

ಶಿರಸಿ ಕೇಂದ್ರವನ್ನಾಗಿಸಿಕೊಂಡು 7-8 ತಾಲೂಕುಗಳ ಕದಂಬ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟ ಇತ್ತೀಚಿನ ಒಂದು ದಶಕದ ಹೋರಾಟವಾದರೂ ಉತ್ತರ ಕನ್ನಡ ಜಿಲ್ಲೆಯನ್ನು ಮಧ್ಯವರ್ತಿ ಸ್ಥಳದಲ್ಲಿ ಕೇಂದ್ರಸ್ಥಳವಾಗಿಸಬೇಕೆಂಬ ಬೇಡಿಕೆ ಅರ್ಧಶತಮಾನದಷ್ಟು ಹಳೆಯದು.
ಈ ಹಳೆ ಬೇಡಿಕೆ ಮಧ್ಯಪ್ರದೇಶದಲ್ಲಿ ಜಿಲ್ಲಾಕೇಂದ್ರ ಸ್ಥಾಪನೆ ವಿಚಾರ ಕೈಬಿಟ್ಟು ಈಗ ಶಿರಸಿ ಕೇಂದ್ರಿತ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಕಳೆದ ವಾರ ಶಿರಸಿಯಿಂದ ಪ್ರಾರಂಭಿಸಿದ ಶಿರಸಿ ಜಿಲ್ಲೆಯ ಪತ್ರಚಳವಳಿಯ ಕಾರ್ಯಕ್ರಮ ಸಿದ್ಧಾಪುರದಲ್ಲಿ ನಡೆದಿದೆ. ಇದೇ ಕಾರ್ಯಕ್ರಮ ಉಳಿದ ತಾಲೂಕುಗಳಲ್ಲಿಯೂ ನಡೆಯಲಿದೆ.
ಹೀಗೆ ಕಾರ್ಯಕ್ರಮ, ಹೋರಾಟ, ಚಳವಳಿ ನಂತರ ಕಾನೂನುಹೋರಾಟದ ಮೂಲಕ ಶಿರಸಿ ಜಿಲ್ಲೆಯಾಗುವವರೆಗೆ ಜನಹೋರಾಟ,ಹಕ್ಕೊತ್ತಾಯ ಮಾಡಲಲು ಶಿರಸಿ ಜಿಲ್ಲಾ ಹೋರಾಟ ಸಮೀತಿ ನಿರ್ಧರಿಸಿದೆ. ಭೌಗೋಲಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆ ಭೌಗೋಲಿಕವಾಗಿ ವಿಭಿನ್ನವಾಗಿರುವುದರಿಂದ ಇದನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಿದರೆ ಆಡಳಿತಾತ್ಮಕವಾಗಿ ಹಾಗೂ ಸ್ಥಳೀಯರ ಅನುಕೂಲದ ಕಾರಣಗಳಿಂದ ಅವಶ್ಯ ಎಂದು ಭಾವಿಸಲಾಗಿದೆ.
ಈ ಶಿರಸಿ ಜಿಲ್ಲೆ ಹೋರಾಟ ಸಮೀತಿಯ ಅಧ್ಯಕ್ಷ ಉದ್ಯಮಿ ಉಪೇಂದ್ರ ಪೈ ಈಗ ಹಕ್ಕೊತ್ತಾಯದ ಭಾಗವಾಗಿ ಪತ್ರಚಳುವಳಿ, ನಂತರ ಜನಹೋರಾಟ ಅಂತಿಮವಾಗಿ ಕಾನೂನು ಹೋರಾಟದ ಮೂಲಕ ಶಿರಸಿ ಜಿಲ್ಲೆ ಸ್ಥಾಪನೆಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಸಿದ್ಧಾಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಎಂ.ಎಂ. ಭಟ್, ಸುಬ್ರಾಯ ಮತ್ತೀಹಳ್ಳಿ ಸೇರಿದ ಅನೇಕರು ಘಟ್ಟದ ಮೇಲಿನ ಉತ್ತರ ಕನ್ನಡ ಜಿಲ್ಲೆಯ ಜನರ ಶಿರಸಿ ಜಿಲ್ಲೆ ಬೇಡಿಕೆ ನ್ಯಾಯೋಚಿತ ಈ ಬಗ್ಗೆ ಜನಾಂದೋಲನ ಆಗುವ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ.
ಹೀಗೆ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡುಗಳ ಈ ಶಿರಸಿ ಕದಂಬ ಜಿಲ್ಲೆ ಬೇಡಿಕೆ ಈಗ ಜನಾಂದೋಲನದ ರೂಪ ಪಡೆಯುತ್ತಿದೆ. ಈ ವಿದ್ಯಮಾನ. ಪ್ರಯತ್ನಗಳ ಹಿನ್ನೆಲೆಯಲ್ಲಿ ಸಮಾಜಮುಖಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮೀತಿಯ ಅಧ್ಯಕ್ಷ ಉಪೇಂದ್ರ ಪೈ ರನ್ನು ಮಾತನಾಡಿಸಿದಾಗ ಅದು ಸಂದರ್ಶನದ ರೂಪ ಪಡೆಯಿತು. ಸಮಾಜಮುಖಿ ಯೂಟ್ಯೂಬ್ ಚಾನಲ್ ನ ಈ ಸಂದರ್ಶನ ನೋಡಿ samaajamukhi (kannesh) yOutube ಮತ್ತು ಸಮಾಜಮುಖಿ saamajamukhi.net ಗೆ subscribe ಆಗುವ ಮೂಲಕ ಸಹಕರಿಸಲು ಮನವಿ.
ಸಂದರ್ಶನದ ಲಿಂಕ್- https://samajamukhi.net/2020/09/14/kadamba-a-name-of-sirsi-district/?fbclid=IwAR2jF-nN27218bWW6WKZXBZIwR8jDuJoeFjkCx0LVq_o82wJB1SAi1wlgj8 ಈ ಸಂರ್ಶನ ಏನಿದು ಶಿರಸಿ ಕದಂಬ ಜಿಲ್ಲೆ ಎನ್ನುವ ಸುದ್ದಿಯಲ್ಲಿಯೂ ಲಭ್ಯವಿದೆ.
