ಈ ಡಿಜಿಟಲ್ ಯುಗದಲ್ಲಿಯೂ ಅಂತರ್ಜಾಲ ಸೇವೆಯಿಂದ ವಂಚಿತವಾಗಿರುವ ಅದೆಷ್ಟೋ ಗ್ರಾಮಗಳಿವೆ. ಅಂತಹ ಗ್ರಾಮಗಳ ಪೈಕಿ ಕಾರವಾರದ ವೈಲ್ವಾಡ ಗ್ರಾಮವೂ ಒಂದು.
ಕಾರವಾರ: ಈ ಡಿಜಿಟಲ್ ಯುಗದಲ್ಲಿಯೂ ಅಂತರ್ಜಾಲ ಸೇವೆಯಿಂದ ವಂಚಿತವಾಗಿರುವ ಅದೆಷ್ಟೋ ಗ್ರಾಮಗಳಿವೆ. ಅಂತಹ ಗ್ರಾಮಗಳ ಪೈಕಿ ಕಾರವಾರದ ವೈಲ್ವಾಡ ಗ್ರಾಮವೂ ಒಂದು.
ಈ ಗ್ರಾಮದಲ್ಲಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲವಿರಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ದೊರೆಯುವುದೂ ಕಷ್ಟ ಸಾಧ್ಯ. ಹೀಗಿರುವಾಗ ಕೋವಿಡ್-19 ಪರಿಸ್ಥಿತಿಯಲ್ಲಿ ಆನ್ ಲೈನ್ ತರಗತಿಗಳನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ. https://m.youtube.com/watch?v=1S-j754l4qM&t=32s
ಅಭಿಷೇಕ್ ನಾಯ್ಕ್ ಎಂಬ 7 ನೇ ತರಗತಿಯ ವಿದ್ಯಾರ್ಥಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಕಾರವಾರದ ಬಳಿ ಇರುವ ತಮ್ಮ ಸಂಬಂಧಿಕರ ಮನೆಗೆ ಬರಬೇಕಿತ್ತು. ಇದು ಈ ವಿದ್ಯಾರ್ಥಿಯ ಪರಿಸ್ಥಿತಿಯಷ್ಟೇ ಅಲ್ಲದೇ ವೈಲ್ವಾಡ, ಬೊಡ್ಜುಗ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿರುವ ಅನೇಕ ವಿದ್ಯಾರ್ಥಿಗಳ ಸ್ಥಿತಿಯೂ ಆಗಿತ್ತು. https://m.youtube.com/watch?v=5o3h3H7WV9Q&t=340s
ಆದರೆ ಗಿರಿಜಾಬಾಯಿ ಸೈಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ಸಾಗರ್ ನಾಯ್ಕ್ ತಮ್ಮ ಮನೆಯಲ್ಲಿರುವ ಖಾಸಗಿ ಬ್ರಾಡ್ ಬ್ಯಾಂಡ್ ನ ಇಂಟರ್ ನೆಟ್ ಕನೆಕ್ಷನ್ ನಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ ನೆಟ್ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಅಂದರೆ ಗ್ರಾಮದ ವಿದ್ಯಾರ್ಥಿಗಳಿಗೆ ತಮ್ಮ ಇಂಟರ್ ನೆಟ್ ಸಂಪರ್ಕದ ಪಾಸ್ವರ್ಡ್ ನೀಡಿದ್ದಾರೆ. ಈ ಮೂಲಕ ಸಾಗರ್ ನಾಯ್ಕ್ ಮನೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಇಲ್ಲದೇ ಆನ್ ಲೈನ್ ತರಗತಿಗಳಿಗೆ ಹಾಜರಾಗಬಹುದಾಗಿದೆ
ಕೋವಿಡ್-19 ಕಾರಣದಿಂದಾಗಿ ಶಾಲೆಗಳು ಆನ್ ಲೈನ್ ತರಗತಿಗಳನ್ನು ನಡೆಸುತ್ತಿವೆ. ಇಲ್ಲಿನ ವಿದ್ಯಾರ್ಥಿಗಳು ಅಡೆತಡೆ ಇಲ್ಲದೇ ತರಗತಿಗಳಿಗೆ ಹಾಜರಾಗಬೇಕು ಎಂದು ಬಯಸಿದೆ. ನನ್ನ ಮನೆಯಲ್ಲಿರುವ ಇಂಟರ್ ನೆಟ್ ನ್ನು ಅವರಿಗೆ ಉಚಿತವಾಗಿ ನೀಡುವಂತೆ ಮಾಡಿದೆ ಎಂದು ಸಾಗರ್ ನಾಯ್ಕ್ ಹೇಳುತ್ತಾರೆ.
ಶಾಲೆಗಳಿಂದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ವರೆಗೆ ಎಲ್ಲರಿಗೂ ಸಾಗರ್ ನಾಯ್ಕ್ ಮನೆಯಲ್ಲಿರುವ ಅಂತರ್ಜಾಲ ಅತ್ಯಂತ ಉಪಯುಕ್ತವಾಗಿದೆ.
“ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆ ಲಭ್ಯತೆಯಲ್ಲಿ ಈಗಲೂ ಬಹಳ ವ್ಯತ್ಯಾಸವಿದೆ. ಸಿದ್ದಾರ್ ಗ್ರಾಮ ಹಾಗೂ ದೇವರಮಕ್ಕಿ ಗ್ರಾಮಗಳ ನಡುವೆ ಅಂತರ್ಜಾಲ ಸೇವೆಯೇ ಇಲ್ಲ. ಈ ಮಧ್ಯೆ ನದಿ ಹರಿಯುತ್ತಿದೆ. ವೈಲ್ವಾಡ 100 ಮನೆಗಳಿರುವ ಗ್ರಾಮವಾಗಿದೆ.
ಅಂತರ್ಜಾಲ ಸೇವೆ ಪಡೆಯಲು ಹೆಚ್ಚು ಹಣ ನೀಡಿ ಸುಮಾರು 1 ಕಿ.ಮೀ ದೂರದಿಂದ ಕೇಬಲ್ ಎಳೆಸಲಾಗಿದೆ. ಇಲ್ಲಿ ಅಂತರ್ಜಾಲ ಸೇವೆ ಇರುವ ಏಕೈಕ ಮನೆ ನಮ್ಮದು, ವಿದ್ಯಾರ್ಥಿಗಳ ಕಷ್ಟವನ್ನು ಅರ್ಥಮಾಡಿಕೊಂಡು ಸಹಕಾರ ನೀಡುತ್ತಿರುವುದಕ್ಕೆ ಸಂತಸವಿದೆ ಎನ್ನುತ್ತಾರೆ ವೈಲ್ವಾಡಾ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವ ಸನತ್ ನಾಯ್ಕ್. (kpc)