ತಾಲೂಕಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ, ರಸ್ತೆಗಳ ಮೇಲೆ ಬೀಳುವ ಮರಗಳು, ರಸ್ತೆ ಮುಚ್ಚುವ ಗಿಡಗಂಟಿಗಳು ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತಿದ್ದರೂ ನಿರ್ವಹಣೆ ಆಗುತ್ತಿಲ್ಲ. ಇಂಥ ಮೂಲಭೂತ ಅಗತ್ಯಗಳ ಪೂರೈಕೆಗೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಹೀಗಿದ್ದರೂ ಶಾಸಕರು, ಸಂಸದರು ಮಾತನಾಡುತ್ತಿಲ್ಲ ಯಾಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇಂದು ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಜನಸಾಮಾನ್ಯರಿಗೆ ಸ್ಫಂದಿಸದ ಅಧಿಕಾರಿಗಳು, ಸ್ಥಳಿಯ ಸಂಸದರು, ಶಾಸಕರ ವಿರುದ್ಧ ಮುಂದಿನ 15 ದಿವಸಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
- ತಾಲೂಕಿನಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ನೌಕರರು ಜನಸಾಮಾನ್ಯರಿಗೆ ಕಿರುಕುಳ ನೀಡುತಿದ್ದಾರೆ. ಇವರಿಂದ ತೊಂದರೆಗೊಳಗಾಗುತ್ತಿರುವ ಕೃಷಿಕರು, ಜನಸಾಮಾನ್ಯರನ್ನು ರಕ್ಷಿಸಬೇಕಾದ ಸ್ಥಳಿಯ ಶಾಸಕರು, ಸಂಸದರು ಅಧಿಕಾರಿಗಳಂತೆ, ಅಧಿಕಾರಿಗಳೇ ಜನಪ್ರತಿನಿಧಿಗಳಂತೆ ವರ್ತಿಸುವುದು ನಾಚಿಕೆಗೇಡು, ತಾಲೂಕಿನ ಅನೇಕ ಸಮಸ್ಯೆಗಳು 15 ದಿವಸಗಳಲ್ಲಿ ಬಗೆಹರಿಯದಿದ್ದರೆ ಈ ವ್ಯವಸ್ಥೆಯ ವಿರುದ್ಧ ಉಗ್ರ ಪ್ರತಿಭಟನೆ ಮಾಡುತ್ತೇವೆ. – ವಸಂತ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
- ಭೂಸುಧಾರಣೆ ಕಾನೂನು, ಎ.ಪಿ.ಎಂ. ಸಿ. ಕಾಯಿದೆಯಂಥ ರೈತ ವಿರೋಧಿ, ಜನವಿರೋಧಿ ಕಾನೂನುಗಳನ್ನು ತರುವ ಮೂಲಕ ರಾಜ್ಯ-ಕೇಂದ್ರ ಸರ್ಕಾರಗಳು ಜನವಿರೋಧಿ ಎಂದು ಸಾಬೀತು ಮಾಡುತ್ತಿವೆ.- ಎಸ್,ಆರ್. ಹೆಗಡೆ, ಕುಂಬಾರಕುಳಿ
- ತಾಲೂಕಿನಲ್ಲಿ ಪ್ರವಾಹಪೀಡಿತ ಜನರನ್ನು ಕೇಳುವವರಿಲ್ಲ. ನೆರೆ ಪರಿಹಾರ, ಬೆಳೆ-ಕೊಳೆ ಪರಿಹಾರ ವಿತರಣೆಯಾಗುತ್ತಿಲ್ಲ. ತಾಲೂಕಿನಲ್ಲಿ ಆಡಳಿತ ಪಕ್ಷವೂ ಇಲ್ಲ, ವಿರೋಧಪಕ್ಷವೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಈಗ ವಿರೋಧ ಪಕ್ಷದ ಜವಾಬ್ಧಾರಿಯನ್ನು ಸಮರ್ಪಕವಾಗಿ ನಿಭಾಯಿಸುತಿದ್ದೇವೆ. -ಸಿ.ಆರ್. ನಾಯ್ಕ
- ತಾಲೂಕಿನಲ್ಲಿ ಸಾರಾಯಿ ಮಾರಾಟವನ್ನು ಪ್ರತಿಬಿಂಬಿಸಿ ರಾಜಕೀಯ ಲಾಭ ಪಡೆದ ಜನಪ್ರತಿನಿಧಿಗಳು ಈಗ ಹೆಂಡ,ಅಕ್ರಮ, ಅನೈತಿಕ ವ್ಯಹಾರಗಳ ಮೂಲಕ ಲಾಭ ಮಾಡುತಿದ್ದಾರೆ. ಸಿದ್ಧಾಪುರದ ರಸ್ತೆಗಳು, ಇಲ್ಲಿಯ ಅವ್ಯವಸ್ಥೆ 15 ದಿವಸಗಳ ಕಾಲಮಿತಿಯಲ್ಲಿ ಸರಿಯಾಗದಿದ್ದರೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರದ ದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತೇವೆ -ವಸಂತ ನಾಯ್ಕ