kagodu & lohiya- ಕಾಗೋಡು ಮತ್ತು ಲೋಹಿಯಾ ಪ್ರವೇಶಿಕೆ

ಕಾರವಾರ ಗೊತ್ತಲ್ಲ, ಈತನ ಪ್ರಕಾರ ಕರ್ನಾಟಕದಲ್ಲಿ ಕೋಮು ಸೌಹಾರ್ಧತೆ, ಶಾಂತಿ-ಸುವ್ಯವಸ್ಥೆ ವಿಚಾರದಲ್ಲಿ ಕಾರವಾರವೇ ಅಗ್ರಜ. ಸನ್ 1992 ನೇ ಇಸ್ವಿಯಿಂದ ಈವರೆಗೆ ಸರಿಸುಮಾರು ಮೂರು ದಶಕಗಳ ಅವಧಿಯಲ್ಲಿ ಕಾರವಾರದ ನೆಲದಲ್ಲಿ ಒಂದೂ ಕೋಮುಗಲಭೆ ಆಗಿಲ್ಲ ಎಂದರೆ…. ಅಲ್ಲಿಯ ಸೌಹಾರ್ಧತೆಗೆ ಇದಕ್ಕಿಂತ ಬೇರೆನೂ ದಾಖಲೆ ಬೇಕು?. ಇಂಥ ಕಾರವಾರದಿಂದ ಕಲಿತು, ಅಲ್ಲಿಂದ ಧಾರವಾಡದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಕಲಿತು ಉತ್ತರ ಕನ್ನಡ ಜಿಲ್ಲೆಯ ಶಿರ ಶಿರಸಿಗೆ ಬಂದಿಳಿದಾಗ ಶಿರಸಿ ನನಗೆ ಮೋಹಕ ವಾಗೇ ಕಂಡಿತ್ತು. ಅಲ್ಲಿ ಕೆಲಸಮಾಡುತ್ತಾ ಪತ್ರಕರ್ತರೊಂದಿಗೆ ಒಡನಾಟ ಪ್ರಾರಂಭಿಸಿದಾಗ ಶಿರಸಿಯಲ್ಲಿ ಇಂಥ ಕರಾಳ ಕೋಮುವ್ಯವಸ್ಥೆ, ಜಾತಿ ಪದ್ಧತಿ, ಶೋಷಣೆ, ವೈದಿಕ ಪೈಶಾಚಿಕತೆ ಮಡುಗಟ್ಟಿದೆ ಎಂಬುದೂ ಅರ್ಥವಾಗಿರಲಿಲ್ಲ. ಆದರೆ ಖಾಸಗಿ ಸುದ್ದಿವಾಹಿನಿಗೆ ಕೆಲಸ ಮಾಡುತ್ತಾ ಅಲ್ಲಿಯ ಕಾಲೆಂಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡತೊಡಗಿದೆ ನೋಡಿ. ಆಗ ಭತ್ತ ಗುತ್ತಿಗೆ ಹಿಡಿಯುವ, ಅಡಿಕೆ ಮಾರುವ ವೈದಿಕ ಧೂರ್ತರ ಪೈಶಾಚಿಕತೆಗಳ ಮುಖವಾಡಗಳ ಅನಾವರಣ ನಡೆಯತೊಡಗಿತು.
ನಮ್ಮಂತೆ ಅನೇಕರು ಕೆಲಸಮಾಡುತಿದ್ದ ಶಿರಸಿಯ ಆ ಪ್ರತಿಷ್ಠಿತ! ಕಾಲೇಜಿನಲ್ಲಿ ಸ್ನಾತಕೋತ್ತರ ಓದದ ಅನೇಕರು ಉಪನ್ಯಾಸಕರಾಗಿದ್ದರು.! ನಮ್ಮ ಪತ್ರಿಕೋದ್ಯಮ ವಿಭಾಗ ಸೇರಿದಂತೆ ಕೆಲವು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯದ ಕೆಲವರು ವಿಭಾಗದ ಮುಖ್ಯಸ್ಥರಾಗಿದ್ದರು.!! ಅವರನ್ನು ಸಾಕಿ-ಸಲಹುತಿದ್ದುದು ಅಲ್ಲಿಯ ಆಡಳಿತ ಮಂಡಳಿ.
