

ವೃತ್ತಿಯಿಂದ ಜವಾನರಾಗಿ ಪ್ರವೃತ್ತಿಯಿಂದ ಸಾಹಿತಿ, ಯಕ್ಷಗಾನ ಪ್ರಸಾದನ ಕಲಾವಿದರಾಗಿ ಹೆಸರುಮಾಡಿದ್ದ ಸಿದ್ಧಾಪುರ ಹಾರ್ಸಿಕಟ್ಟಾದ ವಿಶ್ವನಾಥ ಶೇಟ್ ಇಂದು ನಿಧನರಾಗಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದರೂ ತಮ್ಮ ಹವ್ಯಾಸ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಶೇಟ್ ಇಂದು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.

ಕೊಂಕಣಿಯಲ್ಲಿ ಶ್ರೀರಾಮಚರಿತ ರಚಿಸಿದ್ದ ವಿಶ್ವನಾಥ್ ಶೇಟ್ ಯಕ್ಷಗಾನ ಪಾತ್ರಧಾರಿ, ಪ್ರಸಾದನ ಕಲಾವಿದ, ಸಾಹಿತಿಯಾಗಿ ಪ್ರಸಿದ್ಧರಾಗಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಶಸ್ತಿ-ಪುರಸ್ಕಾರಕ್ಕೆ ಬಾಜನರಾಗಿದ್ದ ವಿಶ್ವನಾಥ್ ಶೇಟ್ ತೀರಾ ಬಡತನದ ಕಾರಣಕ್ಕೆ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಜವಾನರಾಗಿ ದುಡಿದು ಸೇವಾವಧಿಯಲ್ಲಿ ನಿವೃತ್ತರಾದ ನಂತರ ಕೂಡಾ ಸಾಹಿತ್ಯ ರಚನೆಯಲ್ಲಿ ಕಾಯಾವಾಚಾ ಮನಸಾ ದುಡಿದಿದ್ದರು. ಇವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

