

ಇಂದು ಸಿದ್ಧಾಪುರದಲ್ಲಿ ಎರಡು ಸಾವುಗಳು ಸಂಭವಿಸಿದ್ದು ಅವುಗಳಲ್ಲಿ ತಂಡಾಗುಂಡಿ ಪಂಚಾಯತ್ ನ ಮಹಿಳೆಯ ಸಾವು ಕರೋನಾ ಸಾವುಗಳ ಪಟ್ಟಿ ಸೇರಿದ್ದರೂ ವಾಸ್ತವದಲ್ಲಿ ಆ 56 ವರ್ಷದ ಮಹಿಳೆ ಕ್ಯಾನ್ಸರ್ ರೋಗಿಯಾಗಿದ್ದರು.

ಈ ಮಹಿಳೆಯ ಸಾವಿನೊಂದಿಗೆ ಸಿದ್ಧಾಪುರದಲ್ಲಿ ಈ ವರೆಗೆ ಮೂರು ಕರೋನಾ ಸಾವುಗಳಾದಂತಾಗಿದೆ. 300 ಜನ ಕರೋನಾ ಸೋಂಕಿತರಲ್ಲಿ ಈಗ ಚಿಕಿತ್ಸೆಯಲ್ಲಿರುವವರೂ ಸೇರಿ ಪ್ರತಿಶತ 90 ಕ್ಕಿಂತ ಹೆಚ್ಚು ಜನ ಗುಣಮುಖರಾದಂತಾಗಿದೆ.
ಷಣ್ಮುಖ ಮಡಿವಾಳ ಇನ್ನಿಲ್ಲ-
ತಾಲೂಕಿನ ಹೊಸಳ್ಳಿ ಮೂಲದ ಸಿದ್ಧಾಪುರ ನಗರದ ನಿವಾಸಿ, ಜೀವವಿಮಾ ಪ್ರತಿನಿಧಿ ಷಣ್ಮುಖ ಮಡಿವಾಳ ಸೋಮುವಾರ ತಡರಾತ್ರಿ ನಿಧನರಾಗಿದ್ದಾರೆ. ವಿಪರೀತ ಮಧುಮೇಹದ ಕಾರಣ ಹೃದಯಾಘಾತ ಉಂಟಾಗಿದ್ದು ಕಳೆದ ವಾರ ಮಧುಮೇಹದ ಚಿಕಿತ್ಸೆಗಾಗಿ ಮಣಿಪಾಲ ತೆರಳಿದ್ದವರು ನಿನ್ನೆಯಷ್ಟೇ ಮನೆಗೆ ಮರಳಿದ್ದರು.
ರಾತ್ರಿ ಊಟದ ನಂತರ ವಿಪರೀತ ಬೆವರಿದಂತಾಗಿದ್ದ ಷಣ್ಮುಖ ಅರೆಕ್ಷಣದಲ್ಲಿ ಅಸುನೀಗಿದರು. ಪಿಗ್ಮಿ ಸಂಗ್ರಹಕಾರರು, ಕಲ್ಲುಮಾರಾಟಗಾರರು, ಜೀವವಿಮೆ ಪ್ರತಿನಿಧಿಯಾಗಿ ಜನಾನುರಾಗಿಯಾಗಿದ್ದ ಷಣ್ಮುಖ ಮಡಿವಾಳ ನಿಧನಕ್ಕೆ ಅವರ ಆತ್ಮೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.