ಸೋಜಿಗವೆಂದರೆ… ಆ ಕಾಲೇಜಿನ ಅಧ್ಯಕ್ಷರು ಹಿರಿಯರಾದ ಡಾ. ವಿ.ಎಸ್. ಸೋಂದೆಯವರಾದರೆ, ಕಾಂಗ್ರೆಸ್ ಮುಖಂಡರಾಗಿದ್ದ ಶಾಂತರಾಮ ಹೆಗಡೆ ಮತ್ತು ಭೀಮಣ್ಣ ನಾಯ್ಕ ಅಲ್ಲಿಯ ನಿರ್ಧೇಶಕ ಮಂಡಳಿ ಸದಸ್ಯರು. ಇವರ ಆಡಳಿತ ಸಮೀತಿಯಲ್ಲಿ ಬಿ.ಜೆ.ಪಿ., ಆರ್.ಎಸ್. ಎಸ್. ಸಂಪರ್ಕದ ಭತ್ತಗುತ್ತಿಗೆ ಸಚ್ಚಿದಾನಂದ ಹೆಗಡೆ ಬೇನಾಮಿ ಉಪನ್ಯಾಸಕ!
ಇಂಥ ಕೋಮುವಾದಿ ಸಂಘಟನೆಯ ನಿಗದಿತ ಪದವಿಯಿಲ್ಲದ ಅಕ್ರಮ ಉಪನ್ಯಾಸಕ ಸಚ್ಚಿ ಹೆಗಡೆಗೆ ಪ್ರಾಂಶುಪಾಲರಾದಿಯಾಗಿ ಆಡಳಿತ ಮಂಡಳಿಯ ಸಹಕಾರ, ಬೆಂಬಲ. ಅನ್ಯರಿಗೆ ಶಿಸ್ತು,ಆಚಾರ, ಪ್ರಾಮಾಣಿಕತೆ ಹೇಳುವ ಈ ಮತಾಂಧ ಹೆಗಡೆ ನಿಗದಿತ, ನಿರ್ಧಿಷ್ಟ ಪದವಿಯಿಲ್ಲದೆ ಉಪನ್ಯಾಸಕ, ವಿಭಾಗದ ಮುಖ್ಯಸ್ಥ!
ಇಂಥ ಮತೀಯವಾದಿ ಆರ್. ಎಸ್. ಎಸ್.ಅನಾಚಾರಿಯನ್ನು ಆ ಸಂಸ್ಥೆಯಿಂದ ಹೊರದಬ್ಬಿದ್ದು ನಾನೇ ಎನ್ನುವುದು ಶಿರಸಿ ವೈದಿಕ ಅನಾಚಾರ ಸಂಹಾರದ ಒಂದು ಭಾಗ.
ಇಂಥ ಬೂಟಾಟಿಕೆ ದೇಶಭಕ್ತರೊಂದಿಗೆ ನನ್ನ ಕದನ ಪ್ರಾರಂಭವಾದಾಗ ಶಿರಸಿಯ ಬಹುತೇಕ ಪತ್ರಕರ್ತರು ಸಚ್ಚಿದಾನಂದನೆಂಬ ಮತೀಯವಾದಿ ಪತ್ರಕರ್ತನ ಸೋಗಿನ ವೈದಿಕ ಪಾಕಂಡಿಯ ಬೆಂಬಲಕ್ಕಿದ್ದರು. ಇಂಥ ಶಿರಸಿಯಿಂದ ನಾ ಕಲಿತ ಕಾರವಾರದ ಇಂದಿನ ಪ್ರಖ್ಯಾತ ಪತ್ರಿಕೆಯ ಗಂಗಾಧರ ಹಿರೇಗುತ್ತಿಯವರ ಬಾಯಿಂದ ನಾನು ಲೋಹಿಯಾವಾದದ ಬಗ್ಗೆ ಬಹುಹಿಂದೆ ವಿದ್ಯಾರ್ಥಿ ಯಾಗಿದ್ದಾಗಲೇ ಕೇಳಿದ್ದೆ.
