

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಹಳಿಯಾಳ ಮತ್ತು ಭಟ್ಕಳಗಳಲ್ಲಿ ಗಾಂಜಾ ಬೆಳೆ ಮತ್ತು ಮಾರಾಟದ ವ್ಯಕ್ತಿಗಳನ್ನು ಪತ್ತೆಹಚ್ಚಿರುವ ಜಿಲ್ಲಾ ಪೊಲೀಸರು ಹಳಿಯಾಳದ ಕೆ.ಕೆ.ಹಳ್ಳಿಯ ಸೋಮನಿಂಗ ಚೌಹಾಣ್ ಮತ್ತು ಭಟ್ಕಳದ ಮಂಜಪ್ಪ, ಅಣ್ಣಪ್ಪ, ಮಾದೇವ ಎನ್ನುವ ಮಂಕಿ, ಮುರ್ಡೇಶ್ವರ. ಕರಿಕಲ್ ಗಳ ಮೂವರನ್ನು ಬಂಧಿಸಿದ್ದಾರೆ. ಇವರು ಗಾಂಜಾ ಬೆಳೆ, ಮಾರಾಟಗಳಲ್ಲಿ ತೊಡಗಿರುವ ಬಗ್ಗೆ ಸಾಕ್ಷಿ ಸಮೇತ ದಸ್ತಗಿರಿ ಮಾಡಲಾಗಿದೆ.


ವಾಹನ ಶಬ್ಧ ಕಿರಿಕಿರಿ- ಶಿರಸಿ ನಗರದಲ್ಲಿ ಬೈಕ್ ಗಳನ್ನು ಪುನರ್ ವಿನ್ಯಾಸಗೊಳಿಸಿ ಶಬ್ಧ, ಮಾಲಿನ್ಯ ಉಂಟುಮಾಡುವ ಹತ್ತು ವಾಹನಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
