ಭಟ್ಕಳ ಬಂದರು ಸಮೀಪ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಕರ್ನಾಟಕ ಕರಾವಳಿ ರಕ್ಷಣಾ ಪಡೆ ಶುಕ್ರವಾರ ರಕ್ಷಿಸಿದೆ.
ಮಂಗಳೂರು: ಭಟ್ಕಳ ಬಂದರು ಸಮೀಪ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಕರ್ನಾಟಕ ಕರಾವಳಿ ರಕ್ಷಣಾ ಪಡೆ ಶುಕ್ರವಾರ ರಕ್ಷಿಸಿದೆ.
ಕರ್ನಾಟಕ ಕರಾವಳಿಯಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ ಭಾರತೀಯ ಕರಾವಳಿ ರಕ್ಷಣಾ ಪಡೆ(ಐಸಿಜಿ)ಯ ‘ಕಸ್ತೂರ್ ಬಾ ಗಾಂಧಿ’ ಹಡಗನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಈ ಹಡಗು ಕಳೆದ ರಾತ್ರಿ ಡೇಟಮ್‌ಗೆ ಆಗಮಿಸಿ ಮೀನುಗಾರರೊಂದಿಗೆ ಸಂವಹನ ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಎಂಜಿನ್ ವೈಫಲ್ಯದಿಂದಾಗಿ ಮೀನುಗಾರಿಕಾ ದೋಣಿ ಅಪಾಯಕ್ಕೆ ಸಿಲುಕಿತ್ತು.
ಮೀನುಗಾರಿಕೆ ಉಪನಿರ್ದೇಶಕರ ಮನವಿಯಂತೆ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಇಂದು ಬೆಳಿಗ್ಗೆ ಪೂರ್ಣಗೊಂಡಿದೆ.(kpc)