ನಂತರ ಲೋಹಿಯಾ ವಾದ, ದೇಶಭಕ್ತಿಯ ಮುಖವಾಡದ ವೈದಿಕ ಮನುವಾದದ ಬಗ್ಗೆ ತಿಳಿಯುತ್ತಾ ಹೋದಂತೆ. ಈಗಿನ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ತಿದ್ದುಪಡಿ ಮಾಡುತ್ತಿರುವ ಭೂಸುಧಾರಣೆ ಮಸೂದೆಗಳ ರಚನೆಗೆ ಕಾರಣವಾದ ಕರ್ನಾಟಕದ ರೈತ ಹೋರಾಟ, ಚಳವಳಿಗಳ ಬಗ್ಗೆ ಓದುತ್ತಾ ಸಾಗಿದೆ. ಅಲ್ಲಿ ಮತ್ತೆ ಲೋಹಿಯಾ ಮೂಖಾಮುಖಿಯಾದರು.
ಲೋಹಿಯಾ ರೈತ ಚಳುವಳಿ ಬಲಪಡಿಸಲು ಕರ್ನಾಟಕಕ್ಕೆ ಬಂದಿದ್ದ ಸಾಗರದ ಕಾಗೋಡನ್ನು ಹುಡುಕಿ ಹೊರಟೆ. ಲೋಹಿಯಾ ನೆಟ್ಟ ಅರಳಿ ಮರ, ಲೋಹಿಯಾ ಇಳಿದ ಸಾಗರದ ರೈಲು ನಿಲ್ಧಾಣ, ಲೋಹಿಯಾರನ್ನು ಕಾಗೋಡಿಗೆ ಕರೆತಂದಿದ್ದ ಎಚ್. ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡರು, ಇವರಿಗೆ ಸಾಹಿತ್ಯಿಕವಾಗಿ, ನೈತಿಕವಾಗಿ ಬೆಂಬಲಕ್ಕೆ ನಿಂತಿದ್ದ ಅನಂತಮೂರ್ತಿ, ಶಾಮಣ್ಣ, ಲಂಕೇಶ್, ತೇಜಶ್ವಿ, ಕುವೆಂಪು ಇತ್ಯಾದಿ ಸಮಾಜವಾದದ ಬೃಹತ್ ವೃಕ್ಷವೇ ನನ್ನನ್ನು ಸೆಳೆದಿತ್ತು. ಹೀಗೆ ಮೂಲೆಯ ಕೋಲಶಿರ್ಸಿಯಿಂದ ಹೊರಟ ನನ್ನ ಪಯಣ ಇನ್ನೊಂದು ತುದಿ ಕಾರವಾರ ನಂತರ ಉತ್ತರ ಕರ್ನಾಟಕ, ಆಮೇಲೆ ಮತ್ತೆ ಮಲೆನಾಡು ಈ ಮಧ್ಯೆ ಹೈದರಾಬಾದು, ದೆಹಲಿ, ಹುಬ್ಬಳ್ಳಿ ಹೀಗೆ ಪ್ರವಾಸಕ್ಕೆ ಹೊರಟವನಂತೆ ಸುತ್ತಾಡಿ ಮತ್ತೆ ಬಂದು ಸೇರಿದ್ದು ನಮ್ಮೂರು ಸಿದ್ಧಾಪುರಕ್ಕೆ.
