

ಎಂ ಜಿ ಸಿ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿ
“ಗಾಂಧಿ ನಮ್ಮೊಳಗಿನ ಎಚ್ಚರವಾಗಬೇಕಾಗಿದೆ. ನೈತಿಕತೆಯ ಕಾವಲುಗಾರನಾಗಬೇಕಾಗಿದೆ.”
ಸಿದ್ದಾಪುರದ ಎಂ ಜಿ ಸಿ ಕಲಾ, ವಾಣಿಜ್ಯ ಮತ್ತು ಜಿ ಎಚ್ ಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿಯವರ 151ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 116ನೇ ಜಯಂತಿಯನ್ನು ಇಬ್ಬರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ಪ್ರಾರಂಭಿಸಲಾಯಿತು. ನಂತರ ಗಾಂಧೀಜಿಯವರ ವಿಚಾರಗಳ ಪ್ರಸ್ತುತೆ ಕುರಿತು ವೆಬಿನಾರ್ ಕಾರ್ಯಕ್ರಮವನ್ನು ನಡೆಸಲಾಯಿತು. ಮಹಾವಿದ್ಯಾಲಯದ ಐಕ್ಯುಎಸಿ ಮತ್ತು ಎನ್ ಎಸ್ ಎಸ್ ಜಂಟಿಯಾಗಿ ಈ ಕಾರ್ಯಕ್ರಮವನ್ನುಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿಠ್ಠಲ ಭಂಡಾರಿ “ಭಾರತೀಯ ಜನತೆಗೆ ನಾನು ರೂಪಿಸಿಕೊಟ್ಟ ದಾರಿ ದ್ವೇಷದ ದಾರಿಯಲ್ಲ, ಅದು ಪ್ರೇಮದ ದಾರಿ” ಎನ್ನುವ ಗಾಂಧೀಜಿಯವರ ಮಾತನ್ನು ಉಲ್ಲೇಖಿಸಿ ಬದುಕಿನ ಕೊನೆಯವರೆಗೂ ನಡೆ ಮತ್ತು ನುಡಿಯ ನಡುವೆ ಘನಿಷ್ಠ ಸಂಬಂಧವನ್ನು ಉಳಿಸಿಕೊಂಡಿದ್ದ ಗಾಂಧಿಜಿಯವರನ್ನು ವಿಮರ್ಶಿಸದೇ ಮಹಾತ್ಮನೆಂದು ಆರಾಧಿಸುವ ಮತ್ತು ಅವರನ್ನು ಪೂರ್ವಾಗ್ರಹಪೂರಿತವಾಗಿ ಓದದೆ ಇಡಿಯಾಗಿ ತಿರಸ್ಕರಿಸುವ ಎರಡು ಅತಿಗಳನ್ನು ಬಿಟ್ಟು ನಮ್ಮ ಕಾಲದ ಬಿಕ್ಕಟ್ಟು ಮತ್ತು ಅದರ ಪರಿಹಾರಕ್ಕೆ ಗಾಂಧಿ ಚಿಂತನೆಯನ್ನು ಬಳಸಿಕೊಳ್ಳಲು ಮುಂದಾಗಬೇಕಾಗಿದೆ. ಹಿಂಸೆ ಮೃಗನಿಯಮ. ಅಹಿಂಸೆ ಮನುಷ್ಯ ನಿಯಮ. ಹಗೆತನದ ಹಾಡಿನಿಂದ ಮನುಕುಲಕ್ಕೆ ಯಾವ ಲಾಭವೂ ಇಲ್ಲ. ಸಹಬಾಳ್ವೆ, ಅಹಿಂಸೆ ಮತ್ತು ಸತ್ಯಾಗ್ರಹವನ್ನು ಯಾರು ಬೇಕಾದರು ಅನುಸರಿಸಬಹುದಾದ ಹೋರಾಟವಾಗಿದೆ. ಮಹಿಳೆಯ ಮೇಲಿನ ದಾಳಿ, ದಲಿತರ ಮೇಲಿನ ದೌರ್ಜನ್ಯ, ರೈತರ ಸಂಕಷ್ಟ ಮತ್ತ್ಟು ಅಭಿವೃದ್ಧಿಯ ಕೇಂದ್ರೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಗಾಂಧಿ ನಮ್ಮೊಳಗಿನ ಎಚ್ಚರವಾಗಬೇಕಾಗಿದೆ. ನೈತಿಕ ಕಾವಲುಗಾರನಾಗಬೇಕಾಗಿದೆ.” ಎಂದು ಹೇಳುತ್ತಾ – “ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಹಾಗೂ ಧೋರಣೆಗಳು, ಸಮಾಜದ ಸ್ವಾಸ್ಥ್ಯ ಮತ್ತು ಮೌಲ್ಯಗಳು, ಆರ್ಥಿಕ ನೀತಿ ನಿರೂಪಣೆಗಳು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಚಾರಿತ್ರ್ಯ” ಹೀಗೆ- ಎಲ್ಲ ರಂಗಗಳಲ್ಲಿ ಹೇಗೆ ಪ್ರಸ್ತುತವಾಗುತ್ತವೆ ಎಂದು ವಿಶ್ಲೇಷಿಸಿದರು.

