
ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಕೈಗಾರಿಕೆ ವಿವಾದಗಳು ಹಾಗೂ ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2020’ಕ್ಕೆ ಸೋಲುಂಟಾಗಿ ಸರಕಾರಕ್ಕೆ ಮುಖಭಂಗ ಉಂಟಾಯಿತು

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಕೈಗಾರಿಕೆ ವಿವಾದಗಳು ಹಾಗೂ ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2020’ಕ್ಕೆ ಸೋಲುಂಟಾಗಿ ಸರಕಾರಕ್ಕೆ ಮುಖಭಂಗ ಉಂಟಾಯಿತು. ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ. ಇದನ್ನು ನಗದಾಗಿಸಿಕೊಳ್ಳಲು ಪ್ರತಿಪಕ್ಷಗಳು ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳನ್ನು ಬದಲಿಸದಂತೆ ಆಗ್ರಹಿಸಿದವು.

ಬೇರೆ ವಿಧೇಯಕಗಳನ್ನು ಪಾಸ್ ಮಾಡಿಕೊಟ್ಟ ರೀತಿ ಈ ವಿಧೇಯಕದ ಅನುಮೋದನೆಗೆ ಸಹಕರಿಸುವಂತೆ ಆಡಳಿತ ಪಕ್ಷದ ಸದಸ್ಯರು ಕೋರಿದರು. ಆದರೆ ಪಟ್ಟು ಬಿಡದ ಪ್ರತಿಪಕ್ಷಗಳು ಕೆಲ ತಿದ್ದುಪಡಿಗಳನ್ನು ಮುಂದಿಟ್ಟವು.
ವಿಧೇಯಕದ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಲು ‘ಸೆಲೆಕ್ಟ್ ಕಮಿಟಿ’ಗೆ ವಹಿಸಲು ಪ್ರತಿಪಕ್ಷ ಒತ್ತಾಯಿಸಿತು. ಇದಕ್ಕೆ ಸಭಾನಾಯಕರು ಒಪ್ಪಲಿಲ್ಲ. ಕೊನೆಗೆ ಸಂಖ್ಯಾಬಲದಲ್ಲಿ ಹೆಚ್ಚು ಇದ್ದ ಕಾರಣ ಪ್ರತಿಪಕ್ಷ ಮತಕ್ಕೆ ಹಾಕುವಂತೆ ಆಗ್ರಹಿಸಿತು. ಇದಕ್ಕೆ ಒಪ್ಪಿದ ಸಭಾಪತಿಯವರು ಮತ ವಿಭಜನೆ ಪ್ರತಿಕ್ರಿಯೆ ಆರಂಭಿಸಿದರು. ವಿಧೇಯಕದ ಪರವಾಗಿ 14 ಹಾಗೂ ವಿರುದ್ಧವಾಗಿ 26 ಮತಗಳು ಬಂದವು. ಇದರಿಂದ ವಿಧೇಯಕ್ಕೆ 12 ಮತಗಳಿಂದ ಸೋಲುಂಟಾಯಿತು. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