ಈ ಎರಡು ದಶಕಗಳ ಅವಧಿಯಲ್ಲಿ ಸಂಘಟನೆ ಕಟ್ಟಿದೆ,ಪಾದಯಾತ್ರೆ ಮಾಡಿದೆ. ಪ್ರತಿಭಟನೆ ನಡೆಸಿದೆ. ಟಿ.ವಿ. ಪತ್ರಿಕೆ, ಹೋರಾಟ,ಹವ್ಯಾಸ ಓಡಾಟಗಳ ನಡುವೆ ಎರಡು ಬಾರಿ ಚುನಾವಣೆಯಲ್ಲಿ ಪರಾಜಯ, ಪತ್ರಿಕೆಯ ಸೋಲು, ಸಾಲ,ಸೋಲ, ಶೂಲ ಬರೆದರೆ ಕಾದಂಬರಿಯೂ, ಆತ್ಮಕತೆಯೂ ಒಟ್ಟೊಟ್ಟಿಗೆ ಆವಿರ್ಭವಿಸುವ ಅಪಾಯ.
ಕಾರವಾರಸೌಹಾರ್ದತೆಯ, ಮಾನವೀಯತೆಯ ಊರು ಎಂದು ಹೇಳಿದೆನಲ್ಲಾ ಆ ಊರಿನಲ್ಲಿ ಎಲ್ಲಾ ರಸ್ತೆಗಳೂ ಸಮುದ್ರ ಸೇರುತ್ತವೆ ಎಂದು ಜಯಂತ ಕಾಯ್ಕಿಣಿ ಬರೆದಿದ್ದಾರೆ. ಅಲ್ಲಿ ಮೊದಮೊದಲು ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ರೈತ ಚಳುವಳಿ ನಡೆಯಿತು ಎಂದು ಕಮ್ಯುನಿಸ್ಟ್ ಚರಿತ್ರೆ ಹೇಳುತ್ತದೆ. ಸಾಗರದಲ್ಲಿ ಕಾಗೋಡು ರೈತ ಚಳುವಳಿ ಕಟ್ಟಿದರಲ್ಲ ಅವರು ನಮ್ಮ ಸಿದ್ಧಾಪುರದ ಎಚ್. ಗಣಪತಿಯಪ್ಪ ಇಲ್ಲಿಯ ಹೊಸೂರಿನವರು. ಅವರು ಆಕಾಲದಲ್ಲಿ ರೈತ ಚಳುವಳಿಯೊಂದಿಗೆ ನಡೆಸುತಿದ್ದುದು ಇಂದಿನ ನ್ಯಾಯಪಥ ಹಾಗೂ ನ್ಯಾಯದ ತಕ್ಕಡಿ ಪತ್ರಿಕೆಗಳನ್ನು.
ಸಿದ್ಧಾಪುರದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆಯದ ವಿಷಯಗಳಿಲ್ಲ. ಆದರೆ ರೈತಹೋರಾಟ ಕಟ್ಟಿ, ಭೂಸುಧಾರಣೆ ಕಾನೂನು ಜಾರಿ ಮಾಡಿ ಕೋಟ್ಯಂತರ ಜನರಿಗೆ ಭೂಮಿ, ಭೂಮಿಯ ಪಟ್ಟಾ, ಪಹಣಿ ಕೊಡಿಸಿದರಲ್ಲ ಎಚ್. ಗಣಪತಿಯಪ್ಪ ಅವರ ಮೇಲೆ ಒಂದು ಪುಸ್ತಕ, ದಾಖಲೆ ಮಾಡಿದೆಯಾ ನನ್ನ ಜನಸೇವಕ, ದಿನಕರ ದೇಸಾಯಿಯವರ ಉತ್ತರ ಕನ್ನಡ ಜಿಲ್ಲೆ.