ಉಪಪ್ರಾಚಾರ್ಯರಾದ ಡಾ. ಎಸ್.ಎಸ್ ಗುತ್ತಿಕರ್ ಪ್ರಾಸ್ತಾವಿಕವಾಗಿ ಮಾತನಾಡಿ “ಇಬ್ಬರೂ ಮಹಾನ್ ವ್ಯಕ್ತಿಗಳ ರಾಷ್ಟ್ರನಿಷ್ಠೆ, ಪ್ರಾಮಾಣಿಕತೆ, ಸಚ್ಚಾರಿತ್ರ್ಯ ಮತ್ತು ನೈತಿಕ ಮೌಲ್ಯಗಳು ಜನರ ಮೇಲೆ ಹೇಗೆ ಪ್ರಭಾವ ಬೀರಿದ್ದವು ಎಂದು ವಿವರಿಸಿದರು.
ಪ್ರಾಚಾರ್ಯ ಶ್ರೀಮತಿ ಜಯಂತಿ ಶಾನಭಾಗ ಅಧ್ಯಕ್ಷತೆ ವಹಿಸಿ ‘ಗಾಂಧೀಜಿ ಮತ್ತು ಶಾಸ್ತ್ರಿಗಳಂತಹ ವ್ಯಕ್ತಿಗಳ ಜೀವನ ಶಿಸ್ತು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಜನ್ಮದಿನದ ಆಚರಣೆಗಳಿಗೆ ಅರ್ಥ ಬರುತ್ತದೆ, ಅದಿಲ್ಲದಿದ್ದಲ್ಲಿ ಆಚರಣೆ ಒಂದು ಶೋಕಿಯಾಗುತ್ತದೆ’ ಎಂದರು. ಡಾ. ದೇವಾನಾಂಪ್ರಿಯ ಎಂ ಸ್ವಾಗತಿಸಿದರು ಮತ್ತು ಶ್ರೀ ಸಾಗರ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾಲೇಜಿನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು ಮತ್ತು ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಹಾಜರಿದ್ದರು.
ಆಯ್ಕೆ-
ಸಿದ್ದಾಪುರ: ತಾಲೂಕಿನ ನ್ಯಾಯಬೆಲೆ ಅಂಗಡಿಯ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಲಿಂಗರಾಜ್ ಜಿ.ನಾಯ್ಕ ಕೋಲಸಶಿರ್ಸಿ,ಉಪಾಧ್ಯಕ್ಷರಾಗಿ ಮಂಜಪ್ಪ ಎಂ.ನಾಯ್ಕ ಹಸವಂತೆ, ಕಾರ್ಯದರ್ಶಿಯಾಗಿ ಅಶೋಕ ಡಿ.ನಾಯ್ಕ ಬೇಡ್ಕಣಿ ಹಾಗೂ ಸಹಕಾರ್ಯದರ್ಶಿಯಾಗಿ ಪರಶುರಾಮ ಡಿ.ನಾಯ್ಕ ಅಳಗೋಡ ಆಯ್ಕೆ ಆಗಿದ್ದಾರೆ.
ಸಿದ್ದಾಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ತೋಟಗಾರಿಕಾ ಇಲಾಖೆ ಗಳ ಸಹಯೋಗದಲ್ಲಿ ಪೋಷಣಾ ಮಾಸಾಚರಣೆಯಕಾರ್ಯಕ್ರಮದ ಸಮಾರೋಪ ಸಮಾರಂಭಕಾರ್ಯಕ್ರಮ ಕೃಷಿ ಇಲಾಖೆಯ ಸಭಾಭವನದಲ್ಲಿ ನಡೆಯಿತು.
ಸಿಡಿಪಿಓ ಸುಶೀಲಾ ಮೋಗೆರ ಮಾತನಾಡಿ ಮಹಿಳೆ ಗರ್ಭಿಣಿಆದಾಗಿಂದಒಂದುಸಾವಿರ ದಿನಗಳ ವರೆಗಿನ ಪೋಷಣೆ ನಮ್ಮಕರ್ತವ್ಯ. ತಾಯಿ ಮಗುವಿನ ಆರೋಗ್ಯ, ರಕ್ತಹೀನತೆತಡೆಗಟ್ಟುವುದು, ತಾಯಿ ಶಿಶು ಮರಣ ನಿವಾರಿಸುವುದು. ಪೋಷ್ಠಿಕವಾದಆಹಾರ ನೀಡುವುದುಕಾರ್ಯಕ್ರಮದಉದ್ಧೇಶ. ಪ್ರತಿಗ್ರಾಮ ಪಂಚಾಯತಿ ಮತ್ತು ಪಟ್ಟಣದಲ್ಲಿಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಡೆಸಲಾಗಿದೆ. ಪಾಲಕರು ಪೋಷಕರು ಪೌ ಷ್ಠಿಕವಾದಆಹಾರ ಸೇವನೆಯತ್ತ ಗಮನ ಹರಿಸಬೇಕುಎಂದರು.
ಕೃಷಿ ಇಲಾಖೆಯ ಪ್ರಶಾಂತ್, ಶಿಕ್ಷಣ ಇಲಾಖೆಯ ಕೆ.ಬಿ.ನಾಯ್ಕ, ತೋಟಗಾರಿಕೆಇಲಾಖೆಯ ಕಾಳಪ್ಪ ವೇದಿಕೆಯಲ್ಲಿದ್ದರು.





