

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪ್ರಮುಖರಿಬ್ಬರು ಈ ವಾರ ನಿಧನರಾಗಿದ್ದಾರೆ.

ಅವರಲ್ಲಿ ಇಂದು ನಿಧನರಾದ ಭಟ್ಕಳ ಮುರ್ಡೇಶ್ವರದ ಶ್ರೀಪಾದ ಕಾಮತ್ ಕರಾವಳಿಯ ಕಾಂಗ್ರೆಸ್ ಮುಖಂಡರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಸಚಿವ ಆರ್. ವಿ. ದೇಶಪಾಂಡೆಯವರ ನಿಕಟವರ್ತಿಯಾಗಿದ್ದ ಕಾಮತ್ ಉತ್ತರ ಕನ್ನಡ ಜಿ.ಪಂ. ನ ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಸದಸ್ಯರಾಗಿ ಕೆಲಸಮಾಡಿದ್ದರು.
ಕಳೆದ ಶನಿವಾರ ನಿಧನರಾದ ಮಂಜುನಾಥ ಹೆಗಡೆ ಗುಂಜಗೋಡು ಸಿದ್ಧಾಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ಪ್ರಮುಖ ಅಡಿಕೆ ವರ್ತಕರಾಗಿದ್ದ ಮಂಜುನಾಥ ಹೆಗಡೆ ಗುಂಜಗೋಡು ಜನಪರ ವ್ಯಕ್ತಿಗಳಾಗಿದ್ದು ಅವರ ಮಗ ಪ್ರಕಾಶ್ ಹೆಗಡೆ ಗುಂಜಗೋಡು ಸಿದ್ಧಾಪುರ ತಾಲೂಕಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿದ್ದಾರೆ.ಅವರಗುಪ್ಪಾದಲ್ಲಿ ವಾಸಿಸುತಿದ್ದ ಇವರು ಸಿದ್ಧಾಪುರ ಪ.ಪಂ. ನ ಮಾಜಿ ಅಧ್ಯಕ್ಷ ಪ್ರಕಾಶ ಹೆಗಡೆಯವರೊಂದಿಗೆ ಮೂರು ಜನ ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