ಉಹೂಂ. ವಿಸ್ಮøತಿ, ವೈಭವೀಕರಣಗಳ ವೈದಿಕ ತರತಮದ ಸಿದ್ಧಾಂತ ಬಡವರನ್ನು ಇತಿಹಾಸದಲ್ಲೂ ದಾಖಲಿಸಲು ಇಚ್ಛಿಸುವುದಿಲ್ಲ. ಇಂಥ ವಿಸ್ಮøತಿಯ ಕಾಲದಲ್ಲಿ ಶ್ರೀಮಂತರಿಗೆ ಸರ್ಕಾರ ನೆರವು ಕೊಟ್ಟರೆ ಕೆಲವು ಜನಪ್ರತಿನಿಧಿಗಳು ಮಾತ್ರ ಸಿಡಿದೆದ್ದು ಸಂಸತ್ ಭವನವನ್ನು ನಡುಗಿಸುತ್ತಾರೆ. ಹೀಗೆ ವಿಧಾನಮಂಡಲ, ಸಂಸತ್ ಭವನ ನಡುಗದೆ ಎಷ್ಟು ಕಾಲವಾಯಿತು.? ಇಂಥ ಬಡವರು, ಬಡವರ ಪರವಾಗಿರುವ ಜನಪ್ರತಿನಿಧಿಗಳು ಮಾತನಾಡದಂತೆ ಮಾಡುವುದೆ ಮಂಡಲ್ ಗೆ ವಿರುದ್ಧವಾದ ಕಮಂಡಲದ, ಅಯೋಧ್ಯೆಯ, ದತ್ತಪೀಟದ ಉಳ್ಳವರ ಠೇಂಕಾರ.
ಈಗ ಕಾಲಪಕ್ವವಾಗುತ್ತಿದೆ. ಮಂದಿರ, ಮಸೀದಿ,ಚರ್ಚು ಬಿಟ್ಟುಬನ್ನಿ, ನಿರುದ್ಯೋಗ, ಬಡತನ ಬುಡಮಟ್ಟ ಕೀಳಬನ್ನಿ ಓ ಬನ್ನಿ ಸಹೋದರರೆ ಕುವೆಂಪು ಅವರ ಆಧ್ಯಾತ್ಮಿಕ, ಜಾತ್ಯಾತೀತ, ಧಾರ್ಮಿಕ, ವಿಶ್ವಮಾನವತೆಯ ಕರೆಗೆ ಓಗೊಟ್ಟು ಎದ್ದು ಬನ್ನಿ ಎನ್ನುವ ಕಾಲ ಬಂದಿದೆ. ಆದರೆ ಸಮಾಜವಾದ, ಮಾಕ್ರ್ಸ, ಲೋಹಿಯಾ ಇವರನ್ನೆಲ್ಲಾ ಓದದೆ ಭಾರತ, ಭಾರತೀಯ ಮೇಲ್ವರ್ಗದ, ಶ್ರೀಮಂತರ ಯಜಮಾನಿಕೆಯ ರಾಜಕಾರಣ ಅರ್ಥವಾಗಲ್ಲ. ಹೊಸ ಹುಡುಗರು ಲೋಹಿಯಾರನ್ನು ಓದಿ ಎನ್ನಲು ಇಷ್ಟೆಲ್ಲಾ ಬರೆಯಬೇಕಾಯಿತು. ಅಂದಹಾಗೆ ಭಾರತೀಯ ತತ್ವಜ್ಞಾನ ಸರಿಯಾಗಿ ಅರ್ಥವಾಗಬೇಕಾದರೆ ಹೊಸಬರಿಗೆ ಸಮಾಜವಾದ, ಲೋಹಿಯಾವಾದ ಅರ್ಥವಾಗಲೇ ಬೇಕು. ಆಗ ಇಂದು ಕೋಲಾಹಲವೆಬ್ಬ್ಬಿಸಿದ ಶಾಸಕರು, ಸಂಸದರು, ಸಂಘಟನೆಗಳು ನಿನ್ನೆ ಮತ್ತೆ ಮಣ್ಣು ಪೂಜಿಸಿದ ಕಾಗೋಡು ಚಳವಳಿಯ ಒಳ ಉರಿ ಎಲ್ಲವೂ ಅರ್ಥವಾಗುತ್ತದೆ. ಆಗ ಸುಳ್ಳುಕೋರರು ಮಾಯವಾಗುತ್ತಾರೆ. -ನಿಮ್ಮ ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *