಗಳನುಸಾರ ಪಿ.ಪಿ. ಕಿಟ್ ಧರಿಸಿದ ಇಬ್ಬರು ಶವಸಂಸ್ಕಾರ ಮಾಡಬಹುದಾಗಿದೆ. ಇತರರಿಗೆ ನಿಗದಿತ ಅಂತರದಲ್ಲಿ ಪಾರ್ಥಿವ ಶರೀರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಿದ್ಧಾಪುರದ ಒಟ್ಟೂ144 ಕರೋನಾ ಸೋಂಕಿತರಲ್ಲಿ ಇದು ಮೊದಲ ಸಾವಾಗಿದೆ. ಇವರಿಗೆ ಅಸ್ತಮಾ ತೊಂದರೆ ಇದ್ದುದರಿಂದ ಕರೋನಾ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎನ್ನಲಾಗುತ್ತಿದೆ.
ದೇಶದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಗುರುವಾರ ಸಾರ್ವಕಾಲಿಕ ದಾಖಲೆಯ 95,735 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 44,65,864ಕ್ಕೆ ತಲುಪಿದೆ.

ನವದೆಹಲಿ: ದೇಶದಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಗುರುವಾರ ಸಾರ್ವಕಾಲಿಕ ದಾಖಲೆಯ 95,735 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 44,65,864ಕ್ಕೆ ತಲುಪಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 1,172 ಮಂದಿ ಸಾವನ್ನಪ್ಪಿದ್ದು, ಇದೂವರೆಗೂ ಮಹಾಮಾರಿ ವೈರಸ್ ದೇಶದಲ್ಲಿ 75062 ಮಂದಿಯನ್ನು ಬಲಿಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಇನ್ನು 44,65,864 ಮಂದಿ ಸೋಂಕಿತರ ಪೈಕಿ ದೇಶದಲ್ಲಿ 3471784 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 919018 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶಾದ್ಯಂತ 24 ಗಂಟೆಗಳಲ್ಲಿ 11, 29,756 ಕೋವಿಡ್ ಪರೀಕ್ಷೆ, ಒಟ್ಟಾರೆ 5,29,34, 433 ಸ್ಯಾಂಪಲ್ ಪರೀಕ್ಷೆ: ಐಸಿಎಂಆರ್
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 11, 29,756 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಐಸಿಎಂಆರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 11, 29,756 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಸೆ.9ರವರೆಗೂ 5,29,34, 433 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ. (kpc)
