

ಸಿದ್ಧಾಪುರದಲ್ಲಿ ಕಳೆದ ಎರಡು ದಿವಸಗಳಿಂದ ಹೊಸ ಕರೋನಾ ಪ್ರಕರಣಗಳಿಲ್ಲ ಎನ್ನುವ ಖುಷಿಯ ಸಮಾಚಾರದ ನಡುವೆ ಇಂದು ಎರಡು ಪ್ರಕರಣಗಳು ಕರೋನಾದಿಂದಾದ ಸಾವುಗಳು ಎನ್ನುವುದು ಖಾತ್ರಿಯಾಗಿದೆ. ಸಿದ್ಧಾಪುರದ ತಂಡಾಗುಂಡಿಯ ಕಾನ್ಸರ್ ಪೀಡಿತ ಮಹಿಳೆ ಮಂಗಳೂರಿನಲ್ಲಿ ನಿಧನರಾಗಿದ್ದು ಅವರು ಕರೋನಾ ಪೀಡಿತರಾಗಿದ್ದರು ಎನ್ನುವುದು ಸ್ಪಷ್ಟವಾಗಿದೆ.

ಈ ಪ್ರಕರಣಕ್ಕಿಂತ ವಿಚಿತ್ರ, ವಿಶೇಶ ಸಂಗತಿ ಎಂದರೆ…..
ಇಂದು ಸಿದ್ಧಾಪುರದ ಸೊರಬ ರಸ್ತೆಯ ಷಣ್ಮುಖ ಮಡಿವಾಳ ಎನ್ನುವ ವ್ಯಕ್ತಿ ಹೃದಯಾಘಾತದಿಂದ ನಿಧನರಾಗಿದ್ದು ಆಘಾತಕಾರಿ ಸಂಗತಿಯೆಂದರೆ ಅವರಿಗೆ ಕರೋನಾ ಸೋಂಕು ದೃಢಪಟ್ಟಿರುವ ಬಗ್ಗೆ ಅವರ ಅಂತ್ಯ ಸಂಸ್ಕಾರದ ನಂತರ ಖಾತ್ರಿಯಾಗಿದೆ.
ಈ ಷಣ್ಮುಖ ಮಡಿವಾಳ ಮಧುಮೇಹದಿಂದ ಬಳಲುತಿದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಸುದ್ದಿಯಾಗಿತ್ತು. ಆದರೆ ಈ ಷಣ್ಮುಖ ಮಡಿವಾಳ ಉಡುಪಿಯಲ್ಲಿ ತಮ್ಮ ಗಂಟಲು ದೃವ ಮಾದರಿ ಕೊಟ್ಟಿದ್ದು ಇಂದು ವಿಳಂಬವಾಗಿ ಬಂದ ವರದಿ ಅವರಲ್ಲಿ ಕರೋನಾ ಇರುವುದನ್ನು ದೃಢಪಡಿಸಿದೆ. ಇದರಿಂದಾಗಿ ಹೃದಯಾಘಾತದ ಸಾವೆಂದು ಸೇರಿದ್ದ ಸಿದ್ಧಾಪುರದ ಅಸಂಖ್ಯ ಜನರು ಈಗ ಕರೋನಾ ಭೀತಿಯಿಂದ ಕಂಗಾಲಾಗುವಂತಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
